Advertisement

ಭಾರತದ ಅಮ್ಮನಿಗಾಗಿ ದುಬೈನಿಂದ ಟೊಮೆಟೊ ತಂದ ಮಗಳು!

06:47 PM Jul 22, 2023 | Team Udayavani |

ಬೆಂಗಳೂರು: ಹೊರದೇಶಗಳಿಂದ ನಿಮ್ಮ ಕುಟುಂಬದವರೋ, ಸ್ನೇಹಿತರೋ ಬಂದರೆ ನಿಮಗೆ ಉಡುಗೊರೆಯಾಗಿ ಏನನ್ನು ತರಬಹುದು? ಒಡವೆಯೋ, ವಸ್ತ್ರವೋ, ಸುಗಂಧ ದ್ರವ್ಯವನ್ನೋ ಅಲ್ಲವೇ? ಆದರೆ, ಇತ್ತೀಚೆಗಷ್ಟೇ ದುಬೈನಿಂದ ಭಾರತಕ್ಕೆ ಬಂದ ಮಹಿಳೆಯೊಬ್ಬರು ತಮ್ಮ ತಾಯಿಗೆ ಉಡುಗೊರೆಯಾಗಿ 10 ಕೆ.ಜಿ. ಟೊಮೆಟೊ ತುಂಬಿದ ಸೂಟ್‌ಕೇಸ್‌ ವೊಂದನ್ನು ತಂದುಕೊಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಭಾರೀ ವೈರಲ್‌ ಆಗಿದೆ.

Advertisement

ಹೌದು, ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ದಿನವೂ ಟೊಮೆಟೊ ಬಗ್ಗೆ ಒಂದಿಲ್ಲೊಂದು ಸುದ್ದಿಯಾಗುತ್ತಲೇ ಇದೆ. ಅದೇ ರೀತಿ ಟ್ವಿಟರ್‌ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ವಿಷಯ ಕೂಡ ನೆಟ್ಟಿಗರ ಗಮನ ಸೆಳೆದಿದೆ. ಪೋಸ್ಟ್‌ ಪ್ರಕಾರ, ಬಳಕೆದಾರರ ಸಹೋದರಿ ದುಬೈನಿಂದ ರಜೆಗೆಂದು ತವರು ಮನೆಗೆ ಆಗಮಿಸುತ್ತಿದ್ದರು. ಈ ವೇಳೆ ತಾಯಿಗೆ ಏನಾದರೂ ತರಬೇಕೇ ಎಂದು ಕೇಳಿದ್ದಾರೆ.

ತಾಯಿ ಟೊಮೆಟೊ ತರುವಂತೆ ಹೇಳಿದ್ದಾರೆ. ಈ ಹಿನ್ನೆಲೆ ಮಗಳು 10 ಕೆಜಿ ಟೊಮೆಟೊ ತಂದಿದ್ದಾರೆ ಎನ್ನಲಾಗಿದೆ. ಪೋಸ್ಟ್‌ಗೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ಈ ಮಗಳಿಗೆ “ಈ ವರ್ಷದ ಅತ್ಯುತ್ತಮ ಮಗಳು’ ಪ್ರಶಸ್ತಿಯನ್ನು ನೀಡಬೇಕೆಂದು ಹೇಳಿದ್ದರೆ, ಇನ್ನೂ ಹಲವರು ಟೊಮೆಟೊ ಚಿನ್ನಕ್ಕಿಂತಲೂ ಅಮೂಲ್ಯವೆಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next