Advertisement

ಮುಸ್ಲಿಂ ಮಹಿಳೆಯರು ಐಬ್ರೊ,ಹೇರ್‌ಕಟ್‌ ಮಾಡಿಸ್ಬಾರ್ದು!;ಫ‌ತ್ವಾ 

01:52 PM Oct 08, 2017 | |

ಲಕ್ನೋ : ‘ಮುಸ್ಲಿಂ ಮಹಿಳೆಯರು ತಲೆಗೂದಲು ಕತ್ತರಿಸಿಕೊಳ್ಳಬಾರು, ಹುಬ್ಬುಗಳನ್ನು ಶೇಪ್‌ ಮಾಡಿಕೊಳ್ಳಬಾರದು’ ಎಂದು ಉತ್ತರಪ್ರದೇಶದ ದಿಯೋಬಂದ್‌ನ ಇಸ್ಲಾಂ ಉನ್ನತ ಶಿಕ್ಷಣ ಸಂಸ್ಥೆ  ದಾರುಲ್‌ ಉಲೆಮಾ  ಶನಿವಾರ ಫ‌ತ್ವಾ ಹೊರಡಿಸಿದೆ.  

Advertisement

ಸಹರಣ್‌ಪುರದ ಮುಸ್ಲಿಂ ವ್ಯಕ್ತಿಯೊಬ್ಬ ‘ನನ್ನ ಪತ್ನಿ ಹುಬ್ಬು ಸರಿ ಮಾಡಿಕೊಳ್ಳುವುದು, ತಲೆ ಕೂದಲನ್ನು ಕತ್ತರಿಸಿಕೊಳ್ಳಬಹುದೇ? ಈ ಬಗ್ಗೆ ಇಸ್ಲಾಂ ಕಾನೂನು ಏನು ಹೇಳುತ್ತದೆ’ ಎಂದು ದಾರುಲ್‌ ಇಫ್ತಾ ವನ್ನು ಪ್ರಶ್ನಿಸಿದ್ದ. 

ಪ್ರಶ್ನೆಗೆ ಉತ್ತರವಾಗಿ  ದಾರುಲ್‌ ಇಫ್ತಾ ‘ಮಹಿಳೆಯರು ತಲೆಕೂದಲು ಕತ್ತರಿಸಿಕೊಳ್ಳುವುದು ಮತ್ತು ಹುಬ್ಬುಗಳನ್ನು  ಆಕಾರ ಮಾಡಿಕೊಳ್ಳುವುದು  ಇಸ್ಲಾಂ  ವಿರೋಧಿ. ಹಾಗೆ ಮಾಡಿಕೊಂಡರೆ ಮುಸ್ಲಿಂ ಕಾನೂನನ್ನು ಉಲ್ಲಂಘನೆ ಮಾಡಿದಂತೆ.ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್‌ಗಳಿಂದ ದೂರ  ಉಳಿಯಬೇಕು. ಮೇಕಪ್‌ ಮಾಡಿಕೊಂಡು ಇತರ ಪುರುಷರನ್ನು ಆಕರ್ಷಿಸುವುದಕ್ಕೆ ಅವಕಾಶ ನೀಡಬಾರದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಫ‌ತ್ವಾ ಹೊರಡಿಸಿದೆ.  

ಫ‌ತ್ವಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು,’ವಿಶ್ವವೇ ಬದಲಾಗುತ್ತಿದ್ದು, ಸೌದಿ ಅರೇಬಿಯಾ ದಲ್ಲೂ ಮಹಿಳೆಯರಿಗೆ ಡ್ರೈವಿಂಗ್‌ಗೆ ಅವಕಾಶ ನೀಡಲಾಗಿದೆ. ಈ ವೇಳೆಯಲ್ಲಿ ಫ‌ತ್ವಾ ಹೊರಡಿಸಿರುವುದು ಮುಸ್ಲಿಂ ಮತಪಂಡಿತರು ಮತ್ತು  ಮೌಲ್ವಿಗಳಿಗೆ ಅವಮಾನ ಮಾಡಿದಂತಿದೆ’ ಎಂದು ತ್ರಿವಳಿ ತಲಾಕ್‌ ಸಂತ್ರಸ್ಥೆ ಸೋಫಿಯಾ ಅಹಮದ್‌ ಕಿಡಿಕಾರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next