ಬಾಗಲಕೋಟೆ: ಮಂಗಳವಾರ ಎಲ್ಲೆಡೆ ವಿಶ್ವ ಮಹಿಳಾ ದಿನ. ಉಕ್ರೇನ್‌ನಲ್ಲಿದ್ದ ಮಗಳ ಬರುವಿಕೆಗಾಗಿ ಕಾಯುತ್ತಿದ್ದ ಇಲ್ಲಿನ ವಿದ್ಯಾಗಿರಿಯ ಕದಾಂಪುರ ನಿವಾಸದಲ್ಲಿ ನಿರೀಕ್ಷೆಯಂತೆ ಸಂಭ್ರಮ ಮನೆ ಮಾಡಿತ್ತು. ಮಹಿಳಾ ದಿನದಂದೇ ಮನೆಗೆ ಬಂದ ಮಗಳನ್ನು ಅಪ್ಪಿಕೊಂಡು ತಾಯಿ ಜ್ಯೋತಿ ಮತ್ತು ತಂದೆ ಸಿದ್ದಲಿಂಗೇಶ ಕದಾಂಪುರ ಸಂಭ್ರಮಿಸಿದರು.
ಕುಟುಂಬದೊಂದಿಗೆ ಸಂಭ್ರಮ ಹಂಚಿಕೊಂಡ ಅಪೂರ್ವ ಕದಾಂಪುರ ಮಾತನಾಡಿ, ಉಕ್ರೇನ್‌ನ ಕಾರ್ಕೆ ಸಿಟಿಯಲ್ಲಿ ನಾನು ವೈದ್ಯಕೀಯ ವ್ಯಾಸಂಗ ಮಾಡಲು ಹೋಗಿದ್ದೆ. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಬಾಂಬಿಂಗ್ ನಡೆಯುವಾಗ ನಾವು ಕೆಳಗೆ ಬಂಕರ್‌ನ ಸೆಲ್ಟರ್‌ನಲ್ಲಿ ಆಶ್ರಯ ಪಡೆದಿದ್ದೇವು. ಎಷ್ಟು ಸಾಧ್ಯವೋ ಅಷ್ಟು ನೀರು, ಆಹಾರ ನೀಡಿದ್ದರು. ಆರಂಭದಲ್ಲಿ ಸಮಸ್ಯೆ ಆಗಲಿಲ್ಲ. ದಿನ ಕಳೆದಂತೆ ಕುಡಿಯಲು ನೀರೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿತ್ತು ಎಂದರು.
ನಾವಿದ್ದ ಕಾರ್ಕೆ ಸಿಟಿ ಖಾಲಿ ಮಾಡಲೇಬೇ ಕಾದ ಪರಿಸ್ಥಿತಿ ಬಂತು. ಆಗ ನಾವು ಎಂಎಸ್‌ಸಿ ಸಹಾಯದೊಂದಿಗೆ ಉಕ್ರೇನ್ ವೆಸ್ಟ್‌ಸೈಡ್‌ಗೆ ಬಂದೇವು. ಭಾರತೀಯ ಎಂಎಸ್ ಸಿಯವರು ನಮಗೆ ಸಹಾಯ-ಸಹಕಾರ ಮಾಡಿದರು. ಇದಕ್ಕೆ ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಎಂದೂ ಮರೆಯುವುದಿಲ್ಲ. ನಾವು ವೆಸ್ಟ್ ಸೈಡ್‌ಗೆ ಬಂದಾಗ ಗೊತ್ತಾಯಿತು. ಬೇರೆ ಯಾವ ದೇಶದ ಎಂಎಸ್‌ಸಿಯವರೂ ಇರಲಿಲ್ಲ. ನಮ್ಮ ದೇಶದವರು ಮಾತ್ರ ಇದ್ದರು. ಅವರೆಲ್ಲ ನಮಗೆ ಪ್ರತಿ ಹೆಜ್ಜೆಗೂ ಸಹಾಯ ಮಾಡಿ, ಸುರಕ್ಷಿತವಾಗಿ ಭಾರತ ತಲುಪಲು ಸಹಾಯ ಮಾಡಿದರು.
ನಾವು ಸುರಕ್ಷಿತವಾಗಿ ಭಾರತ ತಲುಪಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರವೇ ಕಾರಣ. ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವೆ ಎಂದು ತಿಳಿಸಿದರು. ಸನ್ಮಾನ: ಮಹಿಳಾ ದಿನಾಚರಣೆಯಂದು ಉಕ್ರೇನ್‌ನಿಂದ ಮನೆಗೆ ಬಂದ ಅಪೂರ್ವ ಕದಾಂಪುರ ಅವರನ್ನು ರಾಷ್ಟ್ರ ಸೇವಿಕಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್‌ನ ಸದಸ್ಯರು ನಗರದ ವಿದ್ಯಾಗಿರಿಯ ನಿವಾಸಕ್ಕೆ ತೆರಳಿ, ಸಿಹಿ ತಿನ್ನಿಸಿ ಸನ್ಮಾನಿಸಿದರು.
ಈ ವೇಳೆ ಪ್ರಮುಖರಾದ ಶಿವಕುಮಾರ ಮೇಲಾಡ, ಸಂಗನಗೌಡ ಗೌಡರ, ಅಪ್ಪಣ್ಣ ಪೂಜಾರ, ಸಂಗಮೇಶ ಗುಡ್ಡದ, ಸುರೇಶ ನಾಯಕ, ಕೃಷ್ಣಾ ರಾಜೂರ, ರಾಜು ನಾಯಕ, ದಾಮೋದರ ಮುದಗಲ್ಲ, ರಾಷ್ಟ್ರ ಸೇವಿಕಾ ಸಮಿತಿ ಸದಸ್ಯರಾದ ಮೇಘಾ ಮೇಲಾ°ಡ, ನಾಗರತ್ನ ರಾಜೂರ, ಲಕ್ಷ್ಮಿ ಸುರೇಶ ನಾಯಕ, ಮಂಜುಳಾ ಹುರಕಡ್ಲಿ, ಕವಿತಾ ಹೊನ್ನಳ್ಳಿ, ವಿಜಯಲಕ್ಷ್ಮೀ ನಾಯಕ, ಶ್ರೀದೇವಿ ಹೊನ್ನಳ್ಳಿ ಮುಂತಾದವರಿದ್ದರು.