ಶ್ರೀರಂಗಪಟ್ಟಣ: ಕೊರೊನಾ ನಿರ್ನಾಮ ವಾಗಿ, ಇಲ್ಲದಂತಾದರೇ ಮುಂದಿನ ವರ್ಷ 5 ದಿನಗಳ ಕಾಲ ದಸರಾ ಆಚರಿಸೋಣ. ಕೊರೊನಾ ಮುಕ್ತವಾಗಲು ತಾಯಿ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸೋಣ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಶ್ರೀರಂಗಪಟ್ಟಣದ ಶ್ರೀರಂಗವೇದಿಕೆಯಲ್ಲಿ ನಡೆದ ಶ್ರೀರಂಗಪಟ್ಟಣ ದಸರಾ 2021ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಚಿವ ಡಾ.ಕೆ.ಸಿ.ನಾರಾ ಯಣ್ ಗೌಡ ಮಾತನಾಡಿ, ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಮಾಡಿ ರೋದು ಈ ಜಿಲ್ಲೆಯ ಮಣ್ಣಿನ ಮಗ, ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು. ಇದು ನಮ್ಮೆಲ್ಲರ ಹೆಮ್ಮೆ ಎಂದು ನಾರಾಯಣ ಗೌಡ ಅವರು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಂಗ ಪಟ್ಟಣ ದಸರಾ ಹಿನ್ನೆಲೆಯಲ್ಲಿ ನಡೆದ ಹಲವು ಕ್ರೀಡೆಗಳಲ್ಲಿ ಭಾಗವಹಿಸಿ, ಮನ ರಂಜನೆ ನೀಡಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೋವಿಡ್ ನಿರ್ಮೂ ಲನೆಗಾಗಿ ಹಗಲು- ರಾತ್ರಿ ದುಡಿದ ವಿವಿಧ ಇಲಾಖೆಗಳ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನವನ್ನು ಮಾಡಲಾಯಿತು.
ಇದನ್ನೂ ಓದಿ;- ದಸರಾ ಬೊಂಬೆಗಳ ಪ್ರದರ್ಶನ ಜನಾಕರ್ಷಣೆ
ಪ್ರತ್ಯೇಕ ಹಣ ಮೀಸಲು ಅಗತ್ಯ: ಶಾಸಕ ರವೀಂದ್ರ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಶ್ರೀರಂಗಪಟ್ಟಣ ಮೊದಲು ದಸರಾ ಮಾಡುತ್ತಿ ದ್ದಂತಹ ಜಾಗವಾಗಿದ್ದು, ಮುಂದುವರಿಸಿ ಕೊಂಡು ಹೋಗಲಿ. ಶ್ರೀರಂಗಪಟ್ಟಣಕ್ಕೆ ಪ್ರತ್ಯೇಕ ಹಣ ಮೀಸಲಿಡುವಂತೆ ಆಗ್ರಹಿಸಿದರು.ಕೆಆರ್‌ಎಸ್ ಗ್ರಾಮ ಕಂದಾಯ ಗ್ರಾಮವಾಗಬೇಕು ಎಂಬ ನಿಟ್ಟಿನಲ್ಲಿ ಕೆಆರ್‌ಎಸ್ ಗ್ರಾಮ ಮ್ಯಾಪ್‌ನಲ್ಲೇ ಇಲ್ಲ, ಅದನ್ನ ಪರಿಗಣಿಸಿ ಎಂದು ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದಾರೆ. ಇವತ್ತು ಕೆಆರ್‌ಎಸ್ ಗ್ರಾಮ ಎಂದು ಘೋಷಣೆಯಾಗಿದ್ದು, ಕಂದಾಯ ಗ್ರಾಮವಾಗಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಧನ್ಯವಾದ ಸಲ್ಲಿಸಿದರು.