ಮುಂಬಯಿ, ಅ. 27: ಮಹಾನಗರದಲ್ಲಿನ ಚರ್ಚ್‌ಗೇಟ್ ಎಂಎಲ್‌ಎ ಹಾಸ್ಟೇಲ್‌ನ ಕ್ಯಾಂಟಿನ್‌ನಲ್ಲಿ ಶ್ರೀ ದುರ್ಗಾಂಬಿಕಾ ಭಜನ ಮಂಡಳಿಯಲ್ಲಿ ಕ್ಯಾಂಟೀನ್‌ನ ಸಂಚಾಲಕರಾದ ಅಜಂತಾ ಕೆಟರರ್ ಜಯರಾಮ ಶೆಟ್ಟಿ ಇನ್ನ ಸಾರಥ್ಯ ಹಾಗೂ ಕ್ಯಾಂಟೀನ್ ಉದ್ಯೋಗಿಗಳ ಸಹಕಾರದೊಂದಿಗೆ 47ನೇ ವಾರ್ಷಿಕ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಅ. 17ರಂದು ಶ್ರೀ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ದಿನಂಪ್ರತಿ ಶ್ರೀ ದುರ್ಗಾ ಸನ್ನಿಧಿಯಲ್ಲಿ ಪೂಜೆ ಹಾಗೂ ರಾತ್ರಿ ಭಜನೆ, ಮಂಗಳಾರತಿ ನೇರವೇರಿಸಲಾಯಿತು. ಸನ್ನಿಧಾನದಲ್ಲಿ ಆರಾಧಿಸುತ್ತಿರುವ ಅಣ್ಣಪ್ಪ, ಪಂಜುರ್ಲಿ ದೈವದ ಪೂಜೆ, ಭಜನೆ, ಮಹಾಕಾಳಿ ಅಮ್ಮನವರ ಪೂಜೆ, ಮಂಗಳಾರತಿ ನಡೆಯಿತು. ದಸರಾ ಮಹೋತ್ಸವ ಪ್ರಯುಕ್ತ ಅ. 25ರಂದು ವಿಜಯ ದಶಮಿಯಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಜನೆ, ಕಳಶ ಪೂಜೆ, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಿ ಸಂಜೆ ಕಳಶ ವಿಸರ್ಜನೆ ನಡೆಯಿತು.
ಮೀರಾರೋಡ್‌ನ ವಿದ್ವಾನ್ ಸುಬ್ರಹ್ಮಣ್ಯ ಭಟ್ ಪೌರೋಹಿತ್ಯದಲ್ಲಿ ಕಾರ್ತಿಕ್ ಭಟ್, ವಿಟ್ಠಲ ಶೇರಿಗಾರ್ ಸಹಕಾರದೊಂದಿಗೆ ಧಾರ್ಮಿಕ ಪೂಜಾಧಿಗಳನ್ನು ನೇರವೇರಿ ತೀರ್ಥ ಪ್ರಸಾದ ವಿತರಿಸಲಾಯಿತು.
ದಸರಾ ಮಹೋತ್ಸವದ ರೂವಾರಿ ಜಯರಾಮ ಶೆಟ್ಟಿ ಮಾತನಾಡಿ, ದೈವ-ದೇವರ ಕೃಪೆ ಇದ್ದರೆ ಯಾವುದೇ ಕಷ್ಟ ಬಂದರೂ ಎದುರಿಸಿ ಸಾಧನೆ ಸಿದ್ಧಿಸಬಹುದು. ಕೊರೊನಾ ಮಹಾಮಾರಿ ಜಗತ್ತಿಗೆ ಕಂಟಕವಾಗಿದ್ದು, ನಾವು ದೈವ – ದೇವರ ಆರಾಧನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ದೈವ-ದೇವರ ಅನುಗ್ರಹದಿಂದ ಮಾತ್ರ ಆರೋಗ್ಯ, ನೆಮ್ಮದಿ ಜೀವನ ಮತ್ತು ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ನವೀನ್ ಶೆಟ್ಟಿ, ರಾಜ ಪೂಜಾರಿ, ವಿಟ್ಠಲ್ ಶೇರಿಗಾರ್, ಪ್ರವೀಣ್ ಶೆಟ್ಟಿ, ಸುಭಾಷ್ ನಾಯಕ್, ಚಂದ್ರ ಸುವರ್ಣ, ಯೋಗೇಶ್ ಪುತ್ರನ್, ದಿನೇಶ್ ಪುತ್ರನ್, ಭಾಸ್ಕರ ಎನ್. ಮೊಗವೀರ, ಸೋಮಶೇಖರ್ ಬಂಗೇರ, ಜಯ ಬಂಗೇರ, ಕೃಷ್ಣ ಹರೀಶ್ ಖೇಡೆಕರ್, ಸುರೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಯೋಗೇಶ್ ಬಂಗೇರ, ದೀಪಕ್ ಶೆಟ್ಟಿ, ರಮೇಶ್ ಬಿಲ್ಲವ, ನವೀನ್ ಶೆಟ್ಟಿ ವಿಕ್ರೋಲಿ ಮತ್ತಿತರರು ಸಹಕರಿಸಿದರು.