Advertisement

65 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್

10:09 PM Jul 01, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಕೊರೊನಾದಿಂದ ಗುಣಮುಖರಾದ 65 ಸೋಂಕಿತರು ಡಿಸಾcರ್ಜ್‌ ಆಗಿದ್ದಾರೆ. ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 40, ಹರಿಹರದಲ್ಲಿ 5, ಜಗಳೂರು 1, ಚನ್ನಗಿರಿಯಲ್ಲಿ 9 ಹೊನ್ನಾಳಿಯಲ್ಲಿ 8, ಹೊರ ಜಿಲ್ಲೆಯ ಇಬ್ಬರು ಒಳಗೊಂಡಂತೆ 65 ಸೋಂಕಿತರು ಗುಣಮುಖರಾಗಿದ್ದಾರೆ.

Advertisement

ಜಿಲ್ಲೆಯಲ್ಲಿ ಬುಧವಾರ 73 ಜನರಲ್ಲಿ ಸೋಂಕು ಪತ್ತೆಯಾಗಿದೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 42 ಪ್ರಕರಣ ಪತ್ತೆಯಾಗಿವೆ. ಹರಿಹರದಲ್ಲಿ 7, ಜಗಳೂರಿನಲ್ಲಿ 2, ಚನ್ನಗಿರಿಯಲ್ಲಿ 12, ಹೊನ್ನಾಳಿಯಲ್ಲಿ 10 ಜನರು ಸೇರಿದಂತೆ 73 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 26,149, ಹರಿಹರದಲ್ಲಿ 6784, ಜಗಳೂರಿನಲ್ಲಿ 2673, ಚನ್ನಗಿರಿಯಲ್ಲಿ 6211, ಹೊನ್ನಾಳಿಯಲ್ಲಿ 6278, ಹೊರ ಜಿಲ್ಲೆಯ 1476 ಜನರು ಸೇರಿದಂತೆ ಈವರೆಗೆ ಒಟ್ಟು 49,571 ಜನರು ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 25,129, ಹರಿಹರದಲ್ಲಿ 6620, ಜಗಳೂರಿನಲ್ಲಿ 2694, ಚನ್ನಗಿರಿಯಲ್ಲಿ 5991, ಹೊನ್ನಾಳಿಯಲ್ಲಿ 5746, ಹೊರ ಜಿಲ್ಲೆಯ 1376 ಜನರು ಸೇರಿದಂತೆ 47,556 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1464 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಕೊರೊನಾದಿಂದ 12 ಜನರು ಮೃತಪಟ್ಟಿದ್ದಾರೆ. ಹೊನ್ನಾಳಿ ತಾಲೂಕಿನ ಕೋಟೆಮಲ್ಲೂರು ಗ್ರಾಮದ 50 ವರ್ಷದ ಮಹಿಳೆ, ಹರಿಹರ ತಾಲೂಕಿನ ಹರಗನಹಳ್ಳಿ ಗ್ರಾಮದ 65 ವರ್ಷದ ವೃದ್ಧ, ದಾವಣಗೆರೆಯ ಕುಂದುವಾಡ ರಸ್ತೆ ನಿವಾಸಿ 68 ವರ್ಷದ ವೃದ್ಧೆ, ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ 71 ವರ್ಷದ ವೃದ್ಧ, ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಕ್ಯಾಂಪ್‌ನ 65 ವರ್ಷದ ವೃದ್ಧೆ, ಚನ್ನಗಿರಿಯ ಕಗತ್ತೂರು ರಸ್ತೆ ನಿವಾಸಿ 55 ವರ್ಷದ ಮಹಿಳೆ, ಹೊನ್ನಾಳಿ ಪಟ್ಟಣದ ತಿಮ್ಮೇನಹಳ್ಳಿ ರಸ್ತೆ ನಿವಾಸಿ 80 ವರ್ಷದ ವೃದ್ಧ, ದಾವಣಗೆರೆ ತಾಲೂಕಿನ ಕನಗೊಂಡನಹಳ್ಳಿ ಗ್ರಾಮದ 62 ವರ್ಷದ ವೃದ್ದೆ, ದಾವಣಗೆರೆಯ ಕೆ.ಬಿ. ಬಡಾವಣೆ ಮುಖ್ಯ ರಸ್ತೆ ನಿವಾಸಿ 73 ವರ್ಷ ವೃದ್ಧೆ, ಹರಿಹರದ ಶಿವಮೊಗ್ಗ ರಸ್ತೆ ನಿವಾಸಿ 56 ವರ್ಷದ ವ್ಯಕ್ತಿ, ಹರಿಹರದ ಕಾಳಿದಾಸನಗರದ 60 ವರ್ಷದ ವೃದ್ಧೆ, ತಾಲೂಕಿನ ಪಾಮೇನಹಳ್ಳಿಯ 45 ವರ್ಷದ ವ್ಯಕ್ತಿ ಮೃತಪಟ್ಟವರು.

ಜಿಲ್ಲೆಯಲ್ಲಿ ಈವರೆಗೆ 553 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 74 ಸೋಂಕಿತರು ಸಾಮಾನ್ಯ, 305 ಸೋಂಕಿತರು ಆಕ್ಸಿಜನ್‌, 16 ಸೋಂಕಿತರು ಎನ್‌ಐವಿ, 45 ಸೋಂಕಿತರು ವೆಂಟಿಲೇಟರ್‌ 20 ಸೋಂಕಿತರು ವೆಂಟಿಲೇಟರ್‌ ರಹಿತ, 220 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 154 ಸೋಂಕಿತರು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next