Advertisement

ಅಭಿಮಾನಿ ಮನೆಗೆ ನಟ ದರ್ಶನ್‌ ಭೇಟಿ

12:30 AM Jan 27, 2019 | Team Udayavani |

ಶಿವಮೊಗ್ಗ: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹೊಳೆಹೊನ್ನೂರು ಗ್ರಾಮದ ಜೆಡಿಎಸ್‌ ಮುಖಂಡ ಎಂ.ನಾಗೇಶ್‌ ಮನೆಗೆ ಭೇಟಿ
ನೀಡಿ ಕುಟುಂಬ ಸದಸ್ಯರೊಂದಿಗೆ ಕೆಲ ಸಮಯ ಕಳೆದರು.

Advertisement

ಕಳೆದೆರಡು ದಿನಗಳಿಂದ ಹೊಸನಗರದ ಹೋಮ್‌ಸ್ಟೇ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ದರ್ಶನ್‌, ಶುಕ್ರವಾರ ನಾಗೇಶ್‌ ಅವರ ಮನೆಗೆ ಭೇಟಿ ಭೇಟಿ ನೀಡಿದರು.

ನಾಗೇಶ್‌ ಮೊದಲಿನಿಂದಲೂ ನಟ ದರ್ಶನ್‌ ಅವರ ಕಟ್ಟಾ ಅಭಿಮಾನಿಯಾಗಿದ್ದು, ದರ್ಶನ್‌ ಅವರ ಬಳಿ ದಿನಾಂಕ ಪಡೆದು ತಮ್ಮ ಹೊಸ ಮನೆಯ ಗೃಹ ಪ್ರವೇಶ ಹಮ್ಮಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ ದರ್ಶನ್‌ ಈ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ನಾಗೇಶ್‌ ಅವರು ಮನೆಯ ಎದುರು ನಿರ್ಮಿಸಿದ ತೂಗುದೀಪದ ಆಕೃತಿ ನೋಡಿ ದರ್ಶನ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿಮಾನಿಯ ಹೊಸಮನೆಯನ್ನು ವೀಕ್ಷಿಸಿ ಕುಟುಂಬ ಸದಸ್ಯರೊಂದಿಗೆ ಕೆಲ ಸಮಯ ಕಳೆದ ನಟ, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next