ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವ ಮತ್ತು ಉಚ್ಚಿಲ ದಸರಾ ಪ್ರಯುಕ್ತ ಶುಕ್ರವಾರ ಲಲಿತಾ ಪಂಚಮಿಯ ಪ್ರಯುಕ್ತ ಮಹಾಲಕ್ಷ್ಮೀ, ನವದುರ್ಗೆಯರು ಮತ್ತು ಶಾರದಾ ಮಾತೆಯ ಮುಂಭಾಗದಲ್ಲಿ ಶತವೀಣಾವಲ್ಲರಿ ಕಾರ್ಯಕ್ರಮ ನಡೆಯಿತು.
ವೀಣಾ ವಾದಕಿ ವಿದ್ವಾನ್ ಪವನ ಬಿ. ಆಚಾರ್ ಮಣಿಪಾಲ ಅವರ ನಿರ್ದೇಶನ ಮತ್ತು ನಿರ್ವಹಣೆಯೊಂದಿಗೆ 101 ಕಲಾವಿದರಿಂದ ವೀಣಾ ನಡೆಯಿತು. 14 ಸಹ ಕಲಾವಿದರು, 6 ಹಿನ್ನೆಲೆ ವಾದಕರು ಸಹಕರಿಸಿದರು. 10 ಸಾವಿರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಸಾಕ್ಷಿಯಾದರು.
ಶತವೀಣಾ ವಾದನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವರುಣಾ ಗಮನವಾಗಿದ್ದು ಶಾರದಾ ಮಾತೆ ಸಂತೃಪ್ತಳಾಗಿದ್ದಾಳೆ ಎಂದು ದ. ಕ. ಮೊಗವೀರ ಮಹಾಜನ ಸಂಘದ ಗೌರವಸಲಹೆಗಾರ ಡಾ| ಜಿ. ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿರುದು ಪ್ರದಾನ
ಶತವೀಣಾವಲ್ಲರಿ ಸಂಯೋಜಿಸಿದ ವಿ| ಪವನ ಬಿ. ಆಚಾರ್ ಅವರನ್ನು ಡಾ| ಜಿ. ಶಂಕರ್ ಅವರು “ವೀಣಾ ವಿನೋದಿನಿ’ ಬಿರುದು ಪ್ರದಾನಿಸಿ ಗೌರವಿಸಿದರು.
Related Articles
ಸುಮಂಗಲೆಯರಿಗೆ ಗೌರವ
ಲಲಿತಾ ಪಂಚಮಿ ಪ್ರಯುಕ್ತ ದೇಗುಲದಲ್ಲಿ ಸಾವಿರಾರು ಸುಮಂಗಲೆ ಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. 5 ಸಾವಿರಕ್ಕೂ ಅಧಿಕ ಸುಮಂಗಲೆಯರಿಗೆ ಪ್ರಸಾದ ರೂಪದಲ್ಲಿ ವಸ್ತ್ರ(ಸೀರೆ)ದಾನ ಸಹಿತವಾಗಿ ಗೌರವಾರ್ಪಣೆ ಸಲ್ಲಿಸ ಲಾಯಿತು.
ಉಡುಪಿ ಕಿದಿಯೂರು ಹೊಟೇಲ್ ಪ್ರ„.ಲಿ. ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ಜತೆ ಕಾರ್ಯದರ್ಶಿ ಮೋಹನ್ ಕರ್ಕೇರ, ಆಡಳಿತ ಸಮಿತಿ ಸದಸ್ಯ ವೈ. ಗಂಗಾಧರ ಸುವರ್ಣ, ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಎಸ್. ಸಾಲ್ಯಾನ್, ಕಾಪು ನಾಲ್ಕು ಪಟ್ಣ ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಯಶೋದಾ ಕುಂದರ್ ಉಪಸ್ಥಿತರಿದ್ದರು.ದೇಗುಲದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಸ್ವಾಗತಿಸಿ, ವಂದಿಸಿದರು.
ನಿರಂತರ ಕಾರ್ಯಕ್ರಮ
ನವರಾತ್ರಿ 5ನೇ ದಿನದ ಲಲಿತಾ ಪಂಚಮಿ ಪ್ರಯುಕ್ತ ಬೆಳಗ್ಗೆಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾ ಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಶ್ರೀ ಅಂಬಿಕಾ ಕಲೊ³àಕ್ತ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.