Advertisement

ವಿವಾಹ ನಿಶ್ಚಯವಾದ ಬಳಿಕ ಪುತ್ರಿ ಪರಾರಿ; ತಂದೆ, ತಾಯಿ ಆತ್ಮಹತ್ಯೆ

09:20 AM May 06, 2019 | Team Udayavani |

ಚಿಕ್ಕಬಳ್ಳಾಪುರ: ವಿವಾಹ ನಿಶ್ಚಯವಾದ ಬಳಿಕ ಪುತ್ರಿ ಪ್ರಿಯಕರನೊಂದಿಗೆ ಪರಾರಿಯಾದುದರಿಂದ ಮನನೊಂದು ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರರಾತ್ರಿ ನಡೆದಿದೆ.

Advertisement

ಗೌರಿಬಿದನೂರಿನ ಬೇವಿನಹಳ್ಳಿ ಗ್ರಾಮದ ಚೌಡಪ್ಪ(44) ಮತ್ತು ಪತ್ನಿ ಚೌಡಮ್ಮ(37) ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆಶರಣಾಗಿದ್ದಾರೆ.

ಮೊದಲ ಪುತ್ರಿಯೂ ವಿರೋಧದ ನಡುವೆ ವಿವಾಹವಾಗಿದ್ದು, ಎರಡನೇ ಪುತ್ರಿಯೂ ಹಾಗೇ ಮಾಡಿದ್ದರಿಂದ ತೀವ್ರವಾಗಿ ನೊಂದು ಕಠಿಣ ನಿರ್ಧಾರ ತಳೆದಿದ್ದಾರೆ ಎಂದು ತಿಳಿದು ಬಂದಿದೆ.

ಮೂರು ದಿನಗಳ ಹಿಂದೆ ಪುತ್ರಿ ಕಾಣೆಯಾಗಿದ್ದು, ಹುಡುಕಾಟ ನಡೆಸಲಾಗಿತ್ತು. ಆ ಬಳಿಕ ಆಕೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು ಎಂದು ತಿಳಿದು ಬಂದಿದೆ.

ಮಂಚೇನ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next