ಸದ್ಯ ತನ್ನ ಹಾಡುಗಳು ಮತ್ತು ಟ್ರೇಲರ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ “ಕಥಾ ಸಂಗಮ’ ಚಿತ್ರ ತೆರೆಗೆಬರೋದಕ್ಕೆ ಮುಹೂರ್ತ ನಿಗಧಿಯಾಗಿದೆ. ಇದೇ ಡಿಸೆಂಬರ್ 6ರಂದು “ಕಥಾ ಸಂಗಮ’ ತೆರೆಗೆ ಬರುತ್ತಿದ್ದು, ಚಿತ್ರತಂಡ ಭರ್ಜರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಅಂತಿಮ ಹಂತದ ಕಸರತ್ತಿನಲ್ಲಿ ನಿರತವಾಗಿದೆ.
ಇನ್ನು “ಕಥಾ ಸಂಗಮ’ ಚಿತ್ರದಲ್ಲಿ ಏಳು ಕಥೆಗಳು ಏಳು ಭಾಗವಾಗಿ ತೆರೆಮೇಲೆಬರಲಿದ್ದು, ಚಿತ್ರಕ್ಕೆ ಏಳು ಜನ ನಿರ್ದೇಶಕರುಆ್ಯಕ್ಷನ್-ಕಟ್ ಹೇಳಿದ್ದಾರೆ. ಏಳು ಜನ ಛಾಯಾಗ್ರಹಕರು, ಏಳು ಜನ ಸಂಗೀತನಿರ್ದೇಶಕರು ಸೇರಿದಂತೆ ಏಳು ತಂಡಗಳು ಒಂದುಗೂಡಿ ಚಿತ್ರಕ್ಕೆ ಕೆಲಸ ಮಾಡಿರುವುದುವಿಶೇಷ. ಈ ಹಿಂದೆ “ರಂಗಿತರಂಗ’ ಚಿತ್ರವನ್ನು ನಿರ್ಮಿಸಿದ್ದ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್.ಆರ್, ಹಾಗೂ ರಿಷಬ್ ಶೆಟ್ಟಿ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇನ್ನು ಈ ಚಿತ್ರದಲ್ಲಿ ರಿಷಭ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಕಿಶೋರ್, ಅವಿನಾಶ್, ನಟಿ ಹರಿಪ್ರಿಯಾ, ರಾಜ್. ಬಿ ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಮೋದ್ ಶೆಟ್ಟಿ, ಅಮೃತ ನಾಯಕ್ ಮೊದಲಾದವರು ಬೇರೆ ಬೇರೆ ಕಥೆಗಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡಿರುವನಿರ್ಮಾಪಕ ಹೆಚ್.ಕೆ ಪ್ರಕಾಶ್, “ಈಗಾಗಲೇ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಇದೊಂದು ವಿಭಿನ್ನ ಪ್ರಯೋಗದ ಚಿತ್ರವಾಗಿರುವುದರಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದು ಎಂಬ ಭರವಸೆ ಇದೆ. ಇದೇ ವಾರ (ಡಿ. 6) ಚಿತ್ರವನ್ನು ರಾಜ್ಯಾದ್ಯಂತ ಸುಮಾರು 60-80 ಕೇಂದ್ರಗಳಲ್ಲಿ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಆ ನಂತರ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ರಾಜ್ಯದ ಇತರೆ ಕೇಂದ್ರಗಳಲ್ಲೂ ಬಿಡುಗಡೆ ಮಾಡಲಾಗುವುದು’ ಎಂದಿದ್ದಾರೆ.
ಇನ್ನು ರಿಷಭ್ ಶೆಟ್ಟಿ ಕೂಡ ಚಿತ್ರದ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡಿದ್ದು, “ಸೆನ್ಸಾರ್ ನವರು ಸೇರಿದಂತೆ, ಈಗಾಗಲೇ ಸಿನಿಮಾ ನೋಡಿªವರೆಲ್ಲರೂ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಗಾಗಿ ನಮ್ಮ ತಂಡಕ್ಕೆ ಚಿತ್ರದ ಮೇಲೆ ಒಂದಷ್ಟು ಕಾನ್ಫಿಡೆನ್ಸ್ ಬಂದಿದೆ. ಈ ಚಿತ್ರವನ್ನು ಹಿರಿಯ ನಿರ್ದೇಶಕ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸುತ್ತಿದ್ದೇವೆ. ಕನ್ನಡ ಪ್ರೇಕ್ಷಕರಿಗೆ ಇದೊಂದು ಹೊಸ ಅನುಭವ ಕೊಡುತ್ತದೆ’ ಎನ್ನುತ್ತಾರೆ.
ಒಟ್ಟಾರೆ ಆರಂಭದಲ್ಲಿಯೇ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ “ಕಥಾ ಸಂಗಮ’ದಲ್ಲಿ ಲವ್, ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ ಜಾನರಿನಡಿ ಬರುವ ವಿಭಿನ್ನ ಕಥೆಗಳ ಸಂಗಮವಿದ್ದು, ಚಿತ್ರ ಕನ್ನಡ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಕೆಲ ದಿನಗಳಲ್ಲೆ ಗೊತ್ತಾಗಲಿದೆ