Advertisement

ನಿಖಿಲ್ ಗೆ ಅಮ್ಮನ ಹಾಥ್‌ ಸುಮಲತಾಗೆ ದರ್ಶನ್‌ ಸಾಥ್‌ 

12:55 AM Mar 11, 2019 | Team Udayavani |

ಮಂಡ್ಯ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದ ಕಾವು ಏರತೊಡಗಿದೆ. ಈ ಮಧ್ಯೆ, ಪುತ್ರ ನಿಖಿಲ್ ಸ್ಪರ್ಧೆಗೆ ರಾಜಕೀಯ ತೊಡಕುಗಳು ಎದುರಾಗದಂತೆ ಅನಿತಾ
ಕುಮಾರಸ್ವಾಮಿ ಬೆಂಬಲವಾಗಿ ನಿಲ್ಲಲು ಮುಂದಾಗಿದ್ದಾರೆ.

Advertisement

ಈ ನಿಟ್ಟಿನಲ್ಲಿ ಜಿಲ್ಲಾ ಜೆಡಿಎಸ್‌ನ ಅತೃಪ್ತ ಶಾಸಕರೆಂದು ಬಿಂಬಿತವಾಗಿರುವ ರವೀಂದ್ರ ಶ್ರೀಕಂಠಯ್ಯ ಅವರ ಮೈಸೂರು ನಿವಾಸಕ್ಕೆ ಅನಿತಾ ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿ, ಚರ್ಚೆ ನಡೆಸಿದರು. ಈ ವೇಳೆ, ನಿಖೀಲ್‌ ಜೊತೆಗಿದ್ದರು. ಅವರ ನಿವಾಸದಲ್ಲಿ ಉಪಾಹಾರ ಸೇವಿಸಿ, ನಿಖೀಲ್‌ ಗೆಲು ವಿಗೆ ಪೂರ್ಣ ಸಹ ಕಾರ ಕೋರಿದರು. ಇದಕ್ಕೆ ರವೀಂದ್ರ ಶ್ರೀಕಂಠಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ತಿಳಿದು ಬಂದಿದೆ.

ಚಾಲೆಂಜಿಂಗ್‌ ಸ್ಟಾರ್‌’ ಭೇಟಿ ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ದತೆ ನಡೆಸಿರುವ ಅಂಬರೀಶ್‌ ಪತ್ನಿ ಸುಮಲತಾ ಅವರನ್ನು ಭಾನುವಾರ “ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅವರು ಭೇಟಿ ಮಾಡಿಚರ್ಚೆ ನಡೆ ಸಿದರು.

ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಅಂಬರೀಶ್‌ ಅವರ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು ಒಂದು ಗಂಟೆ ಕಾಲ ಸುಮಲತಾ ಅವರೊಂದಿಗೆ ಮಾತುಕತೆ ನಡೆಸಿದ ದರ್ಶನ್‌, ಚುನಾವಣೆಯಲ್ಲಿ ಅವರ ಪರವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ಸುಮಲತಾ ಕೈಗೊಳ್ಳುವ ಎಲ್ಲಾ ತೀರ್ಮಾನಗಳಿಗೆ ಜೊತೆಯಾಗಿರುವುದಾಗಿ ದರ್ಶನ್‌ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅಣ್ಣನ ಪರ ಕ್ಷಮೆ ಕೋರುವೆ: ಸಿಎಂ
ಬೆಂಗಳೂರು:
ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಸುಮಲತಾ ಅಂಬರೀಶ್‌ ಬಗ್ಗೆ ನೀಡಿರುವ ಹೇಳಿಕೆ ಜೆಡಿಎಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಅಣ್ಣ ರೇವಣ್ಣ ಹೇಳಿಕೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಹಿರಂಗ ಕ್ಷಮೆ ಕೋರಿದ್ದಾರೆ. ಸುಮಲತಾ ಅವರು ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖೀಲ್‌ ಗೌಡ ವಿರುದ್ಧ  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವುದು ಜೆಡಿಎಸ್‌ ನಾಯಕರ ನಿದ್ದೆಗೆಡಿಸಿದೆ. ಸಚಿವ ರೇವಣ್ಣ ಅವರು ಸುಮಲತಾ ಬಗ್ಗೆ “ಗಂಡ ಸತ್ತು ಎರಡು ತಿಂಗಳು ಕಳೆದಿಲ್ಲ. ಚುನಾವಣೆಗೆ ಬಂದಿದ್ದಾರೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Advertisement

ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, “ರೇವಣ್ಣ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ” ಎಂದು ಹೇಳಿದರು. ಮಾಧ್ಯಮ ಸ್ನೇಹಿತರು ರೇವಣ್ಣ ಅವರಿಗೆ ಪ್ರಚೋದನೆ ರೀತಿ ಪ್ರಶ್ನೆ ಕೇಳಿದ್ದು, ಅವರು ಆ ರೀತಿ ಹೇಳಿಕೆ ನೀಡಿ¨ªಾರೆ. ಕೆಲ ವಿದ್ಯುನ್ಮಾನ ಮಾಧ್ಯಮದವರು ರೇವಣ್ಣ ಮಾತನಾಡಿರುವುದಕ್ಕೆ ಕತ್ತರಿ ಹಾಕಿ ಪ್ರಸಾರ ಮಾಡಿದ್ದಾರೆ. ಅದು ಏನೇ ಇರಲಿ, ರೇವಣ್ಣ ಅವರು ಎಚ್ಚರಿಕೆಯಿಂದ ಉತ್ತರ ಕೊಡಬೇಕಿತ್ತು. ಇದುವರೆಗೂ ನಮ್ಮ ಕುಟುಂಬ ಯಾವ ಹೆಣ್ಣುಮಕ್ಕಳಿಗೂ ಅವಮಾನ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಹೀಗಾಗಿ, ಎಲ್ಲದಕ್ಕೂ ಸೇರಿ ಕ್ಷಮೆ ಕೇಳುತ್ತೇನೆ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next