Advertisement
ದಾವಣಗೆರೆ: ಸಂಪೂರ್ಣವಾಗಿ ಗುಣಪಡಿಸಲಾಗದ ಹಾಗೂ ವಿರಳ ರೋಗಗಳಲ್ಲೊಂದಾದ ಕುಸುಮ (ಹಿಮೋಫಿಲಿಯಾ) ರೋಗಿಗಳಿಗೆ ಆದ್ಯತಾ ಗುಂಪಿನಡಿ ಕೋವಿಡ್-19 ಲಸಿಕೆ ನೀಡಲು ಸರ್ಕಾರ ಸೂಚಿಸಿದೆ. ಈ ವಿಶೇಷ ಫಲಾನುಭವಿಗಳಿಗೆ ಅತಿ ಜಾಗರೂಕತೆಯಿಂದ ಹಾಗೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಲಸಿಕಾರಣ ನಡೆಸಲು ರಾಜ್ಯಾದ್ಯಂತ ತಯಾರಿ ನಡೆದಿದೆ.
Related Articles
Advertisement
ವಿಶೇಷ ಕ್ರಮ: ಕುಸುಮ ರೋಗಿಗಳಿಗೆ ಕೋವಿಡ್ -19 ಲಸಿಕೆಯನ್ನು ಜಿಲ್ಲಾಸ್ಪತ್ರೆಗಳಲ್ಲಿರುವ ರಕ್ತಸ್ರಾವ ತಡೆಗಟ್ಟುವಿಕೆಯ ಡೇ ಕೇರ್ ಕೇಂದ್ರ(ಹಿಮೋμಲಿಯಾ ಮತ್ತು ಹಿಮೋಕೋಯಾಗುಲೋಪತಿ ಸಂಯೋಜಿತ ಕೇಂದ್ರ -ಐ.ಸಿ.ಎಚ್.ಎಚ್)ಗಳಲ್ಲಿ ಪ್ರತ್ಯೇಕವಾಗಿ ನೀಡಲು ವ್ಯವಸ್ಥೆ ಮಾಡಬೇಕು. ರಕ್ತ ಕೋಶಾಧಿಕಾರಿ ಮೇಲ್ವಿಚಾರಣೆಯಲ್ಲಿ ಲಸಿಕಾರಣ ನಡೆಸಬೇಕು. ಹಿಮೋಫಿಲಿಯಾ ಮತ್ತು ಹಿಮೋಕೋಯಾಗುಲೋಪತಿ ಸಂಯೋಜಿತ ಕೇಂದ್ರದ ನರ್ಸ್‌ಗಳನ್ನು ಮಾತ್ರ ಲಸಿಕಾರಣಕ್ಕೆ ಬಳಸಿಕೊಳ್ಳಬೇಕು.
ಲಸಿಕಾರಣ ನಡೆಸುವ ಮುನ್ನ ಫ್ಯಾಕ್ಟರ್-8 ಇಂಜೆಕ್ಷನ್ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಲಸಿಕೆ ನೀಡುವ 10 ನಿಮಿಷಗಳ ಮುನ್ನ ಫ್ಯಾಕ್ಟರ್-8 ಇಂಜೆಕ್ಷನ್ ನೀಡಬೇಕು. ಲಸಿಕೆ ನೀಡಿದ ಬಳಿಕ ಫಲಾನುಭವಿಗಳನ್ನು ಕಡ್ಡಾಯವಾಗಿ 45 ನಿಮಿಷ ವೀಕ್ಷಣಾ ಕೊಠಡಿಯಲ್ಲಿರಿಸಿ ಯಾವುದೇ ರಕ್ತಸ್ರಾವ ಆಗದೇ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.
ಲಸಿಕೆ ಪಡೆದ ಎರಡು ದಿನಗಳ ಒಳಗಾಗಿ ಜ್ವರ ಕಾಣಿಸಿಕೊಂಡರೆ ತಕ್ಷಣ ರಕ್ತಕೋಶದ ನೋಡಲ್ ಅಧಿಕಾರಿಗೆ ತಿಳಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.