Advertisement

20 ವರ್ಷಗಳ ನಂತರ ಕೋಡಿ ಬಿದ್ದ ದಾಸಾಲಕುಂಟೆ ಕೆರೆ

05:04 PM Aug 07, 2022 | Team Udayavani |

ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ದಾಸಾಲಕುಂಟೆ ಕೆರೆಯು 20 ವರ್ಷಗಳ ನಂತರ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ.

Advertisement

80 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದ ಕೆರೆ ಇದಾಗಿದ್ದು, 2015 ರಲ್ಲಿ ಅರ್ಧ ಭಾಗದಷ್ಟು ಮಾತ್ರ ತುಂಬಿತ್ತು ಆ ಸಂದರ್ಭದಲ್ಲಿ ಸಿದ್ದರಬೆಟ್ಟದ ಶ್ರೀ ಬಾಳೆಹೊನ್ನೂರು ಮಠದ ಶ್ರೀಗಳಾದ ವೀರಭದ್ರ ಶಿವಾಚಾರ್ಯ ಸ್ವಾಮೀಜಿರವರು ಬಾಗಿನ ಅರ್ಪಿಸಿದ್ದರು.ದಾಸಾಲಕುಂಟೆ ಕೆರೆ ಸುಮಾರು 16 ಹಳ್ಳಿಗಳ ಜೀವನಾಡಿಯಾಗಿದೆ . ಕೆರೆ ಕೋಡಿ ಬಿದ್ದಿರುವುದನ್ನು ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಕೆರೆ ಸಂಪೂರ್ಣವಾಗಿ ತುಂಬಿ ಹರಿಯುತ್ತಿರುವುದನ್ನು ಕಂಡು ಪ್ರವಾಸಿಗರು ಮತ್ತು ಊರಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next