Advertisement

ಕಾಯಕದಲೇ ದೇವರ ಕಾಣುತ್ತಿರುವೆ: ರೇಣುಕಾಚಾರ್ಯ

10:26 PM Jun 04, 2021 | Team Udayavani |

ಹೊನ್ನಾಳಿ: ಕೊರೊನಾ ಮಹಾಮಾರಿಯಿಂದ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಜನತೆಯನ್ನು ಕಾಪಾಡುವುದೇ ನನ್ನ ಗುರಿ. ಕಾಯಕದಲ್ಲಿ ನಾನು ದೇವರನ್ನು ಕಾಣುತ್ತಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಗುರುವಾರ ಪಟ್ಟಣದ ಅಂಬೇಡ್ಕರ್‌ ಭವನದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕಾ ಕಾರ್ಯಕ್ರಮದ ಮಾಹಿತಿ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ನನ್ನ ಕರ್ತವ್ಯದ ಬಗ್ಗೆ ವಿಪಕ್ಷದವರು ಹಾಗೂ ಕೆಲವರು ಅನವಶ್ಯಕವಾಗಿ ಟೀಕಿಸುವುದು, ವ್ಯಂಗ್ಯವಾಡುವುದು ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಸೊಪ್ಪು ಹಾಕುವುದಿಲ್ಲ ಅವಳಿ ತಾಲೂಕಿನ ಜನತೆ ಹಾಗೂ ರಾಜ್ಯಾದ್ಯಂತ ನನ್ನ ಕೆಲಸ ಕಾರ್ಯಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

ನಾನು ಸದಾ ಜನರ ಮಧ್ಯ ಇದ್ದು ಕೆಲಸ ಮಾಡುವಂತಹ ವ್ಯಕ್ತಿ. ಹಾಗಾಗಿ ಟೀಕೆ, ಟಿಪ್ಪಣಿಗಳ ಬಗ್ಗೆ ಉತ್ತರ ನೀಡುವುದಿಲ್ಲ. ಉತ್ತಮವಾಗಿ ಕೆಲಸ ಮಾಡುವವರು ಇದ್ದಾಗ ಅಪಪ್ರಚಾರ ಮಾಡುವವರು ಇರುವುದು ಸಹಜ. ಆದ್ದರಿಂದ ಅಪಪ್ರಚಾರಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ತಾಲೂಕಿನ ಅರಬಟ್ಟೆ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪನೆಯಾಗಿರುವ 800 ಬೆಡ್‌ಗಳ ಕೋವಿಡ್‌ ಕೇಂದ್ರ ರಾಜ್ಯದಲ್ಲಿಯೇ ಅತ್ಯಂತ ದೊಡ್ಡದಾದ ಕೋವಿಡ್‌ ಕೇಂದ್ರವಾಗಿದೆ. ಹೊನ್ನಾಳಿ ತಾಲೂಕಿನ ಪೂರ್ವ ಭಾಗದ ಸಿಂಗಟಗೆರೆ ಗ್ರಾಮದ ಬಳಿ ಮತ್ತೂಂದು ಕೋವಿಡ್‌ ಕೇಂದ್ರ ತೆರೆಯಲಾಗುವುದು ಎಂದು ರೇಣುಕಾಚಾರ್ಯ ತಿಳಿಸಿದರು. ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದಾಗ ಅನೇಕರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು.

ಹಾಗಾಗಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು. ತತ್ಪರಿಣಾಮ ಅಂದು ಬೇಡಿಕೆ ಕಡಿಮೆಯಾಯಿತು. ಎರಡನೇ ಅಲೆ ಜೋರಾದ ಪರಿಣಾಮ ಹಾಗೂ ಸಾವು ನೋವುಗಳು ಹೆಚ್ಚಾಗಿದ್ದರಿಂದ ಜನರು ದಿಢೀರನೇ ಲಸಿಕಾ ಕೇಂದ್ರಕ್ಕೆ ಬರುತ್ತಿರುವುದರಿಂದ ಲಸಿಕೆಗೆ ಬೇಡಿಕೆ ಹೆಚ್ಚಾಯಿತು ಎಂದು ಹೇಳಿದರು.

Advertisement

ಪುರಭಾಧ್ಯಕ್ಷ ಶ್ರೀಧರ್‌, ತಹಶೀಲ್ದಾರ್‌ ಬಸನಗೌಡ ಕೋಟೂರು, ಕೆಎಸ್‌ಡಿಎಲ್‌ ನಿರ್ದೇಶಕ ಶಿವು ಹುಡೇದ್‌, ಪುರಸಭೆ ಸದಸ್ಯರಾದ ಬಾಬು ಒಬಳದಾರ್‌, ರಂಗಪ್ಪ, ಧರ್ಮಪ್ಪ, ಮಹೇಶ್‌ ಹುಡೇದ್‌, ಪಿಎಸ್‌ಐ ಬಸವರಾಜ್‌ ಆರ್‌. ಬಿರಾದಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next