Advertisement

ದಸರಾಕೆ ರೂ.5.42 ಕೋಟಿ ರೂ. ಖರ್ಚು ಖರ್ಚ ವೆಚ್ಚಗಳ ಮಾಹಿತಿ ನೀಡಿದ ಸಚಿವ ಸೋಮಶೇಖರ್‌

01:36 PM Nov 02, 2021 | Team Udayavani |

ಮೈಸೂರು: ಈ ಬಾರಿ ನಡೆದ ಸರಳ ಮತ್ತು ಸಾಂಪ್ರದಾಯಕ ದಸರಾ ಮಹೋತ್ಸವವಕ್ಕೆ 5.42 ಕೋಟಿ ರೂ. ಖರ್ಚಾಗಿರುವು ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು. ನಗರದ ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಎರಡನೇ ಬಾರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಖರ್ಚುವೆಚ್ಚಗಳ ಸಂಪೂರ್ಣ ಮಾಹಿತಿಯನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, ದಸರಾ ಮಹೋತ್ಸವಕ್ಕೆ 5,42,07,679 ರೂ. ಖರ್ಚಾಗಿದ್ದು, ಬಿಡುಗಡೆಯಾಗಿದ್ದ 6 ಕೋಟಿ ರೂ. ಹಣದಲ್ಲಿ 57 ಲಕ್ಷ ರೂ. ಉಳಿತಾಯವಾಗಿದೆ.

Advertisement

ಒಟ್ಟು 20 ವಿಭಾಗಕ್ಕೆ ಹಣ ವಿನಿಯೋಗ ಮಾಡಲಾಗಿದೆ. ಅತಿ ಹೆಚ್ಚು ಎಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಹಾಗೂ ಕಲಾವಿದರಿಗೆ 1,03,64,272 ರೂ., ರಾಜವಂಶಸ್ಥರಿಗೆ ಗೌರವ ಧನವಾಗಿ 40 ಲಕ್ಷ ರೂ., ಶ್ರೀರಂಗಪಟ್ಟಣ ದಸರಾಗೆ 50 ಲಕ್ಷ ರೂ., ಚಾಮರಾಜನಗರ ದಸರಾಗೆ 50 ಲಕ್ಷ ರೂ. ಹಾಗೂ ಅರಕಲಗೂಡು ದಸರಾ ಆಚರಣೆಗೆ 20 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದರು. ಮೈಸೂರು ದಸರಾ ಆಮಂತ್ರಣ ಪತ್ರಿಕೆ, ಮುದ್ರಣ ಇತ್ಯಾದಿಗಳಿಗೆ 5,91,960 ರೂ. ಖರ್ಚಾಗಿದ್ದರೆ, ಗಣ್ಯರು ಮತ್ತು ಕಲಾವಿದರ ಸಾರಿಗೆ ವ್ಯವಸ್ಥೆಗೆ 29,16,416 ರೂ. ಖರ್ಚಾಗಿದೆ.

ಇದನ್ನೂ ಓದಿ:- ಸಹಕಾರಿ ಕ್ಷೇತ್ರ ಉಳಿಸಿ-ಬೆಳೆಸೋದು ಎಲ್ಲರ ಕರ್ತವ್ಯ 

ಜಂಬೂಸವಾರಿ ಮೆರವಣಿಗೆಗೆ 37,50,772 ರೂ., ಸ್ತಬ್ಧ ಚಿತ್ರ ನಿರ್ಮಾಣಕ್ಕೆ 18,85,102 ರೂ., ಆನೆಗಳ ನಿರ್ವಹಣೆಗೆ 50 ಲಕ್ಷ ರೂ., ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ವಿದ್ಯುತ್‌ ಕಾಮಗಾರಿಗಳ ವ್ಯವಸ್ಥೆಗಾಗಿ 93,80,000 ರೂ., ವೆಬ್‌ ಕ್ಯಾಸ್ಟಿಂಗ್‌ಗೆ 11,09,200 ರೂ. ವೆಚ್ಚವಾಗಿದೆ. ದೂರದರ್ಶನದಲ್ಲಿ ಜಂಬೂಸವಾರಿ ನೇರಪ್ರಸಾರ ಮಾಡಿದ್ದಕ್ಕೆ 6,22,513 ರೂ., ದಸರಾ ಆನೆಗಳು ಹಾಗೂ ಕಾವಾಡಿಗರ ವಿಮೆಗೆ 24 ಸಾವಿರ ರೂ. ಭರಿಸಲಾಗಿದೆ ಎಂದು ವಿವರಿಸಿದರು. ದಸರಾ ಸಂಬಂಧ ಉಪ ಸಮಿತಿ ಸಭೆಗೆ ಲೇಖನ ಸಾಮಗ್ರಿಗೆ 3245 ರೂ., ಉನ್ನತ ಮಟ್ಟದ ಸಮಿತಿ ಸಭೆ ಶಿಷ್ಟಾಚಾರಕ್ಕೆ ಹೋಟೆಲ್‌ ಮತ್ತು ಇತರೆ ವೆಚ್ಚಗಳಿಗೆ 47250 ರೂ., ದಸರಾ ಸಂಬಂಧ ನಡೆದ ವಿವಿಧ ಸಭೆಗಳಿಗೆ ಕಾಫಿ, ಟೀ, ಸ್ನ್ಯಾಕ್ಸ್‌ಗೆ 40,878 ರೂ., ಬಿಎಸ್‌ ಎನ್‌ಎಲ್‌ಗೆ 78,668 ರೂ., ಉನ್ನತ ಮಟ್ಟದ ಸಭೆಗೆ ಮತ್ತು ವಿಶೇಷಾಧಿಕಾರಿಗಳ ಕಚೇರಿಗೆ ಲೇಖನ ಸಾಮಾಗ್ರಿ ಖರೀದಿಗೆ 90,919 ರೂ.,

ಜಂಬೂ ಸವಾರಿ ನೇರ ವೀಕ್ಷಣೆ ವಿವರಣೆ ಬಿತ್ತರಿ ಸಲು ಆಕಾಶವಾಣಿಗೆ 67 ಸಾವಿರ ರೂ. ಪಾವತಿಸಲಾಗಿದೆ ಎಂದರು. ದಸರಾ ಕಾರ್ಯಕ್ರಮಗಳ ಫೋಟೋ, ವೀಡಿಯೋ ಗ್ರಾμಗೆ 95 ಸಾವಿರ ರೂ., ಸ್ವತ್ಛತೆ ನಿರ್ವಹಣೆಗೆ 10, 76,072 ರೂ., ವಾರ್ತಾ ಇಲಾಖೆಗೆ 64,412 ರೂ., ದಸರಾ ರಂಗೋತ್ಸವ ಕಾರ್ಯಕ್ರಮಕ್ಕೆ ಅಂದಾಜು 10 ಲಕ್ಷ ರೂ. ವೆಚ್ಚವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ನಾಗೇಂದ್ರ, ಮೇಯರ್‌ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ರಾಜೀವ್‌, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next