Advertisement

ಅಮ್ಮನಿಗೆ ವರ ಬೇಕಾಗಿದೆ: ಮಗಳ ಪೋಸ್ಟ್ ಈಗ ವೈರಲ್

12:28 PM Nov 03, 2019 | keerthan |

ಹೊಸದಿಲ್ಲಿ; ತಂದೆ ತಾಯಿ ತಮ್ಮ ಮಕ್ಕಳಿಗೆ ವಧು/ ವರ ಹುಡುಕುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಯುವತಿ ತನ್ನ ತಾಯಿಗೆ ಗಂಡು ಹುಡುಕಿಕೊಡಿ ಎಂದು ಪೋಸ್ಟ್ ಮಾಡಿದ್ದು, ಈಗ ವೈರಲ್ ಆಗಿದೆ.

Advertisement

ಆಸ್ತಾ ವರ್ಮಾ ಹೀಗೆ ಪೋಸ್ಟ್ ಮಾಡಿದ ಯುವತಿ. ಗುರುವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಯುವತಿ ಈಗ ವೈರಲ್ ಆಗಿದ್ದಾಳೆ.

ತನ್ನ ತಾಯಿಯೊಂದಿಗಿನ ಫೋಟೋ ಅಪ್ಲೋಡ್ ಮಾಡಿರುವ ಆಸ್ತಾ ವರ್ಮಾ, ತನ್ನ ತಾಯಿಗೆ 50 ವರ್ಷದ ಸೂಕ್ತ ವರ ಬೇಕಾಗಿದ್ದಾರೆ. ಇಷ್ಟೇ ಅಲ್ಲದೆ ವರ ಸಸ್ಯಹಾರಿಯಾಗಿರಬೇಕು. ಮದ್ಯ ಸೇವಿಸಬಾರದು ಎಂದಿರುವ ಆಸ್ತಾ ಗ್ರೂಮ್ ಹಂಟಿಂಗ್ ಎಂಬ ಹ್ಯಾಶ್ ಟ್ಯಾಗ್ ಕೂಡಾ ಸೇರಿಸಿದ್ದಾರೆ. ಈ ಪೋಸ್ಟ್  ಈಗ ಭಾರಿ ಪ್ರಚಾರ ಪಡೆಯುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next