ಬೆಳಗ್ಗೆ 9.30ಕ್ಕೆ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸುವ
ಮೂಲಕ ಚಾಲನೆ ನೀಡಲಾಗುತ್ತದೆ.
Advertisement
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ 25ದಿನಗಳ ಬಾಕಿ ಇದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಗರಕ್ಕೆ ಆಗಮಿಸು ತ್ತಿರುವ ಗಜಪಡೆಗೆ ನಾಳೆ ವೀರನಹೊಸಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತ ಕೋರುವ ಮೂಲಕ ಕರೆತರಲಾಗುತ್ತಿದ್ದು, ಅರಣ್ಯ ಇಲಾಖೆ ಸಕಲ ಸಿದ್ಧತೆಗಳನ್ನು ನಡೆಸಿದೆ.ಈ ಬಾರಿಯ ನವರಾತ್ರಿ ಆರಂಭಕ್ಕೆ 25 ದಿನಗಳು ಮಾತ್ರ ಬಾಕಿ ಇದ್ದು, ಜಂಬೂಸವಾರಿಗೆ 34 ದಿನವಿದೆ. ದಸರಾ ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ, ತಾಲೀಮು ನಡೆಸುವುದು mಅನಿವಾರ್ಯವಾಗಿರುವುದರಿಂದ, ಸೆ.13ರಂದೇ ಎಲ್ಲಾ ಆನೆಗಳನ್ನು ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆದರೆ ಕಳೆದೊಂದು ವರ್ಷದಿಂದ ಕೊರೊನಾ ಸೊಂಕುಕಬಂಧಬಾಹುಚಾಚಿರುವಹಿನ್ನೆಲೆಕಳೆದ ವರ್ಷದಂತೆಈ ಬಾರಿಯೂಅರಮನೆಆವರಣಕ್ಕೆ
ಸೀಮಿತವಾದಂತೆ ಸರಳವಾಗಿ ನವರಾತ್ರಿ ಉತ್ಸವ ಹಾಗೂ ಜಂಬೂ ಸವಾರಿ ನಡೆಸಲು ತೀರ್ಮಾನಿಸಿರುವುದರಿಂದ 8 ಆನೆಗಳನ್ನಷ್ಟೇ ದಸರಾ ಉತ್ಸವಕ್ಕೂ ಕೆಲವೇ ದಿನ ಇರುವಾಗ ಕರೆಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ:ಈ ಕುಟುಂಬದ 29ನೇ ಜಾನುವಾರೂ ನಿಗೂಢ ಸಾವು
Related Articles
Advertisement
ಆನೆ ಶೆಡ್ ನಿರ್ಮಾಣ: ಆರಮನೆ ಪ್ರವೇಶಿಸುವ ಆನೆಗಳು ಮತ್ತು ಅವುಗಳ ಮಾವುತ ಹಾಗೂ ಕಾವಾಡಿಗಳಿಗೆ ಉಳಿದುಕೊಳ್ಳಲು ಅನುಕೂಲ ವಾಂವಂತೆ ಅರಮನೆ ಅಂಗಳದಲ್ಲಿ ಅಂಬಾರಿ ಆನೆ ಸೇರಿದಂತೆ 3 ಆನೆಗಳಿಗೆ ಶೆಡ್ ಮತ್ತು ಮಾವುತ, ಕಾವಾಡಿಗಳಿಗೆ 20ಕ್ಕೂ ಹೆಚ್ಚು ಶೆಡ್ ನಿರ್ಮಾಣ ಮಾಡಲಾಗುತ್ತಿದೆ.
ಕೋವಿಡ್ ಹಿನ್ನೆಲೆ ಈ ಬಾರಿಯೂ ಮಾವುತ ಮತ್ತು ಕಾವಾಡಿಗಳಷ್ಟೇ ಬಲಿದ್ದು, ಅವರ ಕುಟುಂಬ ಸದಸ್ಯರು ಬರುತ್ತಿಲ್ಲ. ಇವರಿಗೆ ಅಡುಗೆ ಮಾಡಿ ಕೊಡಲು ಸಹಾಯಕರು, ಸ್ವತ್ಛತಾ ಸಿಬ್ಬಂದಿ ಸೇರಿ 20 ಮಂದಿ ಮಾತ್ರ ಬರಲಿದ್ದಾರೆ ಎಂದು ಡಿಸಿಎಫ್ ಡಾ.ಕರಿಕಾಳನ್ ತಿಳಿಸಿದ್ದಾರೆ. ವೀರನ ಹೊಸಳ್ಳಿಯತ್ತ ಆನೆಗಳ ಪಯಣ: ನಾಳೆ ವೀರನಹೊಸಳ್ಳಿ ಗೆಟ್ ಬಳಿ ನಡೆಯುವ ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು 4 ಆನೆ ಶಿಬಿರಗಳಿಂದ 8 ಆನೆಗಳು ಶನಿವಾರ ವೀರನಹೊಸಳ್ಳಿಯತ್ತ ಪ್ರಯಾಣ ಬೆಳೆಸಿವೆ. ಎಲ್ಲಾ ಆನೆಗಳಿಗೂ ಆಯಾಯ ಶಿಬಿರಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಮಾವುತ ಮತ್ತು ಕಾವಾಡಿಗರೊಂದಿಗೆ ಆನೆಗಳನ್ನು ಬೀಳ್ಕೊಟ್ಟರು.
ಜಂಬೂಸವಾರಿಯ ಆನೆಗಳಿವುಈ ಬಾರಿಯ ದಸರಾಕ್ಕೆ 5 ಗಂಡಾನೆ, 3 ಹೆಣ್ಣಾನೆ ಸೇರಿದಂತೆ ಒಟ್ಟು 8 ಆನೆಗಳನ್ನುಕರೆ ತರಲಾಗುತ್ತಿದ್ದು, ಮತ್ತಿಗೋಡು ಆನೆ ಶಿಬಿರದಅಭಿಮನ್ಯು (56), ಗೋಪಾಲಸ್ವಾಮಿ (38), ದುಬಾರೆಕ್ಯಾಂಪ್‌ನಿಂದಕಾವೇರಿ(44), ವಿಕ್ರಮ(58), ಧನಂಜಯ(43), ರಾಂಪುರ ಕ್ಯಾಂಪ್ ನಲ್ಲಿರುವ ಲಕ್ಷಿ ¾à(20), ಚೈತ್ರ(48) ಹಾಗೂ ದೊಡ್ಡಹರವೆ ಆನೆ ಶಿಬಿರದ ಅಶ್ವತ್ಥಾಮ(34) ಆನೆಯನ್ನುಕರೆತರಲಾಗುತ್ತಿದೆ. ಎಲ್ಲಾ ಆನೆಗಳು ಭಾನುವಾರದ ಹೊತ್ತಿಗೆ ವೀರನಹೊಸಳ್ಳಿ ಸೇರಲಿದ್ದು, ಸೋಮವಾರ ಗಜಪಯಣಕ್ಕೆ ಸ್ವಾಗತಕಾರ್ಯಕ್ರಮ ನಡೆಯಲಿದೆ. 8 ಆನೆಗಳೊಂದಿಗೆ ಮಾವುತ ಮತ್ತುಕಾವಾಡಿಗಳಷ್ಟೇ ಬರುವುದಕ್ಕೆ ಅವಕಾಶ ನೀಡಲಾಗಿದೆ. ಸೆ.16ರಂದು ಆನೆಗಳು ಅರಮನೆ ಪ್ರವೇಶಿಸಲಿದ್ದು, ಮಾವುತ ಮತ್ತು ಕಾವಾಡಿ ಸೇರಿದಂತೆ ಆನೆಗಳು ತಂಗಲು ಶೆಡ್ ನಿರ್ಮಾಣ ಮಾಡಲಾಗುತ್ತಿದೆ.
-ಡಾ.ವಿ. ಕರಿಕಾಳನ್, ಡಿಸಿಎಫ್ – ಸತೀಶ್ ದೇಪುರ