Advertisement

ದಸರಾ ಫ‌ಲಪುಷ್ಪ  ಪ್ರದರ್ಶನಕ್ಕೆ ತಾರಾ ಮೆರಗು

10:14 AM Sep 20, 2017 | |

ಮೈಸೂರು: ದಸರಾ ಹಿನ್ನೆಲೆಯಲ್ಲಿ ನಗರದ ನಿಶಾದ್‌ಬಾಗ್‌ (ಕುಪ್ಪಣ್ಣ ಪಾರ್ಕ್‌)ನಲ್ಲಿ ಶನಿವಾರದಿಂದ ಅ.1ರವರೆಗೆ ಫ‌ಲ ಪುಷ್ಪ ಪ್ರದರ್ಶನ ನಡೆಯಲಿದ್ದು, ಫ‌ಲಪುಷ್ಪ ಪ್ರದರ್ಶನದ ವೇದಿಕೆಯಲ್ಲಿ ಪ್ರತಿನಿತ್ಯ ಸಂಜೆ ಸಿನಿಮಾ ತಾರೆಯರು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

Advertisement

ಸೆ.24ರಂದು ಯೋಗೋತ್ಸವ: ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಸೆ.24 ರಂದು ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಯೋಗೋತ್ಸವ ಕಾರ್ಯ ಕ್ರಮ ನಡೆಯಲಿದ್ದು, ಸುಮಾರು 5 ಸಾವಿರ ಜನರನ್ನು ನಿರೀಕ್ಷಿಸಲಾಗಿದೆ. 25 ರಿಂದ 28 ಆಸನಗಳನ್ನು ಈ ವೇಳೆ
ಪ್ರದರ್ಶಿಸಲಾಗುವುದು.

ಬಿಗಿ ಪೊಲೀಸ್‌ ಬಂದೋಬಸ್ತ್: ದಸರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 5056 ಪೊಲೀಸರನ್ನು ಭದ್ರತೆಗೆ ನಿಯೋಜಿಸ ಲಾಗುತ್ತಿದೆ. ಭದ್ರತೆಗಾಗಿ ನಗರದಲ್ಲಿ ಈಗಾಗಲೇ ಅಳವಡಿಸಿ
ರುವ ಕಾಯಂ ಸಿಸಿ ಕ್ಯಾಮರಾಗಳ ಜತೆಗೆ ತಾತ್ಕಾಲಿಕವಾಗಿ ಅರಮನೆ, ಬನ್ನಿಮಂಟಪ ಮೈದಾನ, ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗ ಮತ್ತು ಇತರ ಸ್ಥಳಗಳಲ್ಲಿ ಒಟ್ಟು 66 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಬೆಟ್ಟಕ್ಕೆ ಖಾಸಗಿ ವಾಹನ ಪ್ರವೇಶ ನಿರ್ಬಂಧ: ಸೆ.22 ರಿಂದ 24 ಹಾಗೂ ಸೆ.28ರಿಂದ ಅ.2ರವರೆಗೆ ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 9.30ರವರೆಗೆ ಖಾಸಗಿ ವಾಹನಗಳನ್ನು ತಾವರೆ ಕಟ್ಟೆಯಿಂದ ಚಾಮುಂಡಿಬೆಟ್ಟಕ್ಕೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ. ಜೊತೆಗೆ, ಲಲಿತ ಮಹಲ್‌ ಹೆಲಿಪ್ಯಾಡ್‌
ಬಳಿಯಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಸಾರಿಗೆ ಬಸ್ಸುಗಳ ಸೇವೆ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next