Advertisement

ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ

12:12 AM Sep 30, 2019 | Lakshmi GovindaRaju |

ಮೈಸೂರು: ಕುಸ್ತಿ ಪಟುಗಳ ಮಾಸಾಶನವನ್ನು 500 ರೂ.ಗಳಿಂದ ಒಂದು ಸಾವಿರ ರೂ.ಗೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ನಗರದ ವಸ್ತುಪ್ರದರ್ಶನ ಆವರಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಸಿ ಮಾತನಾಡಿದ ಅವರು, ಮೈಸೂರು ಅರಮನೆಗಳ ನಗರಿಯಂತೆ ಗರಡಿ ಮನೆಗಳ ನಗರವೂ ಹೌದು.

Advertisement

ಮಹಾರಾಜರ ಕಾಲದಲ್ಲಿ ಕುಸ್ತಿ ಜನಪ್ರಿಯ ಕ್ರೀಡೆಯಾಗಿ ಉತ್ತುಂಗಕ್ಕೇರಿತ್ತು. ಕುಸ್ತಿ ಪಂದ್ಯಾ ಮೈಸೂರು ದಸರಾದೊಂದಿಗೆ ಹಾಸುಹೊಕ್ಕಾಗಿದೆ. ಸರ್ಕಾರದಿಂದ ಕುಸ್ತಿಪಟುಗಳಿಗೆ ನೀಡಲಾಗುತ್ತಿದ್ದ 500 ರೂ. ಮಾಶಾಸನದ ಬದಲಿಗೆ ಒಂದು ಸಾವಿರ ರೂ. ನೀಡಲಾಗುವುದು. ಜೊತೆಗೆ ಉಳಿಕೆ ಬಾಕಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ನಂತರ 3 ಕೋಟಿ ರೂ. ವೆಚ್ಚದ ದಸರಾ ಕುಸ್ತಿ ಪಂದ್ಯಾವಳಿ ವೀಕ್ಷಣೆ ಮಾಡುವ ಪ್ರೇಕ್ಷಕರ ಗ್ಯಾಲರಿಯ ಛಾವಣಿ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.

ಕೆ.ಜಿ ಕೊಪ್ಪಲಿನ ಪೈಲ್ವಾನ್‌ ಡಿ.ಕರಿಗೌಡ ಅವರು ಕುಸ್ತಿ ಪಂದ್ಯಾವಳಿಯ ಜ್ಯೋತಿಯನ್ನು ತಂದರು. ಬಳಿಕ ಜ್ಯೋತಿಯನ್ನು ಮುಖ್ಯಮಂತ್ರಿಗಳು ಕುಸ್ತಿ ಪಂದ್ಯಾವಳಿಯ ಆಯೋಜಕರಿಗೆ ನೀಡಿದರು. ಮೊದಲನೆಯ ಕುಸ್ತಿಯು ಕನಕಪುರದ ಸ್ವರೂಪ್‌ಗೌಡ ಮತ್ತು ನಜರ್‌ಬಾದ್‌ನ ಚೇತನ್‌ಗೌಡ ನಡುವೆ ಹಾಗೂ ಕಿರಿಯ ವಯಸ್ಸಿನ ಪೈಲ್ವಾನ್‌ ಮುಖೇಶ್‌ಗೌಡ ಮತ್ತು ಶ್ರೇಯಸ್‌ ನಡುವೆ ಸಮ ಬಲದ ಕುಸ್ತಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ , ಶಾಸಕ ಎಲ್‌. ನಾಗೇಂದ್ರ, ಪಾಲಿಕೆ ಮೇಯರ್‌ ಪುಷ್ಪಲತಾ ಜಗನ್ನಾಥ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next