Advertisement

ಬ್ಲಾಗರ್‌ ವ್ಲಾಡ್ಲೆನ್‌ ಟಾಟರ್ಸ್ಕಿ ಹತ್ಯೆ: ಮಹಿಳೆ ಅರೆಸ್ಟ್‌

08:41 PM Apr 03, 2023 | Team Udayavani |

ಮಾಸ್ಕೋ: ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ಸಮರ್ಥಿಸುತ್ತಿರುವ ಹಲವಾರು ರಷ್ಯಾ ಅಧಿಕಾರಿಗಳ ನಿಗೂಢ ಹತ್ಯೆಗಳ ನಡುವೆಯೇ,ಇತ್ತೀಚೆಗಷ್ಟೇ ಪ್ರಖ್ಯಾತ ಮಿಲಿಟರಿ ಬ್ಲಾಗರ್‌ ವ್ಲಾಡ್ಲೆನ್‌ ಟಾಟರ್ಸ್ಕಿಯನ್ನು ಬಲಿ ಪಡೆದ ಬಾಂಬ್‌ ದಾಳಿಗೆ ಸಂಬಂಧಿಸಿದಂತೆ ಶಂಕಿತ ಮಹಿಳೆಯೊಬ್ಬರನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ.

Advertisement

ಟಾಟರ್ಸ್ಕಿ ಕೆಫೆಯೊಂದರಲ್ಲಿ ಕುಳಿತಿದ್ದ ವೇಳೆ ಅವರಿಗೆ ಉಡುಗೊರೆಯೊಂದನ್ನು ನೀಡಲಾಗಿತ್ತು. ಬಳಿಕ ಅದು ಸ್ಫೋಟಗೊಂಡು, ಟಾಟರ್ಸ್ಕಿ ಸಾವನ್ನಪ್ಪಿದ್ದರು.

ಘಟನೆಯಲ್ಲಿ 30 ಮಂದಿ ಗಾಯಗೊಂಡಿದ್ದರು. ಇದೀಗ ಪ್ರಕರಣ ಸಂಬಂಧಿಸಿದಂತೆ ದರಿಯಾ ಟ್ರಿಪೋವಾ ಎಂಬ ಶಂಕಿತ ಮಹಿಳೆಯನ್ನು ಬಂಧಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next