ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಕೊರೊನಾದಿಂದ 165 ಸೋಂಕಿತರು ಗುಣಮುಖರಾಗಿ ಡಿಸಾcರ್ಜ್ ಆಗಿದ್ದಾರೆ. ಸತತ ಎರಡನೇ ದಿನವೂ ಸೋಂಕಿತರಗಿಂತಲೂ ಗುಣಮುಖರಾದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 85 , ಹರಿಹರದಲ್ಲಿ 25, ಜಗಳೂರಿನಲ್ಲಿ 19, ಚನ್ನಗಿರಿಯಲ್ಲಿ 21, ಹೊನ್ನಾಳಿಯಲ್ಲಿ 5 ಹಾಗೂ ಹೊರ ಜಿಲ್ಲೆಯ 10 ಜನರು ಒಳಗೊಂಡಂತೆ 165 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 119 ಜನರಲ್ಲಿ ಸೋಂಕು ಪತ್ತೆಯಾಗಿದೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 74 ಪ್ರಕರಣ ಪತ್ತೆಯಾಗಿವೆ.
ಹರಿಹರದಲ್ಲಿ 10, ಜಗಳೂರಿನಲ್ಲಿ 1, ಚನ್ನಗಿರಿಯಲ್ಲಿ 21, ಹೊನ್ನಾಳಿಯಲ್ಲಿ 11 ಹಾಗೂ ಹೊರ ಜಿಲ್ಲೆಯ ಇಬ್ಬರು ಒಳಗೊಂಡಂತೆ 119 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ. ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 25842, ಹರಿಹರದಲ್ಲಿ 6722 , ಜಗಳೂರಿನಲ್ಲಿ 2641, ಚನ್ನಗಿರಿಯಲ್ಲಿ 6099, ಹೊನ್ನಾಳಿಯಲ್ಲಿ 6159, ಹೊರ ಜಿಲ್ಲೆಯ 1454 ಜನರು ಸೇರಿದಂತೆ ಈವರೆಗೆ ಒಟ್ಟು 48,917 ಜನರು ಸೋಂಕಿಗೆ ಒಳಗಾಗಿದ್ದಾರೆ.
ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 24,659, ಹರಿಹರದಲ್ಲಿ 6533, ಜಗಳೂರಿನಲ್ಲಿ 2679, ಚನ್ನಗಿರಿಯಲ್ಲಿ 5887, ಹೊನ್ನಾಳಿಯಲ್ಲಿ 5659, ಹೊರ ಜಿಲ್ಲೆಯ 1356 ಜನರು ಸೇರಿದಂತೆ 46,773 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1626 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ ಇಂದು ಎಂಟು ಜನರು ಮೃತಪಟ್ಟಿದ್ದಾರೆ. ಹರಿಹರ ತಾಲೂಕಿನ ಭಾನುವಳ್ಳಿಯ ಎ.ಕೆ. ಕಾಲೋನಿಯ 36 ವರ್ಷದ ವ್ಯಕ್ತಿ, ಕುಣೆಬೆಳಕೆರೆ ಗ್ರಾಮದ 48 ವರ್ಷದ ವ್ಯಕ್ತಿ, ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದ 60 ವರ್ಷದ ವೃದ್ಧ, ಅಂತರಗಟ್ಟ ಗ್ರಾಮದ 55 ವರ್ಷದ ಮಹಿಳೆ, ಸಂತೇಬೆನ್ನೂರಿನ 65 ವರ್ಷದ ವೃದ್ಧೆ ದಾವಣಗೆರೆಯ ಆಜಾದ್ ನಗರದ 36 ವರ್ಷದ ವ್ಯಕ್ತಿ, ಹೊನ್ನಾಳಿಯ ಶಿಕಾರಿಪುರ ರಸ್ತೆಯ 65 ವರ್ಷದ ವೃದ್ಧ, ದಾವಣಗೆರೆ ತಾಲೂಕಿನ ಮಳಲ್ಕೆರೆ ಗ್ರಾಮದ 45 ವರ್ಷದ ಮಹಿಳೆ ಮೃತಪಟ್ಟವರು. ಜಿಲ್ಲೆಯಲ್ಲಿ ಈವರೆಗೆ ಜಿಲ್ಲೆಯಲ್ಲಿ ಕೊರೊನಾಕ್ಕೆ 518 ಜನರು ಬಲಿಯಾಗಿದ್ದಾರೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 90 ಸೋಂಕಿತರು ಸಾಮಾನ್ಯ, 365 ಸೋಂಕಿತರು ಆಕ್ಸಿಜನ್, 16 ಸೋಂಕಿತರು ಎನ್‌ಐವಿ, 49ಸೋಂಕಿತರು ವೆಂಟಿಲೇಟರ್ 24 ಸೋಂಕಿತರು ವೆಂಟಿಲೇಟರ್ ರಹಿತ, 254ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 318 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದಾರೆ.