Advertisement
ದಾವಣಗೆರೆ: ಕೊರೊನಾ ಕರ್ಫ್ಯೂ, ಲಾಕ್‌ಡೌನ್ ಕಾಲದಲ್ಲಿಯೂ ನಿತ್ಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೌಕರರು, ಸಿಬ್ಬಂದಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Related Articles
Advertisement
ಜತೆಗೆ ಯೋಜನೆಯಿಂದ ಜಿಲ್ಲೆಯಲ್ಲಿ ನಿರ್ವಹಿಸುತ್ತಿರುವ 40ಶುದ್ಧ ನೀರಿನ ಘಟಕಗಳ ಮೂಲಕ ಅಂದಾಜು 50 ಸಾವಿರಕ್ಕೂ ಅಧಿಕ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ತನ್ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ಕೈಜೋಡಿಸಿದ್ದಾರೆ.
ನಿರಂತರ ನೀರು: ಕೊರೊನಾ ವೈರಸ್ ದಾಳಿಯಿಂದಾಗಿ ಜನರಲ್ಲಿ ಶುದ್ಧ ನೀರಿನ ಅರಿವು ಹೆಚ್ಚಾಗಿದ್ದು, ಶುದ್ಧ ನೀರು ಬಳಸುವವರ ಸಂಖ್ಯೆ ದುಪ್ಪಟ್ಟಾಗಿದೆ. ಹೀಗಾಗಿ ಶುದ್ಧ ನೀರಿನ ಘಟಕಗಳಲ್ಲಿ ಸಾಮಾಜಿಕ ಅಂತರದ ಗುರುತು ಹಾಕಿ ಮಾಸ್ಕ್ ಕಡ್ಡಾಯಗೊಳಿಸಿ ಜನರಿಗೆ ನಿರಂತರವಾಗಿ ಒಂದು ದಿನವೂ ತೊಡಕಾಗದಂತೆ ನೀರೊದಗಿಸುವ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದು ವಿಶೇಷ.
ಒಟ್ಟಾರೆ ಆರೋಗ್ಯ ಸುರಕ್ಷತಾ ಕ್ರಮಗಳಲ್ಲಿ ಶುದ್ಧ ಕುಡಿಯುವ ನೀರಿನ ಬಳಕೆ ಸಹ ಪ್ರಮುಖವಾದುದು ಎಂಬ ಜಾಗೃತಿ ಜನರಲೀಗ ಮೂಡಿದೆ. ಇದಕ್ಕೆ ಪ್ರೇರಕಶಕ್ತಿಯಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.