ಜಗಳೂರು: ಕೋವಿಡ್‌ನ ಎರಡನೇ ಅಲೆ ನಿಯಂತ್ರಿಸಲು ಸರಕಾರ ಜನತಾ 14 ದಿನಗಳ ಕಾಲ ಜನತಾ ಕರ್ಫ್ಯೂ ಹೇರಿದ್ದರ ಎಫೆಕ್ಟ್ನಿಂದಾಗಿ ಬಡ ಅಲೆ ಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರು ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ.
ಪಟ್ಟಣದ ಅಶ್ವಥ್ ರೆಡ್ಡಿ ನಗರದ ಖಾಸಗಿ ಜಮೀನೊಂದರಲ್ಲಿ ಹಾಗೂ ರಸ್ತೆಯ ಬದಿಯಲ್ಲಿ ಬಟ್ಟೆ ಗುಡಿಸಲಲ್ಲಿ ಜೀವನ ನಡೆಸುತ್ತಿರುವ ಬುಡಗ ಜಂಗಮ, ಶಿಳ್ಳೆಕ್ಯಾತ, ದಾಸ, ಸಿಂದೋಳ, ಅಲೆಮಾರಿ ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಸುಮಾರು 30 ಕ್ಕೂ ಅ ಧಿಕ ಸಮುದಾಯದವರು ಸ್ವಂತ ಸೂರಿಲ್ಲದೇ ಬಟ್ಟೆ ಗುಡಿಸಲಲ್ಲಿ ಜೀವನ ನಡೆಸುತ್ತಿದ್ದಾರೆ. ಜೀವನೋಪಾಯೋಗಕ್ಕಾಗಿ ಕೂದಲು, ಸೂಜಿ ದಾರ, ಶಾಸ್ತ್ರ ಹೇಳುವುದು.
ಬಾಚಣಿಕೆ ಸೇರಿದಂತೆ ಇತರೆ ವ್ಯಾಪಾರಗಳಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಗೆ ತೆರಳಿ ವ್ಯಾಪಾರ ಮಾಡಿಕೊಂಡು ಅಂದಿನ ದುಡಿಮೆಯಿಂದ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ಆದರೆ ಜನತಾ ಕರ್ಫ್ಯೂನಿಂದಾಗಿ ಇವರು ವ್ಯಾಪಾರ ವಹಿವಾಟು ನಡೆಸಲು ತೆರಳುವಂತಿಲ್ಲ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಕೋವೀಡ್ ಭಯದಿಂದ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಭಿಕ್ಷೆ ಬೇಡಲು ಬಂದರೆ ಪೊಲೀಸರು ಓಡಾಡಬೇಡಿ ಎಂದು ಹೇಳುತ್ತಾರೆ.
ಇರುವ ದವಸ ಧಾನ್ಯ ಖಾಲಿಯಾಗುತ್ತಿದ್ದು, ನಾಳೆಯಿಂದ ಉಪವಾಸದಿಂದ ಮಲಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸಮಾಜದ ಹಿರಿಯ ದೊಡ್ಡ ಮಾರಪ್ಪ. ಮಕ್ಕಳಿಗೂ ಸಹ ಹಾಲ ಬ್ರೆಡ್ ದೊರೆಯದೇ ಪರದಾಡುತ್ತಿದ್ದಾರೆ.
ನಾವು ವ್ಯಾಪಾರ ಮಾಡಿದರೆ ಊಟ ಮಾಡಲು ಸಾಧ್ಯ. ಜನತಾ ಕರ್ಫ್ಯೂನಿಂದಾಗಿ ನಾವು ಮನೆ ಬಿಟ್ಟು ಎಲ್ಲಿಗೂ ತೆರಳುವಂತಿಲ್ಲ. ಈಗ ನಮಗೆ ಊಟವು ಸಹ ದೊರೆಯದಂತ ಸ್ಥಿತಿ ನಿಮಾಣವಾಗಿದೆ ಎನ್ನುತ್ತಾರೆ ಕರಿ ಸುಂಕಪ್ಪ. ಸರಕಾರ ಲಾಕ್‌ಡೌನ್ ಮಾಡುವ ಮುನ್ನಾ ಇಂಥ ಸಮುದಾಯದವರಿಗೆ ಆಹಾರ ಸಾಮಗ್ರಿಗಳ ವ್ಯವಸ್ಥೆ ಮಾಡಬೇಕು ಎಂದು ಅಲೆಮಾರಿ, ಅರೆ ಅಲೆಮಾರಿ ಸಮಾಜದ ತಾಲೂಕು ಅಧ್ಯಕ್ಷ ಕುರಿ ಜಯಣ್ಣ ತಿಳಿಸಿದ್ದಾರೆ.