Advertisement

Dasara Dolls: ಕಣ್ಮನ ಸೆಳೆಯುತ್ತಿರುವ ದಸರಾ ಗೊಂಬೆಗಳು

10:54 AM Oct 16, 2023 | Team Udayavani |

ದೇವನಹಳ್ಳಿ: ಹಿಂದಿನ ಕಾಲದಿಂದಲೂ ಸಂಗ್ರಹಿಸಿ ಕೊಂಡು ಬಂದ ಚೆಂದದ ಗೊಂಬೆಗಳನ್ನು ಕೂರಿಸಿ ಅಲಂಕರಿಸುವುದೇ ದೊಡ್ಡ ವೈಭವ. ಶರನ್ನವರಾತ್ರಿ ಯಲ್ಲಿ ಗೊಂಬೆಗಳ ಪೂಜೆಗೆ ಆದ್ಯತೆ ಯಂತೆಯೇ ಜಿಲ್ಲೆಯಾದ್ಯಂತ ಹಾಗೂ ನಗರದ ಹಾಗೂ ತಾಲೂಕಿನ ವಿವಿಧ ಹಳ್ಳಿಯ ಮನೆ ಗಳಲ್ಲಿ ದಸರಾ ಗೊಂಬೆಗಳನ್ನು ಜೋಡಿಸಿರುವುದು ಗಮನ ಸೆಳೆಯಿತು.

Advertisement

ಮನೆಗಳಲ್ಲಿ ದೇವರ ಮನೆಗಳಲ್ಲಿಯೇ ಪಟ್ಟದ ಗೊಂಬೆಗಳನ್ನು ಕೂರಿಸಿ, ಪೂಜೆ ನೆರ ವೇರಿಸುತ್ತಿದ್ದಾರೆ. ಇನ್ನು ಕೆಲವು ಮನೆಗಳಲ್ಲಿ ಪದ್ಧತಿಯನ್ನು ಬಿಡದೇ ಮುಂದುವರೆ ಸಿ ಕೊಂಡು ಬರುತ್ತಿದ್ದಾರೆ.

ಮನೆಯ ಮೂಲೆ ಮೂಲೆ ಗಳಲ್ಲಿ ಸೇರಿದ್ದ ನೂರಾರು ಗೊಂಬೆಗಳನ್ನು ಇದೀಗ ಮನೆಯ ಹಾಲ್‌ನಲ್ಲಿ ಜಾಗ ಮಾಡಿಕೊಂಡು ಮೂರರಿಂದ ಹನ್ನೊಂದು ಸ್ಟೆಪ್‌ವರೆಗೂ ವಿವಿಧ ಆಕೃತಿಯ ಗೊಂಬೆಗಳನ್ನು ಕೂರಿಸ ಲಾ ಗಿದೆ. ರಾಜ ಪ್ರದರ್ಶನ ದೇವತಾ ಎಂಬ ಮಾತಿನಂತೆ ಚಂದದ ಪಟ್ಟದ ಗೊಂಬೆಗೆ ರಾಜ- ರಾಣಿಯಂತೆ ಅಲಂಕಾರ ಮಾಡಿ ಅಗ್ರ ಸ್ಥಾನದಲ್ಲಿ ಮಂಟಪ ನಿರ್ಮಿಸಿ ಅದ ರಲ್ಲಿ ಪ್ರತಿಷ್ಠಾಪಿಸಿದ್ದಾರೆ. ನಂತರದ ಸಾಲುಗಳಲ್ಲಿ ದಶವತಾರ, ನವದುರ್ಗಿ ಯರು, ಅಷ್ಟಲಕ್ಷ್ಮೀ, ಕೃಷ್ಣವತಾರ, ಕಾಳಿಂಗ ಮರ್ಧನ, ಶ್ರೀರಾಮ ಪಟ್ಟಾಭಿಶೇಕ, ದಸರೆಯ ಪ್ರಮುಖ ದೇವತೆಗಳ ದುರ್ಗಿ ಹಾಗೂ ಶಾರದೆಯ ಗ್ರಹ ಪುಸ್ತಕ ವಿವಿಧ ದೇವತೆಗಳ ಗ್ರಹಗಳು, ವಿವಾಹ ಮಹೋ ತ್ಸವದ ವಿವಿಧ ವಾಧ್ಯಗಳು, ಪ್ರಾಣಿ, ಪಕ್ಷಿಗಳ ಹಾಗೂ ಇತರೆ ಮರಗಿಡಗಳನ್ನು ಆಕರ್ಷನೀಯವಾಗಿ ಜೋಡಿ ಸಲಾಗಿದೆ. ಪ್ರತಿವರ್ಷ ನವರಾತ್ರಿ ಪಾಡ್ಯದಿನದಿಂದಲೇ ಗೊಂಬೆಗಳನ್ನು ಜೊಡಿಸಿ ಪೂಜಿಸುತ್ತಾ ಬರುತ್ತಾರೆ. ನವರಾತ್ರಿ ಮುಗಿಯುವವರೆಗೂ ಪ್ರತಿ ದಿನ ಸಂಜೆ ಪೂಜೆ ಮಾಡುತ್ತಾರೆ. ಬರುವ ಮಕ್ಕಳಿಗೆ ಚಿಕ್ಕದೋಸೆ, ಚಾಕ್‌ಲೇಟ್‌, ಬರ್ಫಿ, ಇನ್ನಿತರೆ ವಸ್ತುಗಳನ್ನು ಮಕ್ಕಳಿಗೆ ಪ್ರಸಾದವಾಗಿ ನೀಡುತ್ತಾರೆ. ಪೂರ್ವಜರಿಂದ ಹಿಡಿದು ಆಧುನಿಕ ಜಗತ್ತಿನ ವಿದ್ಯಾಮಾನ ಬಿಂಬಿ ಸುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿಜಯದಶಮಿ ದಿನದಂದು ಗೊಂಬೆಗಳಿಗೆ ತೆರೆ ಎಳೆದು ಅದ್ಧೂರಿಯಾಗಿ ಇದನ್ನು ಆಚರಿಸಲಾಗಿದೆ.

ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ, ಕನ್ನಮಂಗಲ ಗ್ರಾಮದ ಮಾರುತಿ ವಿದ್ಯಾ ಮಂದಿರ ಶಾಲೆಯಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್‌ ಅವರ ಶಾಲೆಯಲ್ಲಿ ಅವರ ಪತ್ನಿಯರಾದ ಗಿರಿಜಾ ಶ್ರೀನಿವಾಸ್‌ ಹಾಗೂ ರಾಧಾ ರ್ಶರೀನಿವಾಸ್‌ ಹಾಗೂ ಸೊಸೆ ಚೈತ್ರ ಹಾಗೂ ಶಾಲೆಯ ಶಿಕ್ಷಕರು ಮತ್ತು ಶಾಲಾ ಮಕ್ಕಳು ಜೊತೆಗೂಡಿ ಶಾಲೆಯಲ್ಲಿ ನೂರಾರು ಮಣ್ಣಿನ ಬೊಂಬೆಗಳನ್ನು ಜೋಡಿಸಿ ಕೂರಿಸಿರುವುದು. ಗಮನ ಸೆಳೆಯುತ್ತಿದೆ.ಸುಮಾರು 20ದಿನಗಳ ಕಾಲ ವಿವಿಧ ರೀತಿಯಲ್ಲಿ ಜೋಡಿಸಿ ಗೊಂಬೆಗಳು ಗಮನ ಸೆಳೆಯುವಂತೆ ಮಾಡಿದ್ದಾರೆ. ಶ್ರೀನಿವಾಸ್‌ ಅವರ ಮನೆಯಲ್ಲಿ ಕೂರಿಸಿರುವ ಗೊಂಬೆಗಳು ರಾಘ ವೇಂದ್ರ ಜೀವನ ಚರಿತ್ರೆ, ಸಂಪೂರ್ಣರಾಮಾಯಣ, ಶ್ರೀಕೃಷ್ಣಾವ ತಾರ, ತಿರುಪತಿ ವೆಂಕಟರಮಣಸ್ವಾಮಿ ಬೆಟ್ಟ, ಕಳಸಗೋಪುರ ಪ್ರತಿಷ್ಠಾಪನೆ, ಸೀತಾರಾಮ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಸಂಜೀವಿನಿ ಪರ್ವತ, ತರುತ್ತಿರುವ ಆಂಜನೇಯ, ಕುಂಭ ಕರ್ಣನ ನಿದ್ದೆ, ಕುಂಭಕರ್ಣನ ಭೋಜನ, ವಾಸ್ತುಲಕ್ಷ್ಮೀ, ಸತ್ಯ ನಾರಾಯಣ ಪೂಜೆ, ವಿಶ್ವರೂಪ ದರ್ಶನ, ಬೇಡರ ಕಣ್ಣಪ್ಪ, ವಾದ್ಯ ಗೋಷ್ಟಿ, ದಶಾವ ತಾರ, ಕ್ರಿಕೆಟ್‌, ಅನಂತಪದ್ಮನಾಭ, ರೇಣುಕ ಎಲ್ಲಮ್ಮ, ಮೈಸೂರು ದಸರಾ ಮೆರವಣಿಗೆ, ಮಾದರಿ ಗ್ರಾಮ, ಎಂವಿಎಂ ಪಾರ್ಕ್‌, ಸೀತೆ ಅಶೋಕ ವನದಲ್ಲಿರುವುದು, ಹೀಗೆ ಹಲವಾರು ರೀತಿಯ ಇತಿಹಾಸ ಪುಟಗಳಲ್ಲಿರುವ ಮಕ್ಕಳಿಗೆ ಮತ್ತು ನಾಗರಿಕರಿಗೆ ಬೇಕಾಗುವ ಸಂದೇಶ ಗಳನ್ನು ಸಾರುವ ಬೊಂಬೆಗಳು ಗಮನ ಸೆಳೆಯುತ್ತಿವೆ.

ಕೆಲವರ ಮನೆಗಳಲ್ಲಿ ಪ್ರತಿ ವರ್ಷ ವಿಶೇಷವಾಗಿ ಪೂರಾಣ ರೂಪಕಗಳನ್ನು ಗೊಂಬೆಗಳ ಚಿತ್ತಾರವಾಗಿ ಪ್ರಸ್ತುತಪಡಿ ಸುವುದು ವೈಕುಂಠ ದರ್ಶನ  ಶ್ರೀಕೃಷ್ಣ ಪಾರಿಜಾತ ಪ್ರಸಂಗ, ಸೀತಾ ಸ್ವಯಂವರ, ಇದರೊಂದಿಗೆ ರಾಮಾ ಯಣ, ಮಹಾಭಾರತ, ಭಾಗವತ ಸೇರಿದಂತೆ ಅನೇಕ ಪುರಾಣಗಳ ಹಲವು ಸನ್ನಿವೇಶಗಳಿಗೂ ಇಲ್ಲಿ ಜೀವಂತಿಕೆ ಬರುವದುಂಟು. ದೇವಾನು ದೇವತೆಗಳು ಕಾಡು-ಉದ್ಯಾನವನ, ನದಿ, ಸರೋವರ, ಅರಮೆನೆ, ಕೈಲಾಸ, ವೈಕುಂಠ, ದೇವ ಲೋಕ, ಕ್ರಿಕೇಟ್‌ ಸ್ಟೇಡಿಯಂ, ಸರ್ಕಲ್‌ ಮತ್ತಿತರರ ಮಾದರಿಯ ಗೊಂಬೆಗಳನ್ನು ಜೋಡಿಸುತ್ತಾರೆ.

Advertisement

ನಮ್ಮ ಹಿಂದೂ ಸನಾತನ ಸಂಸ್ಕೃತಿ ಹಾಗೂ ನಮ್ಮ ಪರಂಪರೆ ಬಗ್ಗೆ ಶಾಲಾ ಮಕ್ಕಳಿಗೆ ಶಾಲಾ ಹಂತದಲ್ಲೇ ಗೊಂಬೆ ಪ್ರದ ರ್ಶನದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಮೈಸೂರು ದಸರಾ ಯಾವ ರೀತಿ ನಡೆಯುತ್ತದೆ. ರಾಮಾ ಯಣ ಹಾಗೂ ಮಹಾಭಾರತ  ವಿಷಯಗಳ ಸಂಬಂಧಪಟ್ಟಂತೆ ಗೊಂಬೆಗಳನ್ನು ಕೂರಿಸಲಾಗಿದೆ. ವಿಶ್ವ ಕಪ್‌ ಕ್ರಿಕೆಟ್‌ ನಡೆಯುತ್ತಿದ್ದು ಕ್ರಿಕೆಟ್‌ ಸಂಬಂಧ ಪಟ್ಟಂತೆ ಕ್ರಿಕೆಟ್‌ ಗೊಂಬೆಗಳನ್ನು ಕೂರಿಸಿದ್ದೇವೆ.

ಗೊಂಬೆಗಳನ್ನು ಕೂರಿಸಿ ಪೂಜೆ ಪುರಸ್ಕಾರ: ಪ್ರತಿ ವರ್ಷವೂ ಸಹ ನಮ್ಮ ಮನೆಯಲ್ಲಿ ದಸರಾ ಹಬ್ಬದ ವೇಳೆ ಗೊಂಬೆ  ಗಳನ್ನು ಕೂರಿಸಿ ಪೂಜೆ ಪುರಸ್ಕಾರ ಗಳನ್ನು ಮಾಡಲಾಗಿದೆ. ಇತ್ತೀಚೆ ಗೆನ ದಿನಗಳಲ್ಲಿ ಗೊಂಬೆಗಳನ್ನು ಕೂರಿಸು ವುದು ಕಡಿಮೆಯಾಗುತ್ತಿದೆ. ನಮ್ಮ ಸನಾತನ ಸಂಸ್ಕೃತಿ ಉಳಿಗೆ ಈಗೀನ ಮಕ್ಕಳಿಗೆ ಇಂತಹ ವಿಚಾರ ಗಳನ್ನು ತಿಳಿಸಲು ಇಂತಹ ಗೊಂಬೆ ಗಳನ್ನು ಕೂರಿಸಿ ಅಲಂಕರಿಸುವುದು ಅನಿ ವಾ ರ್ಯವಾಗಿದೆ. ಆಚಾರ-ಚಾರವನ್ನು ಪ್ರತಿಯೊಬ್ಬರು ಬೆಳೆಸಬೇಕು ಎಂಬುವುದು ನಾಗರಿಕರ ಅಭಿಪ್ರಾಯವಾಗಿದೆ. ಪ್ರತಿಸಂಜೆ ಮನೆಗೆ ಬರುವ ಮಕ್ಕಳಿಗೆ ಗೊಂಬೆ ತಿಂಡಿ, ಏನಾದರೂ ಗಿಪ್ಟ್ ಬಾಕ್ಸ್‌ ಹಾಗೂ ಗೊಂಬೆಗಳ ಇತಿಹಾಸವನ್ನು ತಿಳಿಸುತ್ತಿದ್ದರು. ಒಂಭತ್ತು ದಿವಸವೂ ಸಹ ಪ್ರತಿದಿನ ಬೆಳಗ್ಗೆ ಸಂಜೆ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ.

ಮಕ್ಕಳಿಗೆ ಇತಿಹಾಸ ತಿಳಿಸುವ ಪ್ರಯತ್ನ ಮಾಡಬೇಕು:

ಪ್ರತಿ ವರ್ಷ ವಿಜಯದಶಮಿ ನಮ್ಮ ಪವಿತ್ರವಾದ ಹಬ್ಬವಾಗಿದೆ. ಹಿರಿಯರು ಆಚರಿಸಿ ಕೊಂಡು ಬಂದಿರುವ ನವರಾತ್ರಿ ಗೊಂಬೆ ಉತ್ಸವವನ್ನು ಮುಂದುವರೆಸಿ ಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಮಕ್ಕಳಿಗೆ ಇತಿಹಾಸಗಳನ್ನು ತಿಳಿಸುವ ಪ್ರಯತ್ನವನ್ನು ಮಾಡಬೇಕು. ಸಂಸ್ಕೃತಿ ಪರಂಪರೆಗಳ ಪ್ರತೀಕವಾದ ಇಂತಹ ಕಲೆಗಳನ್ನು ಉಳಿಸಿಬೆಳೆಸುವಲ್ಲಿ ಇಂದಿನ ಪೀಳಿಗೆ ಆಸಕ್ತಿ ವಹಿಸಬೇಕು. ಬಯಲು ಸೀಮೆಯ ಜಾನಪದ, ಧಾರ್ಮಿಕ ಭಾವನೆ ಗಳನ್ನು ಮೇಳೈಸಿರುವ ಈ ಗೊಂಬೆ ಹಬ್ಬ ಆಧುನಿಕತೆ ಪ್ರಭಾವದ ನಡುವೆಯೂ ಅಸ್ತಿತ್ವ ಉಳಿಸಿ ಕೊಂಡಿದೆ ಎಂದು ಕನ್ನಮಂಗಲ ಎಂವಿಎಂ ಶಾಲೆಯ ಕಾರ್ಯದರ್ಶಿ ರಾಧಾಶ್ರೀನಿವಾಸ್‌.

ಹಿರಿಯರು ಹೇಳಿದಂತೆ ಆದುನಿಕತೆಯ ಸಂಸ್ಕೃತಿ ಬೆಳೆಯುತ್ತಿದ್ದಂತೆ ಇಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಂಸ್ಕೃತಿ ಆಚಾರ-ಚಾರ ಮತ್ತು ಸಂಪ್ರದಾಯವನ್ನು ಪರಿಚಯಿಸಬೇಕಾದ ಇಂದಿನ ಈ ಸಂದರ್ಭದಲ್ಲಿ ಪ್ರತಿ ಮನೆಗಳಲ್ಲಿ ಈ ರೀತಿ ಅಲಂಕಾರಿಕ ಗೊಂಬೆಗಳ ಆಚರಣೆ ನಡೆಸುವುದರಿಂದ ಸನಾತನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕೆಂಬುವುದು ಹಿರಿಯರ ಅಂಬಲವಾಗಿದೆ.-ಚೈತ್ರ, ಕನ್ನಮಂಗಲ ಎಂವಿಎಂ ಶಾಲೆ ಸದಸ್ಯ.

-ಎಸ್‌.ಮಹೇಶ್‌

 

Advertisement

Udayavani is now on Telegram. Click here to join our channel and stay updated with the latest news.

Next