Advertisement

ದಸರಾ ಯೋಗ ಚಾರಣಕ್ಕೆ ಚಾಲನೆ 

11:50 AM Oct 14, 2018 | Team Udayavani |

ಮೈಸೂರು: ಆರೋಗ್ಯ ಕೆಟ್ಟ ಮೇಲೆ ಧೃತಿಗೆಡುವ ಬದಲು ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಒಳ್ಳೆಯದು. ಆರೋಗ್ಯ ಸುಸ್ಥಿರವಾಗಿರಲು ಎಲ್ಲರೂ ಯೋಗಾಭ್ಯಾಸ ಮಾಡಬೇಕಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಸಲಹೆ ನೀಡಿದರು.

Advertisement

ಯೋಗ ದಸರಾ ಉಪಸಮಿತಿ ವತಿಯಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಶನಿವಾರ ಆಯೋಜಿಸಿದ್ದ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯ ಸರಿಯಿಲ್ಲದಿದ್ದರೆ ಆತ ಏನನ್ನೂ ಮಾಡಲು ಸಾಧ್ಯಲ್ಲ. ಅದಕ್ಕಾಗಿ ಎಲ್ಲರೂ ಪ್ರತಿದಿನ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.

ಯೋಗದಿಂದ ಮನಸ್ಸು ಕೂಡ ಉಲ್ಲಾಸವಾಗಿರಲಿದೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಚಾಮುಂಡಿಬೆಟ್ಟದ ಪಾದದ ಬಳಿ ಹಸಿರು ನಿಶಾನೆ ತೋರುವ ಮೂಲಕ ಚಾರಣಕ್ಕೆ ಚಾಲನೆ ನೀಡಲಾಯಿತು. ಬಳಿಕ ನೂರಾರು ಯೋಗಾಸಕ್ತರು ಸಹಸ್ರ ಮೆಟ್ಟಿಲೇರಿ ಚಾಮುಂಡಿಬೆಟ್ಟಕ್ಕೆ ತೆರಳಿ ದುರ್ಗಾ ನಮಸ್ಕಾರ ಹಾಗೂ ಯೋಗಪ್ರದರ್ಶನ ನೀಡಿದರು.

ಈ ಸಂದರ್ಭದಲ್ಲಿ ಸಾಮಿ ಸರಸ್ವತಿವಿದ್ಯಾ ಕೇಂದ್ರದ ನಾರಾಯಣ ಗುರೂಜಿ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಜಿಲ್ಲಾ ಪಂಚಾಯತ್‌ ಸಿಇಒ ಕೆ.ಜ್ಯೋತಿ, ಸಂಸದ ಪ್ರತಾಪ್‌ ಸಿಂಹ ಪತ್ನಿ ಅರ್ಪಿತಾ ಸೇರಿದಂತೆ ಇನ್ನಿತರರು ಹಾಜರಿದ್ದರು. ಮೈಸೂರಿನ ಯೋಗ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next