ಕೊಟ್ಟೂರು: ಇಲ್ಲಿನ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಪಲ್ಲಕ್ಕಿಯಲ್ಲಿ ಸ್ವಾಮಿಯ ಖಡ್ಗ ಇರಿಸಿ ದೇವಸ್ಥಾನದಿಂದ ಬನ್ನಿಮಂಟಪಕ್ಕೆ ಸಂಜೆ 4:30ರ ಹೊತ್ತಿನಲ್ಲಿ ಹ್ಯಾಳ್ಯಾ ರಸ್ತೆಯಲ್ಲಿರುವ ಬನ್ನಿ ಮಂಟಪಕ್ಕೆ ನೇಮಿಸಿದ್ದ ಅರ್ಚಕರಿಂದ ಶ್ರೀ ಸ್ವಾಮಿ ಖಡ್ಗವು ಬನ್ನಿ ಮಂಟಪಕ್ಕೆ ತೆರಳಿತು. ಮಂಟಪದ ಕಟ್ಟೆ ಮೇಲೆ ಪಲ್ಲಕ್ಕಿ ಇರಿಸಿದ ನಂತರ ಶಾನುಭೋಗರ ಮನೆಯವರು ಅಕ್ಷರದಲ್ಲಿ ಬರೆದ ಹಾಳೆಯನ್ನು ಬನ್ನಿ ಮರಕ್ಕೆ ಕಟ್ಟಿದರು. ಅಂತರ ಕಾಪಾಡಿಕೊಂಡು ನೆರೆದಿದ್ದ ಭಕ್ತ ಸಮೂಹ ದೂರದಿಂದಲೇ ತೆಂಗಿನಕಾಯಿಗಳನ್ನು ಹೊಡೆದು ದಸರಾ ಶುಭಾಶಯ ಕೋರಿದರು.
ಕೊಟ್ಟೂರಿನ ಜನತೆ ಮನೆಯಲ್ಲಿಯೇ ದಸರಾ ಆಚರಿಸಿದರು. ಸಿಪಿಐ ಮುರುಗೇಶ ನೇತೃತ್ವದಲ್ಲಿ ಪಿಎಸ್‌ಐ ನಾಗಪ್ಪ ಹಾಗೂ ಸಿಬ್ಬಂದಿ ಭದ್ರತೆಏರ್ಪಡಿಸಿದ್ದರು. ಕೊಟ್ಟೂರು ಕ್ರಿಯಾಮೂರ್ತಿಗಳಾದಶಿವಪ್ರಕಾಶ ಕೊಟ್ಟೂರು ದೇವರು, ಸಾನ್ನಿಧ್ಯದಲ್ಲಿಸರಳ ರೀತಿಯಲ್ಲಿ ಉತ್ಸವ ನಡೆಯಿತು. ಧರ್ಮಕರ್ತ ಗಂಗಾಧರ ಪಾಲ್ಗೊಂಡಿದ್ದರು.
ಉಚ್ಚಂಗಿದುರ್ಗದಲ್ಲಿ ದಸರಾ ಮಹೋತ್ಸವ :
ಹರಪನಹಳ್ಳಿ: ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ತಾಲೂಕಿನ ಉಚ್ಚಂಗಿದುರ್ಗದಲ್ಲಿ ದಸರಾ ಮಹೋತ್ಸವ ಸರಳವಾಗಿ ನಡೆಯಿತು9 ದಿನಗಳ ಕಾಲ ಸರಳವಾಗಿ ದೇವಿಗೆ ವಿವಿಧ ಅಲಂಕಾರ ಮಾಡಿಪೂಜೆ ಸಲ್ಲಿಸಲಾಯಿತು.
ಶುಕ್ರವಾರ ಬನ್ನಿ ಉತ್ಸವದೊಂದಿಗೆ ದಸರಾಮುಕ್ತಾಯವಾಯಿತು. ಈ ಬಾರಿ ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಅರಸೀಕೆರೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಕಿರಣ್‌ಕುಮಾರ್ ನೇತೃತ್ವದಲ್ಲಿ ಬನ್ನಿ ಕಟ್ಟೆಗೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಧಾರ್ಮಿಕ ಕಾರ್ಯಕ್ರಮಗಳನ್ನುಮಾಡುವ ಕೆಲವೇ ಜನರಿಗೆ ಮಾತ್ರ ಬನ್ನಿ ಮಂಟಪದ ಒಳಗೆ ಪ್ರವೇಶ ನೀಡಿದ್ದು ಸರಳವಾಗಿ ಕಾರ್ಯಕ್ರಮ ಮುಗಿದ ಮೇಲೆ ಬಾವುಟ ಹರಾಜು ನಡೆಯಿತು. ಮುದಿಯಪ್ಪರ ಕುಮಾರ್ 3 ಲಕ್ಷ ರೂ.ಗಳಿಗೆ ಹರಾಜು ಮಾಡಿಕೊಂಡರು. ಧಾರ್ಮಿಕ ಕಾರ್ಯಕ್ರಮ ಮುಗಿದ ಮೇಲೆ ಅರ್ಚಕರಾದ ಮರಿಯಪ್ಪಳಮಂಜುನಾಥ್ ಬನ್ನಿ ಮರಕ್ಕೆ ಅಂಬು ಛೇದನ ಮಾಡಿದರು.
ಮರದಿಂದ ಬನ್ನಿ ಕಿತ್ತು ದೇವಿಗೆ ಅರ್ಪಿಸಿ ಪ್ರತಿಯೊಬ್ಬರೂ ತಮ್ಮತಮ್ಮ ಮನೆಯಲ್ಲಿಯೇ ಬನ್ನಿಯನ್ನ ಹಂಚಿಕೊಂಡರು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಮಾತನಾಡಿ ಉಚ್ಚಂಗೆಮ್ಮ ಶಕ್ತಿ ದೇವತೆಯಾಗಿದ್ದು, ಬನ್ನಿ ಉತ್ಸವ ಸರಳವಾಗಿ ಆಚರಿಸಲಾಗಿದ್ದು ಭಕ್ತರಿಗೆಉತ್ತಮ ಮಳೆ ಬೆಳೆ ಆರೋಗ್ಯ ಕೊಟ್ಟುಕಾಪಾಡಲಿ ಎಂದು ಪ್ರಾರ್ಥಿಸಿದರು.
ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರು ದೇವಿಯ ಸೇವೆ ಮಾಡಿದರು. ಗ್ರಾಮಸ್ಥರು, ದೇವಸ್ಥಾನ ಸಿಬ್ಬಂದಿ, ಭಕ್ತರು ಪಾಲ್ಗೊಂಡಿದ್ದರು.