Advertisement
ಜಿಲ್ಲಾ ಆರೋಗ್ಯ ಇಲಾಖೆಯ ಜೂ. 14 ರವರೆಗಿನ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಜನರು ಅಂದರೆ 1.49 ಲಕ್ಷ ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಜಗಳೂರು ತಾಲೂಕಿನಲ್ಲಿ ಅತಿ ಕಡಿಮೆ ಎಂದರೆ 28,585 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಉಳಿದಂತೆ ಚನ್ನಗಿರಿ ತಾಲೂಕಿನಲ್ಲಿ 90,694, ಹರಿಹರ ತಾಲೂಕಿನಲ್ಲಿ 53,479, ಹೊನ್ನಾಳಿ ತಾಲೂಕಿನಲ್ಲಿ 58,782 ಜನರು ಲಸಿಕೆ ಪಡೆದುಕೊಂಡಿದ್ದಾರೆ.
Related Articles
Advertisement
ಶಾಮನೂರು-ಮಲ್ಲಿಕಾರ್ಜುನ್ ಸೇವಾ ಕಾರ್ಯ ಮಾದರಿ: ಮುನಿಯಪ್ಪ
ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ದಾವಣಗೆರೆ ನಾಗರಿಕರಿಗಾಗಿ ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ್ಯಕ್ರಮ ಮುಂದುವರೆದಿದೆ. ಸೋಮವಾರ ದಾವಣಗೆರೆಯ ತೊಗಟವೀರ ಕಲ್ಯಾಣಮಂಟಪದಲ್ಲಿ 24ನೇ ವಾರ್ಡ್‌ನ ನಾಗರಿಕರಿಗೆ ಏರ್ಪಡಿಸಿದ್ದ ಲಸಿಕಾ ಶಿಬಿರಕ್ಕೆ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರದ ನಿರ್ಲಕ್ಷéದಿಂದ ಸರಿಯಾದ ಸಮಯಕ್ಕೆ ಲಸಿಕೆ ಬಾರದ ಕಾರಣ ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ಲಸಿಕೆ ಖರೀದಿಸಿ ದಾವಣಗೆರೆ ನಾಗರಿಕರಿಗೆ ಉಚಿತವಾಗಿ ಲಸಿಕೆ ಹಾಕಿಸುತ್ತಿರುವುದು ಸಂತೋಷದ ವಿಷಯ ಎಂದು ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ನಲ್ಲೂರು ಎಸ್. ರಾಘವೇಂದ್ರ, ಬೆಳ್ಳೂಡಿ ಮಂಜುನಾಥ್, ಬಸವರಾಜ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯ ಜಿ.ಎಸ್. ಮಂಜುನಾಥ್, ಬಿ.ಎಚ್.ವೀರಭದ್ರಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ ಇತರರು ಇದ್ದರು.
ಲಸಿಕೆ ಪಡೆದವರಿಗೆ ನೀರು ಮತ್ತು ಉಪಹಾರದ ವ್ಯವಸೆ ಮಾಡಲಾಗಿತ್ತು. ದುರ್ಗಾಂಬಿಕಾ ದೇವಾಲಯದ ಆವರಣ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಭೋಜನಾಲಯದ ಬಳಿ ಲಸಿಕಾ ಕೇಂದ್ರಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಲಸಿಕೆ ಪಡೆದವರ ಯೋಗಕ್ಷೇಮ ವಿಚಾರಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಾಲತೇಶ ರಾವ್, ಬಾಬುರಾವ್ ಸಾಳಂಕಿ, ಮಂಜುನಾಥ್ ಸಾಳಂಕಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯ ವಿನಾಯಕ ಪೈಲ್ವಾನ್, ಮಾಜಿ ಸದಸ್ಯ ಪಿ.ಎನ್. ಚಂದ್ರಶೇಖರ್, ತರಕಾರಿ ಚಂದ್ರಪ್ಪ, ಕುರುಬರಹಟ್ಟಿ ರಾಜು, ಜಿ.ಡಿ. ಕುಮಾರ್ ಇತರರು ಇದ್ದರು.
ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ದಾವಣಗೆರೆಯ ಬಾಪೂಜಿ ಆಸ್ಪತ್ರೆ ಹಾಗೂ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಿಬ್ಬಂದಿ ವರ್ಗದವರು ಜೂನ್ 5 ರಿಂದ ನಿರಂತರ ವಾಗಿ ಲಸಿಕಾ ಶಿಬಿರ ನಡೆಸಿಕೊಡುತ್ತಿದ್ದಾರೆ.