ಹೊಸ ವರ್ಷಕ್ಕೆ ನಟ ದರ್ಶನ್ ಹಾಗೂ ಸುದೀಪ್ ಇಬ್ಬರೂ ತಮ್ಮ ಟ್ವೀಟ್ ಮೂಲಕ ರಾಜ್ಯದ ಜನರಿಗೆ, ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ದರ್ಶನ್ ಅಭಿನಯದ “ರಾಬರ್ಟ್’ ಚಿತ್ರದ ಪೋಸ್ಟರ್‌ವೊಂದರಲ್ಲಿ “ಬಾ ಬಾ ನಾ ರೆಡಿ’ ಎಂಬ ಬರವಣಿಗೆ ಮೂಲಕ “2020’ನ್ನು ಸ್ವಾಗತಿಸಲಾಗಿದೆ. ಇನ್ನು, ತಮ್ಮ ಟ್ವೀಟ್‌ನಲ್ಲಿ ಅವರು ಶುಭ ಹಾರೈಸಿದ್ದು, “ಎರಡು ದೋಣಿ ಮೇಲೆ ಯಾವತ್ತೂ ಪಯಣ ಮಾಡಬೇಡಿ.
ಕನಸುಗಳು ಸಾಕಾರಗೊಳ್ಳಲಿ’ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. “ಕಳೆದು ಹೋದ ಸಮಯ ಮತ್ತೆ ಹಿಂದಿರುಗಿ ಬರಲು ಸಾಧ್ಯವಿಲ್ಲ. ಎರಡು ದೋಣಿ ಮೇಲೆ ಯಾವತ್ತೂ ಪಯಣ ಮಾಡಬೇಡಿ. ನಿಮ್ಮ ಗುರಿ ಅದಕ್ಕೆ ಬೇಕಾದ ಕಾರ್ಯನಿಷ್ಠೆ ಮೇಲೆ ನಂಬಿಕೆ ಇರಲಿ. ಈ ವರ್ಷ ನಿಮ್ಮ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು’ ಎಂದಿದ್ದಾರೆ ದರ್ಶನ್.
ದರ್ಶನ್ ಅಭಿನಯದ “ರಾಬರ್ಟ್’ ಸದ್ಯ ಮುಗಿಯುವ ಹಂತದಲ್ಲಿದೆ. ಆ ಸಿನಿಮಾ ನಂತರ ಅವರು “ರಾಜವೀರ ಮದಕರಿನಾಯಕ’ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ವರ್ಷ ಕೂಡ ದರ್ಶನ್ ಅಭಿನಯದ “ರಾಬರ್ಟ್’ ಹಾಗು “ರಾಜವೀರ ಮದಕರಿನಾಯಕ’ ಚಿತ್ರಗಳು ನಿರೀಕ್ಷೆ ಹೆಚ್ಚಿಸಿವೆ.
Related Articles
ಕಿಚ್ಚನ ಸಂದೇಶ
ಅತ್ತ ಸುದೀಪ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜ್ಯದ ಜನರು ಹಾಗು ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ. “2020′ ಹೆಜ್ಜೆ ಇಡುವ ಮುನ್ನ, ಈ ವರ್ಷದ ನಿಮ್ಮ ಹೆಜ್ಜೆ ಗುರುತುಗಳತ್ತ ಒಮ್ಮೆ ಕಣ್ಣಾಯಿಸಿ ನೋಡಿ.
ಈ ವರ್ಷದಲ್ಲಿ ನೀವು ಕಳೆದ ಅಮೂಲ್ಯ ಕ್ಷಣಗಳು ಮತ್ತು ಜೊತೆಯಾದ ವ್ಯಕ್ತಿಗಳು ನೀವು ಕ್ಷಮೆ ಕೇಳಬೇಕಾದವರು ಮತ್ತು ನಿಮ್ಮಿಂದ ಕ್ಷಮೆಗೆ ಕಾದಿರುವವರು ಬೇರೆಯವರಿಂದ ನಿಮಗೆ ಸಿಕ್ಕ ಒಳ್ಳೆಯದು ಮತ್ತು ನಿಮ್ಮಿಂದ ಬೇರೆಯವರಿಗಾದ ಒಳ್ಳೆಯದು ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡರೆ ನೀವು ನಡೆದ ಬಂದ ಹಾದಿ ಬಗ್ಗೆ ಸ್ಪಷ್ಟತೆಗಳು ಸಿಕ್ಕಿಬಿಡುತ್ತವೆ.
ಆ ಸ್ಪಷ್ಟತೆಗಳ ಆಧಾರದ ಮೇಲೆ ಈ ವರ್ಷ ಮಾಡಬೇಕಾದ್ದೇನು, ಮಾಡಬಾರದ್ದೇನು? ನೀ ಬದಲಾಗಬೇಕಾದ್ದು, ಸ್ಥಿರತೆ ಕಾಪಾಡಿಕೊಳ್ಳ ಬೇಕಾದ್ದು ಎಲ್ಲಿ? ಎಂಬವುಗಳ ಬಗ್ಗೆ ದಿಟ್ಟ ನಿರ್ಧಾರ ಹೊಂದಿ 2020 ನೇ ವರ್ಷಕ್ಕೆ ಹೆಜ್ಜೆ ಇಡೋಣ. 2020 ಅನ್ನು ಅತ್ಯಂತ ಹರ್ಷದಿಂದ ಸ್ವಾಗತಿಸಿ ಹೆಚ್ಚು ಸಾರ್ಥಕವಾಗಿ ಕಳೆಯೋಣ’ ಎಂದು ಟ್ವೀಟ್ ಮಾಡಿದ್ದಾರೆ.