Advertisement

ಆರೋಗ್ಯ ವ್ಯವಸ್ಥೆ ಬಲಪಡಿಸಲು ಆಗ್ರಹಿಸಿ ಜನಾಂದೋಲನ

09:12 PM Jun 02, 2021 | Team Udayavani |

ದಾವಣಗೆರೆ: ಕೋವಿಡ್‌-19 ಸಾಂಕ್ರಾಮಿಕದ ವಿರುದ್ಧ ಆರೋಗ್ಯ ವ್ಯವಸ್ಥೆ ಬಲಪಡಿಸಿ ಜೀವಗಳನ್ನು ಉಳಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯೂನಿಸ್ಟ್‌) ನೇತೃತ್ವದಲ್ಲಿ ಆನ್‌ಲೈನ್‌ ಜನಾಂದೋಲನ ನಡೆಸಲಾಯಿತು.

Advertisement

ಕೊರೊನಾ ಮೊದಲ ಅಲೆಯ ವಿನಾಶಕಾರಿ ಪರಿಣಾಮದಿಂದ ಹೊರಬರುವ ಮುನ್ನವೇ ಜನಸಾಮಾನ್ಯರು ಎರಡನೆಯ ಅಲೆಯ ಹಿಡಿತಕ್ಕೆ ಸಿಲುಕಿಕೊಂಡಿದ್ದಾರೆ. ಎರಡನೆಯ ಅಲೆಯ ಬಗ್ಗೆ ಪಶ್ಚಿಮದ ದೇಶಗಳು ಮುನ್ಸೂಚನೆ ನೀಡಿದ್ದರೂ ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳದೆ ರಾಮ ಮಂದಿರ, ಸೆಂಟ್ರಲ್‌ ವಿಸ್ತಾ ನಿರ್ಮಾಣ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಅ ಧಿಕಾರ ಹಿಡಿಯುವುದರಲ್ಲಿ ತಲ್ಲೀನರಾಗಿದ್ದರಿಂದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

ಸಾವಿನ ಮೆರವಣಿಗೆಯೇ ನೋಡುತ್ತಿದೆ. ಎಲ್ಲಿಗೆ ಮುಟ್ಟಲಿದೆ ಎಂದು ಯಾರಿಗೂ ತಿಳಿಯುತ್ತಿಲ್ಲ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಎಲ್ಲೆಡೆ ಆಸ್ಪತ್ರೆ, ಹಾಸಿಗೆ, ಐಸಿಯು, ವೆಂಟಿಲೇಟರ್‌, ಆಮ್ಲಜನಕ, ಔಷ ಧಿ, ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂ ದಿಗಳ ತೀವ್ರ ಕೊರತೆ ಕಾಡುತ್ತಿದೆ. ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ ಮತ್ತು ಇನ್ನು ಲಕ್ಷಗಟ್ಟಲೆ ಸಾವು ಸಂಭವಿಸಬಹುದು. ಆಸ್ಪತ್ರೆಗಳ ಗೇಟ್‌ ಗಳ ಮುಂದೆ, ರಸ್ತೆಗಳಲ್ಲಿ ಜೀವ ಬಿಡುತ್ತಿದ್ದಾರೆ. ಸ್ಮಶಾನಗಳು ತುಂಬಿ ತುಳುಕುತ್ತಿವೆ. ಎಲ್ಲೆಂದರಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ.

ಎರಡನೆ ಅಲೆಯ ಅರ್ಭಟ ನಡೆಯುತ್ತಿರುವಾಗಲೆ ಮೂರನೇ ಅಲೆಯು ಅಪಾಯದ ಕರೆಗಂಟೆ ಹೊಡೆಯಲಾರಂಭಿಸಿದೆ. ಹಾಗಾಗಿ ಸರ್ಕಾರ ಆರೋಗ್ಯ ವ್ಯವಸ್ಥೆಯನ್ನ ಬಲಪಡಿಸುವ ಮೂಲಕ ಜನಸಾಮಾನ್ಯರ ಆರೋಗ್ಯ, ಜೀವ ರಕ್ಷಣೆ ಮಾಡಬೇಕು.

Advertisement

ನಗರ ಪ್ರದೇಶದ ಎಲ್ಲಾ ವಾರ್ಡ್‌, ಪಟ್ಟಣ, ಪಂಚಾಯಿತಿಗಳಲ್ಲಿ ಆಸ್ಪತ್ರೆಗಳ ನಿರ್ಮಾಣ, ಅಗತ್ಯ ವೈದ್ಯಕೀಯ ಮತ್ತು ವೈದ್ಯಕಿಯೇತರ ಸಿಬ್ಬಂದಿ ನೇಮಕ, ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವುದು, ಸಾರ್ವತ್ರಿಕವಾಗಿ ಉಚಿತ ಲಸಿಕೆ ವಿತರಣೆ, ಔಷಧಿ, ಆಮ್ಲಜನಕ ಕಾಳಸಂತೆ ತಡೆಗಟ್ಟುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಮಂಜುನಾಥ್‌ ಕೈದಾಳೆ, ಮಂಜುನಾಥ್‌ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಪರಶುರಾಮ್‌, ಭಾರತಿ, ಪುಷ್ಪಾ, ಸರಸ್ವತಿ, ಪ್ರಕಾಶ್‌, ಗುರು, ಶಶಿಕುಮಾರ್‌, ಮಮತ, ಕಾವ್ಯ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next