Advertisement
ದಸರಾ ಉತ್ಸವ, ಪಟ್ಟಾಭಿ ಷೇಕ, ನವ ದುರ್ಗೆಯರು, ಜಾನಪದ ಕಲಾವಿ ದರು, ದೇಸಿ ನೃತ್ಯ, ಗಿರಿಜಾ ಕಲ್ಯಾಣ, ಮಹಾವಿಷ್ಣು, ಶ್ರೀರಂಗ ನಾಥ, ಶ್ರೀಕೃಷ್ಣ ರುಕ್ಕಿಣಿ, ಗೋಪಿಕೆಯರು, ಸಪ್ತ ಋಷಿಗಳ ಯಾಗ, ಶ್ರೀರಾಘ ವೇಂದ್ರರ ಬೃಂದಾವನ, ಗಜಗರಿ, ವಿನಾ ಯಕ, ಯತಿಗಳು, ಸಿಪಾಯಿಗಳ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ.
Related Articles
Advertisement
ನವಧಾನ್ಯ: ಕ್ರಿಕೆಟ್ ಆಟ, ಕಿರಾಣಿ ಅಂಗಡಿ, ಬಟ್ಟೆ ಇತರ ಅಂಗಡಿಗಳ ಚಿತ್ರಣ ಕೂಡ ಇಲ್ಲಿ ಕಾಣ ಸಿಗು ತ್ತದೆ. ಬೊಂಬೆಗಳ ಜತೆಗೆ ನವಧಾನ್ಯಗಳ ಪೈರು ಗಳನ್ನು ಪ್ರದರ್ಶನಕ್ಕೆ ಇರಿಸಿರುವುದು ವಿಶೇಷ. ಸಿಹಿತಿಂಡಿ: ಶ್ರೀರಂಗಪಟ್ಟಣದಲ್ಲಿ ದಸರಾ ಬೊಂಬೆಗ ಳನ್ನು ವೀಕ್ಷಿಸಲು ವಿವಿಧ ಗ್ರಾಮಗಳಿಂದ ಜನರು ಭೇಟಿ ನೀಡುತ್ತಿದ್ದಾರೆ. ಬೊಂಬೆಗಳನ್ನು ವೀಕ್ಷಿಸಲು ಬರುವವರಿಗೆ ಕೃಷ್ಣಭಟ್ ದಂಪತಿ ಸಿಹಿತಿಂಡಿ ಕೊಟ್ಟು ಅವರ ಸಂತಸ ಇಮ್ಮಡಿಗೊಳಿಸುತ್ತಿದ್ದಾರೆ.
ಪಟ್ಟಣದ ನಮ್ಮ ಮನೆಯಲ್ಲಿ ನಮ್ಮ ತಾಯಿ 40 ವರ್ಷಗಳ ಹಿಂದೆ ಮನೆಯಲ್ಲಿ ದಸರಾ ಬೊಂಬೆ ಕೂರಿ ಸುವ ಪರಿಪಾಠ ಹೊಂದಿ ಗೊಂಬೆಗಳನ್ನು ವೇದಿಕೆ ನಿರ್ಮಿಸಲು ಒಂದು ಸಣ್ಣ ವೇದಿಕೆ ಮಾಡಿ ದಶಕದ ಈಚೆಗೆ ದಸರಾ ಬೊಂಬೆಗಳ ಸಾರ್ವಜನಿಕ ಪ್ರದರ್ಶನ ಏರ್ಪಡಿಸುತ್ತಿದ್ದೇವೆ. ಇಲ್ಲಿರುವ ಸಹ ಸ್ರಾರು ಬೊಂಬೆ ಗಳ ಪೈಕಿ ನೂರಾರು ಬೊಂಬೆಗಳನ್ನು ಪತ್ನಿ ಸರ್ವ ಮಂಗಳಾ ಮೂಲಕ ಅವರೇ ಸಿದ್ಧಪಡಿಸಿದ್ದಾರೆ. ದಸರಾ ಉತ್ಸವ ಮುಗಿದ ಒಂದು ವಾರದವರೆಗೂ ಬೊಂಬೆಗಳ ಪ್ರದರ್ಶನ ಇರುತ್ತದೆ ಎಂದು ಕೃಷ್ಣಭಟ್ ತಿಳಿಸಿದರು.