ಹೊನ್ನಾಳಿ: ನನ್ನ ಮನವಿ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 25 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ನೀಡಿದ್ದಾರೆ. ಈ ಹಿಂದೆ 18 ಆಕ್ಸಿಜನ್ ಕಾನ್ಸಟ್ರೇಟರ್‌ಗಳನ್ನು ನೀಡಿದ್ದರು. ಒಟ್ಟು 43 ಆಕ್ಸಿಜನ್ ಕಾನ್ಸನ್ ಟ್ರೇಟರ್‌ಗಳನ್ನು ಕೊಟ್ಟಂತಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆಗೆ ಭಾನುವಾರ ಬೆಂಗಳೂರಿನಿಂದ ಬಂದ 25 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಬರಮಾಡಿಕೊಂಡು ಅವರು ಮಾತನಾಡಿದರು. ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಘಟಕ, 43 ಆಕ್ಸಿಜನ್ ಕಾನ್ಸಟ್ರೇಟರ್‌ಗಳನ್ನು ಕೊಡುವುದಲ್ಲದೆ ಕೊರೊನಾ ಕೊಂಡಿ ಕಳಚಲು ಸಿಎಂ ಎಲ್ಲಾ ಸಾಧನ ಸಲಕರಣಗಳನ್ನು ನಮ್ಮ ತಾಲೂಕಿಗೆ ನೀಡುತ್ತಿದ್ದಾರೆ. ಶನಿವಾರ ಸಿಎಂ ಬಿಎಸ್‌ವೈ ಅವರನ್ನು ಭೇಟಿ ಮಾಡಿ ಆಕ್ಸಿಜನ್ ಕಾನ್ಸನ್ ಟ್ರೇಟರ್‌ಗಳನ್ನು ಮಂಜೂರು ಮಾಡುವಂತೆ ಬೇಡಿಕೆ ಸಲ್ಲಿಸಿದ್ದೆ. ಮರು ಮಾತನಾಡದೆ ತಕ್ಷಣ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ತಾಲೂಕು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಪ್ರತಿಯೊಂದು ಗ್ರಾಮಕ್ಕೆ ನಾನು ಅ ಧಿಕಾರಿಗಳೊಂದಿಗೆ ಭೇಟಿ ನೀಡಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಪರಿ ಪರಿಯಾಗಿ ಮನವಿ ಮಾಡಿಕೊಂಡಿದ್ದರೂ ಅನೇಕರು ಪರೀಕ್ಷೆಗೊಳಗಾಗುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೊರೊನಾ ಉಲ್ಬಣವಾದ ನಂತರ ದೂರವಾಣಿ ಕರೆ ಮಾಡಿ ನಮಗೆ ಬೆಡ್ ಬೇಕು, ಆಕ್ಸಿಜನ್ ಬೇಕು, ವೆಂಟಿಲೇಟರ್ ಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಮೊದಲೆ ಎಚ್ಚೆತ್ತುಕೊಳ್ಳಿ ಎಂದು ಸೂಚಿಸಿದರೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸದ್ಯಕ್ಕೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 75, ಮೊರಾರ್ಜಿ ವಸತಿ ಶಾಲೆಯಲ್ಲಿ 118, ಸಾಸ್ವೆಹಳ್ಳಿ ವಸತಿ ಶಾಲೆಯಲ್ಲಿ 11, ಜೀನಹಳ್ಳಿ ಹಾಸ್ಟೆಲ್‌ನಲ್ಲಿ 1, ಕೂಲಂಬಿ ಸಮುದಾಯ ಭವನದಲ್ಲಿ 18 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡನೇ ಪ್ರಾರಂಭವಾದಾಗಿನಿಂದ ಇದುವರೆಗೆ ವಿವಿಧ ಸ್ಥಳಗಳಲ್ಲಿ ಒಟ್ಟು 1739 ಸೋಂಕಿತರಿದ್ದಾರೆ.
ಇದರಲ್ಲಿ 627 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, 1047 ಪ್ರಕರಣಗಳು ಸಕ್ರಿಯವಾಗಿವೆ. 65 ಮಂದಿ ಮೃತಪಟ್ಟಿದ್ದಾರೆ ಎಂದರು. ಪುರಸಭಾಧ್ಯಕ್ಷ ಕೆ.ವಿ. ಶ್ರೀಧರ, ತಹಶೀಲ್ದಾರ್ ಬಸನಗೌಡ ಕೊಟೂರ, ಸಿಪಿಐ ಟಿ.ವಿ. ದೇವರಾಜ್, ಪಿಎಸ್‌ಐ ಬಸವರಾಜ ಆರ್. ಬಿರಾದಾರ್, ತಾಲೂಕು ಆರೋಗ್ಯಾಧಿಕಾರಿ ಡಾ| ಕೆಂಚಪ್ಪ ಇದ್ದರು.