Advertisement

ದಾವಣಗೆರೆ ಜಿಲ್ಲೆಯಲ್ಲಿ 108 ಜನರಿಗೆ ಕೋವಿಡ್ ಪಾಸಿಟಿವ್! ನಾಲ್ವರು ಸಾವು

07:39 PM Aug 01, 2020 | sudhir |

ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ 108 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ, ಸಾವಿನ ಸರಣಿ ಮುಂದುವರಿದಿದೆ, ಶನಿವಾರ ನಾಲ್ವರು ಮೃತಪಟ್ಟಿದ್ದಾರೆ. ನಾಲ್ವರ ಸಾವಿನಿಂದ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಅರ್ಧ ಶತಕ ದಾಟಿದೆ.ಈವರೆಗೆ ಜಿಲ್ಲೆಯಲ್ಲಿ 52 ಮೃತಪಟ್ಟಿದ್ದಾರೆ.

Advertisement

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 63 ವರ್ಷದ ವೃದ್ಧ (ರೋಗಿ ನಂಬರ್ 115042), 59 ವರ್ಷದ ವೃದ್ಧ (ರೋಗಿ ನಂಬರ್ 117800), 80 ವರ್ಷದ ವೃದ್ಧೆ (ರೋಗಿ ನಂಬರ್ 122561), 55 ವರ್ಷದ ವೃದ್ಧೆ (ರೋಗಿ ನಂಬರ್ 123406) ಮೃತಪಟ್ಟವರು.

ಕೋವಿಡ್ ನಿಂದ ಗುಣಮುಖರಾದ 188 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಈವರೆಗಿನ ದಾಖಲೆ. ಜಿಲ್ಲೆಯಲ್ಲಿ ಒಟ್ಟು 2209 ಪ್ರಕರಣಗಳಲ್ಲಿ ಈವರೆಗೆ 1390 ಜನರು ಗುಣಮುಖರಾಗಿದ್ದಾರೆ. 52 ಜನರು ಮೃತಪಟ್ಟಿದ್ದಾರೆ. 767 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next