Advertisement

Kaatera; ನಮ್ಮ ಮನೆಗೆ ಬರೋಕೆ ನಾವ್ಯಾಕೆ ಹೆದರಬೇಕು..: ದರ್ಶನ್ ಖಡಕ್ ಮಾತು

04:35 PM Dec 16, 2023 | Team Udayavani |

“ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕು? ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ….’ – ಹೀಗೆ ಖಡಕ್‌ ಆಗಿ ಹೇಳಿದ್ದು ಬೇರಾರು ಅಲ್ಲ, ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌.

Advertisement

ಅವರ ಈ ಮಾತಿಗೆ ವೇದಿಕೆಯಾಗಿದ್ದು “ಕಾಟೇರ’. ನಿಮಗೆ ಗೊತ್ತಿರುವಂತೆ ದರ್ಶನ್‌ ಅವರ “ಕಾಟೇರ’ ಚಿತ್ರ ಡಿ.29ರಂದು ತೆರೆಕಾಣುತ್ತಿದೆ. ಆದರೆ, ಈ ಚಿತ್ರ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆ ದಿನಾಂಕ ಘೋಷಿಸಿತ್ತು. ಆಗ ಅನೇಕರು, “ಒಂದು ತಿಂಗಳು ಪ್ರಮೋಶನ್‌ಗೆ ಸಾಕಾ? ಸಿನಿಮಾ ರೆಡಿ ಇದೆಯಾ? ಎಂದು ಕೇಳುವ ಜೊತೆಗೆ ಡಿಸೆಂಬರ್‌ ಕೊನೆಯ ಎರಡು ವಾರ ಪರಭಾಷಾ ದೊಡ್ಡ ಚಿತ್ರಗಳು ರಿಲೀಸ್‌ ಆಗುತ್ತಿವೆ. ಈ ಸಂದರ್ಭದಲ್ಲಿ ರಿಲೀಸ್‌ ಬೇಕಿತ್ತಾ ಎಂಬ ಮಾತುಗಳು ಕೇಳಿಬಂದಿದ್ದವು. ಇದು ದರ್ಶನ್‌ ಅವರ ಕಿವಿಗೂ ಬಿದ್ದಿದೆ. ಇದೇ ಕಾರಣದಿಂದ ದರ್ಶನ್‌ ಖಡಕ್‌ ಆಗಿ ಹೇಳಿದ್ದು, “ಇದು ನಮ್ಮ ಮನೆ. ಇಲ್ಲಿ ಬರೋಕೆ ಹೊರಗಿನವರು ಹೆದರಬೇಕು. ನಾವಲ್ಲ’ ಎಂದು.

ಇದೇ ವೇಳೆ ಮಾತನಾಡಿದ ದರ್ಶನ್‌, “ನಮ್ಮದು ಪ್ಯಾನ್‌ ಇಂಡಿಯಾ ಸಿನಿಮಾ ಅಲ್ಲ. ಪಕ್ಕಾ ಕನ್ನಡ ಸಿನಿಮಾ. ಕನ್ನಡಿಗರು ಒಳ್ಳೆಯ ಕನ್ನಡ ಸಿನಿಮಾವನ್ನು ಯಾವತ್ತೂ ಕೈ ಬಿಟ್ಟಿಲ್ಲ’ ಎಂದು ನೇರವಾಗಿ ಹೇಳಿದರು ದರ್ಶನ್.

ಇಂದು ಹುಬ್ಬಳ್ಳಿಯಲ್ಲಿ ಟ್ರೇಲರ್‌ ರಿಲೀಸ್‌

“ಕಾಟೇರ’ ಚಿತ್ರದ ಟ್ರೇಲರ್‌ ರಿಲೀಸ್‌ ಇಂದು ಸಂಜೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಕಳೆದ ಬಾರಿ ದರ್ಶನ್‌ ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಹೋಗಿದ್ದಾಗಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ಬಾರಿ ಮತ್ತೂಮ್ಮೆ “ಕಾಟೇರ’ ಚಿತ್ರದ ವೇದಿಕೆಯಲ್ಲಿ ದರ್ಶನ್‌ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಅಂದಹಾಗೆ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿರುವ “ಕಾಟೇರ’ ಚಿತ್ರವನ್ನು ತರುಣ್‌ ಸುಧೀರ್‌ ನಿರ್ಮಿಸಿದ್ದಾರೆ. ಆರಾಧನಾ ಈ ಚಿತ್ರದ ನಾಯಕಿ. ಚಿತ್ರ ಡಿ.29ರಂದು ಬಿಡುಗಡೆಯಾಗುತ್ತಿದೆ.

Advertisement

ಚಿತ್ರದ ಕೈ ರಹಸ್ಯ ಬಿಚ್ಚಿಟ್ಟ ದರ್ಶನ್‌

“ಕಾಟೇರ’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಇಡೀ ತಂಡ ಭಾಗಿಯಾಗಿದ್ದರೂ ಯಾರೊಬ್ಬರೂ ಸಿನಿಮಾದ ಹೈಲೈಟ್ಸ್‌ ಬಗ್ಗೆಯಾಗಲೀ, ಪಾತ್ರದ ಬಗ್ಗೆಯಾಗಲೀ ಮಾತನಾಡಿರಲಿಲ್ಲ. ಆದರೆ, ದರ್ಶನ್‌ ಮಾತ್ರ ಸಿನಿಮಾ ಹೈಲೈಟ್ಸ್‌ ಅನ್ನು ಹೇಳುವ ಮೂಲಕ ಒಂದು ಕ್ಷಣ ವೇದಿಕೆ ಮೇಲಿದ್ದವರು ಹುಬ್ಬೇರಿಸುವಂತೆ ಮಾಡಿದರು. ಅದು ಸಿನಿಮಾದ ಫೈಟ್‌ ಸನ್ನಿವೇಶ ಕುರಿತು. “ನೀವು ವಾರಕ್ಕೆ ಏನಿಲ್ಲವೆಂದರೂ 10 ಪ್ರಸ್‌ಮೀಟ್‌ ಆದ್ರೂ ಅಟೆಂಡ ಮಾಡ್ತೀರಿ. ಎಲ್ಲರೂ ನಮ್ಮದು ಸ್ಪೆಷಲ್‌ ಅಂತಾನೇ ಹೇಳ್ತಾರೆ. “ಕಾಟೇರ’ದ ಸ್ಪೆಷಲ್‌ನಲ್ಲಿ ಫೈಟ್‌ ಕೂಡಾ ಒಂದು. ಇಡೀ ಚಿತ್ರದಲ್ಲಿ ಮೂರೇ ಮೂರು ಫೈಟ್‌ ಇದೆ. ಒಂದು ಫೈಟ್‌ನಲ್ಲಿ ಎರಡೂ ಕೈಗಳಿವೆ, ಇನ್ನೊಂದು ಫೈಟ್‌ನಲ್ಲಿ ಒಂದು ಕೈ ಇದೆ. ಮತ್ತೂಂದು ಫೈಟ್‌ನಲ್ಲಿ ಎರಡೂ ಕೈ ಇರಲ್ಲ… ‘ ಹೀಗೆ ಹೇಳುವ ಮೂಲಕ “ಕಾಟೇರ’ ಒಂದು ಹೊಸ ಬಗೆಯ ಸಿನಿಮಾ ಎಂದರು. ಚಿತ್ರದಲ್ಲಿ ಕಮರ್ಷಿಯಲ್‌ ಅಂಶಗಳ ಜೊತೆಗೆ ಕಂಟೆಂಟ್‌ಗೂ ಹೆಚ್ಚಿನ ಮಹತ್ವ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next