Advertisement

‘ಡಿ ಬಾಸ್’ ಗೆ ಬರ್ತ್ ಡೇ ಗಿಫ್ಟ್ ; ‘ರಾಬರ್ಟ್’ ಟೀಸರ್ ಔಟ್

09:51 AM Feb 17, 2020 | Hari Prasad |

ಬೆಂಗಳೂರು: ಅಭಿಮಾನಿಗಳ ಪ್ರೀತಿಯ ‘ಡಿ’ ಬಾಸ್ ದರ್ಶನ್ ತೂಗುದೀಪ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದರ್ಶನ್ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳಿಗೆ ಜಾತ್ರೆ-ಹಬ್ಬದ ಖುಷಿ. ಈ ಖುಷಿಯನ್ನು ಇನ್ನಷ್ಟು ಹೆಚ್ಚಿಸಲು ಅವರ ಮುಂಬರುವ ಚಿತ್ರ ‘ರಾಬರ್ಟ್’ನ ಟೀಸರನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ.

Advertisement

1.11 ನಿಮಿಷದ ಈ ಟೀಸರ್ ನಲ್ಲಿ ಮೊದಲಿಗೆ ಹಿನ್ನಲೆ ಧ್ವನಿ ಕೇಳಿಸುತ್ತದೆ. ‘ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ರೆ ದಶರಥ ರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ, ತಿರುಗಿ ಬಿದ್ರೆ…?’ ಎಂದು ನಿಲ್ಲುವ ಧ್ವನಿ ಡಿ ಬಾಸ್ ಎಂಟ್ರಿಗೆ ಮುನ್ನುಡಿಯಾಗುತ್ತದೆ.

ಸ್ಪೆಷಲ್ ಲುಕ್ ನಲ್ಲಿ ಗಮನ ಸೆಳೆಯುವ ದರ್ಶನ್ ಅವರು ಮಸ್ತ್ ಫೈಟ್ ಮೂಲಕ ಆ್ಯಕ್ಷನ್ ಸ್ಟಾರ್ ಆಗಿ ಈ ಟೀಸರ್ ನಲ್ಲಿ ಮಿಂಚುತ್ತಿದ್ದಾರೆ.

‘ನಾನು, ಚತುದರ್ಶ ಭುವನ ಭಯಂಕರನಾದ ಲಂಕೇಶ್ವರ ದಶಕಂಠ ರಾವಣ’ ಎಂಬ ಡಿ ಬಾಸ್ ಧ್ವನಿಯೊಂದಿಗೆ ಗಹಗಹಿಸಿ ನಗುವ ಮೂಲಕ ಅವರ ಮಸ್ತ್ ಅಪಿಯರೇನ್ಸ್ ಆಗುತ್ತದೆ.

ಅಲ್ಲಿಗೆ ‘ರಾಬರ್ಟ್’ ಚಿತ್ರ ಪಕ್ಕಾ ಡಿ ಬಾಸ್ ಆಭಿಮಾನಿಗಳಿಗಾಗಿ ತಯಾರಾಗುತ್ತಿರುವ ‘ಆ್ಯಕ್ಷನ್’ ಚಿತ್ರವೆಂದು ಸಾಬೀತಾಗುತ್ತದೆ. ಆದರೆ ದರ್ಶನ್ ಪಾತ್ರ ಈ ಚಿತ್ರದಲ್ಲಿ ಯಾವ ಶೇಡ್ ನಲ್ಲಿರುತ್ತದೆ ಎಂಬುದನ್ನು ನೋಡಲು ಎಪ್ರಿಲ್ ವರೆಗೆ ಕಾಯಬೇಕಷ್ಟೇ!

Advertisement

ಉಮಾಪತಿ ಫಿಲ್ಮ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ಅವರು ನಿರ್ಮಿಸುತ್ತಿದ್ದು ತರುಣ್ ಕಿಶೋರ್ ಸುಧೀರ್ ಅವರು ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತ ಈ ಚಿತ್ರಕ್ಕಿದ್ದು. ಸುಧಾಕರ್ ಎಸ್. ರಾಜ್ ಅವರ ಛಯಾಗ್ರಹಣ ಟೀಸರ್ ನಲ್ಲಿ ಗಮನ ಸೆಳೆಯುತ್ತದೆ.

ರಾಬರ್ಟ್ ಟೀಸರ್ ಈಗಾಗಲೇ ಯೂ ಟ್ಯೂಬ್ ನಲ್ಲಿ 11 ಲಕ್ಷ ಬಾರಿ ವಿಕ್ಷಣೆಗೊಳಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next