Advertisement

ಆರೋಪ ಬಿಡಿ, ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿ

09:03 PM May 24, 2021 | Team Udayavani |

ದಾವಣಗೆರೆ: ಮಹಾಮಾರಿ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಒಬ್ಬರಿಗೊಬ್ಬರು ಆರೋಪ- ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಕೊರೊನಾ ನಿಯಂತ್ರಣಕ್ಕೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಜೆಡಿಎಸ್‌ ಮುಖಂಡ ಕೆ.ಬಿ. ಕಲ್ಲೇರುದ್ರೇಶ್‌ ಮನವಿ ಮಾಡಿದ್ದಾರೆ.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿ ಅಲ್ಲ. ಇಬ್ಬರು ನಾಯಕರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ, ರೋಗಿಗಳಿಗೆ ಬೇಕಾದ ಅಗತ್ಯ ಆಮ್ಲಜನಕ, ವೆಂಟಿಲೇಟರ್‌ ಇತರೆ ಸೌಲಭ್ಯ ಒದಗಿಸುವತ್ತ ಗಮನ ಹರಿಸಬೇಕು. ಸ್ಥಿತಿವಂತರಾದ ಇಬ್ಬರು ನಾಯಕರು ಸಹ ವೈಯಕ್ತಿಕವಾಗಿಯೂ ಹೆಚ್ಚಿನ ನೆರವು ನೀಡಬೇಕು ಎಂದರು.

ಈಗ ಒಬ್ಬರಿಗೊಬ್ಬರು ಹೇಳಿಕೆ ನೀಡುವ ಸಂದರ್ಭವೇ ಆಲ್ಲ. ಸಂದರ್ಭ ಬಂದಾಗ ಏನಾದರೂ ಮಾಡಿಕೊಳ್ಳ ಬಹುದು, ಹೇಳಿಕೆಗಳನ್ನೂ ನೀಡಬಹುದು. ಸಂಸದ ಜಿ.ಎಂ. ಸಿದ್ದೇಶ್ವರ ಅವರು ದೆಹಲಿಗೆ ಹೋಗಿ ತಮ್ಮ ಶಕ್ತಿ ಮೀರಿ ಜಿಲ್ಲೆಗೆ ಏನೇನೋ ಅವಶ್ಯಕತೆ ಇದೆಯೋ ಅದನ್ನು ತಂದುಕೊಡಬೇಕು. ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಇಬ್ಬರೂ ಬೆಂಗಳೂರಿಗೆ ತೆರಳಿ ಜಿಲ್ಲೆಗೆ ಏನೇನೋ ಅವಶ್ಯಕತೆ ಇದೆಯೋ ಅದನ್ನು ತಂದುಕೊಡಬೇಕು ಎಂದು ಒತ್ತಾಯಿಸಿದರು.

ಕೆಲ ಹಿಂಬಾಲಕರು ತಮ್ಮ ಈಷ್ಯೆì ತೀರಿಸಿಕೊಳ್ಳಲಿಕ್ಕೆ ಇಂತಹ ಸಂದರ್ಭವನ್ನ ಬಳಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಒಬ್ಬರಿಗೊಬ್ಬರು ಹೇಳಿಕೆ ನೀಡುವುದನ್ನು ನಿಲ್ಲಿಸಿ. ಮನಃಪೂರ್ವಕವಾಗಿ ಒಟ್ಟಿಗೆ ಕೊರೊನಾ ವಿರುದ್ಧ ಕೆಲಸ ಮಾಡಬೇಕು ಎಂದರು.

ಇಬ್ಬರು ನಾಯಕರಿಗೆ ಜನಸೇವೆ ಮಾಡುವಂತಹ ಒಳ್ಳೆಯ ಅವಕಾಶ ದೊರೆತಿದೆ. ಒಬ್ಬರು ಸಂಸದರು, ಇನ್ನೊಬ್ಬರು ಶಾಸಕರು, ಮತ್ತೂಬ್ಬರು ಮಾಜಿ ಸಚಿವರು. ಇಂತಹ ಸಂದರ್ಭದಲ್ಲಿ ನೀಡುವಂತಹ ಹೇಳಿಕೆಗಳನ್ನ ಜನರು ಗಮನಿಸುತ್ತಲೇ ಇರುತ್ತಾರೆ. ಮುಂದೆ ಅದೇ ಶಾಪವಾಗಿ ಪರಿವರ್ತನೆ ಆಗಬಹುದು. ಜನಸಾಮಾನ್ಯರು ತಿರುಗಿ ಬಿದ್ದಾಗ ಇಬ್ಬರ ಮಧ್ಯೆ ಮೂರನೇಯವರಿಗೂ ಅವಕಾಶ ಆಗಬಹುದು.

Advertisement

ಹಾಗಾಗಿ ಎಲ್ಲದಕ್ಕೂ ವಿರಾಮ ನೀಡಿ. ನಾವೆಲ್ಲರೂ ಕೈಜೋಡಿಸಿ ಒಟ್ಟಿಗೆ ಕೆಲಸ ಮಾಡಿ ಜಿಲ್ಲೆಯನ್ನ ಕೊರೊನಾ ಮುಕ್ತವನ್ನಾಗಿ ಮಾಡೋಣ ಎಂಬುದು ತಮ್ಮ ವಿನಂತಿ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲವೇ ಇಲ್ಲ. ಇದು ರಾಜಕೀಯ ಮಾಡುವಂತಹ ಸಮಯವೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next