Advertisement

ಶೈಕ್ಷಣಿಕ ಉದ್ದೇಶಕ್ಕಷ್ಟೇ ಪಿಸಿ, ಟ್ಯಾಬ್ಲೆಟ್‌ ಬಳಸಿ

09:36 PM Jun 24, 2021 | Team Udayavani |

ದಾವಣಗೆರೆ: ನಗರ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಣೆ ಹಾಗೂ ಡಿಜಿಟಲ್‌ ಅಂತರವನ್ನು ಅಳಿಸಿಹಾಕಬೇಕೆಂಬ ಉದ್ದೇಶದಿಂದ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಿಸಿ ಟ್ಯಾಬ್ಲೆಟ್‌ ವಿತರಿಸುತ್ತಿದೆ.

Advertisement

ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಕರೆ ನೀಡಿದರು. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಪಿಸಿ ಟ್ಯಾಬ್ಲೆಟ್‌ ವಿತರಣಾ ಕಾರ್ಯಕ್ರಮ ಮತ್ತು ಸ್ಮಾರ್ಟ್‌ ಕ್ಲಾಸ್‌ ಕೊಠಡಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಿಸಿ ಟ್ಯಾಬ್ಲೆಟ್‌ಗಳನ್ನು ಆಟಿಕೆಗಳಾಗಿ ಬಳಸದೆ ಶೈಕ್ಷಣಿಕವಾಗಿ ಬಳಸಿಕೊಂಡು ಉನ್ನತ ಮಟ್ಟದ ಶಿಕ್ಷಣವನ್ನು ಪಡೆದು ಸದುಪಯೋಗ ಮಾಡಿಕೊಳ್ಳಬೇಕು. ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಣಕಾಸು ತೊಂದರೆಯಿಂದ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲಾಗುತ್ತಿಲ್ಲ.

ಈ ಕಾರಣದಿಂದ ಶೇ. 80 ರಷ್ಟು ಬಡವರು, ಹಿಂದುಳಿದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ಅವರ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದೆಂದು ಸರ್ಕಾರ ಪಿಸಿ ಟ್ಯಾಬ್ಲೆಟ್‌ ನೀಡಿ ಪ್ರೋತ್ಸಾಹಿಸುತ್ತಿದೆ ಎಂದರು.

ಮಹಾನಗರ ಪಾಲಿಕೆ ಮಹಾಪೌರ ಎಸ್‌.ಟಿ. ವೀರೇಶ್‌ ಮಾತನಾಡಿ, ನಾನಾ ಹೋರಾಟಗಳ ತಳಪಾಯದಿಂದ ಇಂದು ಸರ್ಕಾರಿ ಪ್ರಥಮದರ್ಜೆ ಕಾಲೇಜು ರಾಜ್ಯದಲ್ಲೇ ಎರಡನೆ ಅತೀ ದೊಡ್ಡ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮೊದಲ ಹಂತಕ್ಕೆ ತಲುಪಬೇಕೆಂದರೆ ವಿದ್ಯಾರ್ಥಿಗಳ ಸಹಕಾರ ಬೆಟ್ಟದಷ್ಟಿದೆ. ವಿದ್ಯಾರ್ಥಿಗಳು ಅಮೂಲ್ಯ ಸಮಯವನ್ನು ಅನಾವಶ್ಯಕವಾಗಿ ವ್ಯರ್ಥ ಮಾಡದೇ ಸರ್ಕರದ ಸವಲತ್ತುಗಳನ್ನು ಬಳಸಿಕೊಂಡು ಕಾಲೇಜಿಗೂ, ಜಿಲ್ಲೆಗೂ ಕೀರ್ತಿ ತರ ಬೇಕು ಎಂದು ಕಿವಿಮಾತು ಹೇಳಿದರು.

Advertisement

ಶಿವಮೊಗ್ಗ ವಲಯ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪೊ| ವೀರಭದ್ರಯ್ಯ ಕೆ.ಸಿ., ಮಹಾನಗರ ಪಾಲಿಕೆ ಸದಸ್ಯ ಜಿ. ಮಂಜುನಾಥ ಗೌಡ, ಐಕ್ಯೂಎಸಿ ಸಂಚಾಲಕ ಪೊ| ಟಿ. ವೀರೇಶ, ಐ.ಟಿ ವಿಭಾಗದ ಸಂಚಾಲಕ ಡಾ| ಮಂಜುನಾಥ ಜೆ.ಎಂ. ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next