ಮೇಲುಕೋಟೆ: ಚೆಲುವ ನಾರಾಯಣನ ದಿವ್ಯಕ್ಷೇತ್ರ ವಾದ ಮೇಲುಕೋಟೆ ಅಭಿವೃದ್ಧಿಯನ್ನು ದೇಗುಲದ ಸುತ್ತ ಕಾಂಕ್ರಿಟ್ ರಸ್ತೆ ನಿರ್ಮಿಸುವ ಮೂಲಕ ಆರಂಭಿಸಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಶ್ರೀ ಚೆಲುವನಾರಾಯಣಸ್ವಾಮಿ ದೇಗುಲದ ಸುತ್ತ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ದರು. ರಸ್ತೆ ನಿರ್ಮಾಣಕ್ಕೆ ಹಲವು ವರ್ಷ ಗಳಿಂದ ಇದ್ದ ತೊಡಕನ್ನು ನಿವಾರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಚೆಲುವ ನಾರಾಯಣಸ್ವಾಮಿ ದೇಗುಲ ಭಾರತೀಯ ಸಂರಕ್ಷಿತ ಸ್ಮಾರಕವಾಗಿರುವ ಕಾರಣ ಕೇಂದ್ರ ಪುರಾತತ್ವ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆದು ನಂತರವೇ ಕಾಮಗಾರಿ ಕಾರ್ಯ ಆರಂಭಿಸಲು ಮತ್ತು ಇಲಾಖಾ ಅಧಿಕಾರಿಗಳ ಸಮಕ್ಷಮದಲ್ಲೇ ಕೆಲಸ ನಿರ್ವಹಿಸಲು ಭೂ ಸೇನಾ ನಿಗಮದ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದ್ದೇನೆ ಎಂದರು.
ಅನುಮತಿ ದೊರೆತ ನಂತರ ಕಾಮಗಾರಿ ಆರಂಭಿಸಿ ಗುಣಮಟ್ಟದೊಂದಿಗೆ ಶೀಘ್ರ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲು ಗುತ್ತಿಗೆ ದಾರರಿಗೂ ಸೂಚಿಸಿ ದ್ದೇನೆ. ಪ್ರತಿಹಂತದಲ್ಲೂ ನಾನೇ ನಿಂತು ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸುತ್ತೇನೆ. ದೇಗುಲ ಕೈಂಕ ರ್ಯ ಪರರೂ ಹಾಗೂ ನಾಗರಿಕರೂ ರಸ್ತೆ ನಿರ್ಮಾಣ ದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜಿಲ್ಲಾಉಸ್ತುವಾರಿ ಸಚಿವ ಚಲುವ ರಾಯಸ್ವಾಮಿ ಸೇರಿದಂತೆ ಸರ್ಕಾರ ಮೇಲುಕೋಟೆ ಅಭಿವೃದ್ಧಿಗೆ ಪ್ರೋತಾಹ ನೀಡುತ್ತಿದ್ದು ಹಲವು ಸಚಿವರೂ ಸಹಕಾರ ನೀಡುತ್ತಿದ್ದಾರೆ. ವೈರಮುಡಿ ಉತ್ಸವದ ವೇಳೆಗೆ ಮೇಲುಕೋಟೆಯಲ್ಲಿ ಅತ್ಯಾಧುನಿಕ ಮಾದರಿಯ ಶೌಚಾಲಯಗಳು, ಶುದ್ಧೀಕರಿಸಿದ ಕುಡಿವ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸುವುದರ ಜತೆಗೆ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗು ತ್ತದೆ. ವೈರಮುಡಿ ಉತ್ಸವವವನ್ನು ಕಳೆದೆಲ್ಲ ಸಲಕ್ಕಿಂತ ವೈಭವವಾಗಿ ನಡೆಸಲಾಗುತ್ತದೆ ಎಂದರು.
ರಸ್ತೆ ಗುತ್ತಿಗೆದಾರ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಪ್ರಥಮ ಸ್ಥಾನೀಕ ಕರಗಂ ರಾಮಪ್ರಿಯ, ಗ್ರಾಪಂ ಸದಸ್ಯ ಜಯರಾಮು, ರೈತಸಂಘದ ಮುಖಂಡ ನ್ಯಾಮನಹಳ್ಳಿ ಬಿ.ಶಿವ ರಾಮೇಗೌಡ ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ, ತಾಲೂಕು ರೈತಸಂಘದ ಉಪಾಧ್ಯಕ್ಷ ಈಶಮುರುಳಿ, ಪುಳಿಯೋಗರೆ ಸುಬ್ಬಣ್ಣ, ದಿಲೀಪ್, ಗಂಗಾ, ಯೋಗಿ, ನಾಗೇಗೌಡ, ಲಕ್ಷ್ಮೀ ನರಸಿಂಹೇಗೌಡ, ನ್ಯಾಮನಹಳ್ಳಿ ಎನ್.ಎಸ್‌ನಾಗರಾಜು, ಬಳಿಘಟ್ಟ ಪುಟ್ಟರಾಜು, ಬೋರಾಪುರ ಉಮೇಶ್, ದೊಡ್ಡಿಘಟ್ಟ ಸುರೇಶ್, ಹೊಸಹಳ್ಳಿ ಯೋಗಣ್ಣ ಕಾಂಗ್ರೆಸ್ ಮುಖಂಡ ಯೋಗಾನರಸಿಂಹೇಗೌಡ. ಭೂಸೇನಾ ನಿಗಮ ಸಹಾಯಕ ಕಾರ್ಯಪಾಲಕ ಅಭಿನಂತರೆ ಚೈತ್ರಾ ಕಾರ್ಯಪಾಲಕ ಅಭಯಂತರರು ಕೆಆರ್‌ಐಡಿಎಲ್ ಸೋಮಶೇಖರ್ ಇತರರಿದ್ದರು.
ಮರು ಚಾಲನೆ: ಶಾಸಕರಾಗಿದ್ದ ವೇಳೆ ಕೆ.ಎಸ್‌ಪುಟ್ಟಣ್ಣಯ್ಯ ಮಂಜೂರು ಮಾಡಿಸಿದ್ದ ರಸ್ತೆ ಕಾಮಗಾರಿಗೆ ಸಚಿವ ನಾರಾಯಣಗೌಡರು ಭೂಮಿಪೂಜೆ ಮಾಡಿದ್ದರಾದರೂ ಕೆಲಸ ಮಾತ್ರ ಪ್ರಗತಿ ಯಾಗದೆ ನಿಂತು ಹೋಗಿತ್ತು. ದರ್ಶನ್ ಪುಟ್ಟಣ್ಣ ಯ್ಯ ಶಾಸಕರಾದ ನಂತರ ತಂದೆ ಮಂಜೂರು ಮಾಡಿಸಿದ್ದ ಕಾಮಗಾರಿಯ ಆರಂಭಕ್ಕಿದ್ದ ತೊಡಕು ಬಗೆಹರಿಸಿ ಭೂಮಿಪೂಜೆ ಮಾಡಿದರು. ಇದರಿಂದ ತಂದೆಯ ಇಚ್ಛೆಯನ್ನು ಮಗ ಶಾಸಕರಾಗಿ ಪೂರೈಸಿದಂತಾಗಿದೆ.