Advertisement

Abhishek Ambareesh ‘ಬ್ಯಾಡ್‌ ಮ್ಯಾನರ್’ ಟ್ರೇಲರ್‌ಗೆ ದರ್ಶನ್‌ ಸಾಥ್

01:05 PM Nov 09, 2023 | Team Udayavani |

“ಅಮರ್‌’ ಸಿನಿಮಾದ ಬಳಿಕ ನಟ ಅಭಿಷೇಕ್‌ ಅಂಬರೀಶ್‌ ಅಭಿನಯದ ಎರಡನೇ ಸಿನಿಮಾ “ಬ್ಯಾಡ್‌ ಮ್ಯಾನರ್’ ಇದೀಗ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ “ಬ್ಯಾಡ್‌ ಮ್ಯಾನರ್’ ಸಿನಿಮಾದ ಬಿಡುಗಡೆಗೆ ಮುಹೂರ್ತ ಕೂಡ ನಿಗಧಿಯಾಗಿದ್ದು, ಸಿನಿಮಾ ಇದೇ ನವೆಂಬರ್‌ 24ರಂದು ಬಿಡುಗಡೆಯಾಗುತ್ತಿದೆ.

Advertisement

ಸದ್ಯ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನಿಮಾದ ಮೊದಲ ಟ್ರೇಲರ್‌ ಬಿಡುಗಡೆಗೆ ತಯಾರಿ ಮಾಡಿಕೊಂಡಿದೆ. ಹೌದು, ಇದೇ ನವೆಂಬರ್‌ 12ರಂದು ಸಂಜೆ 7 ಗಂಟೆಗೆ “ಬ್ಯಾಡ್‌ ಮ್ಯಾನರ್’ ಸಿನಿಮಾದ ಮೊದಲ ಟ್ರೇಲರ್‌ ಬಿಡುಗಡೆಯಾಗುತ್ತಿದ್ದು, ಈ ಟ್ರೇಲರ್‌ ಅನ್ನು ನಟ ದರ್ಶನ್‌ ಬಿಡುಗಡೆ ಮಾಡಲಿದ್ದಾರೆ.

ಇನ್ನು 2019ರಲ್ಲಿ ತೆರೆಕಂಡ “ಅಮರ್‌’ ಸಿನಿಮಾದ ಬಳಿಕ ಅಭಿಷೇಕ್‌ ಅಂಬರೀಶ್‌ ಅಭಿನಯದ ಯಾವ ಸಿನಿಮಾಗಳು ಕೂಡ ತೆರೆಕಂಡಿಲ್ಲ. ತನ್ನ ಎರಡನೇ ಸಿನಿಮಾಕ್ಕೆ ನೇರವಾಗಿ ಸೂರಿ ಗರಡಿ ಹೊಕ್ಕ ನಟ ಅಭಿಷೇಕ್‌ ಈಗ “ಬ್ಯಾಡ್‌ ಮ್ಯಾನರ್’ ಹುಡುಗನಾಗಿ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ. ಈಗಾಗಲೇ “ಬ್ಯಾಡ್‌ ಮ್ಯಾನರ್’ ಟೈಟಲ್‌ ಪೋಸ್ಟರ್‌, ಟೀಸರ್‌ ಹಾಗೂ ಹಾಡುಗಳು ಬಿಡುಗಡೆಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಇದೀಗ “ಬ್ಯಾಡ್‌ ಮ್ಯಾನರ್’ ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್‌ ಆಗಿದ್ದು, ಟ್ರೇಲರ್‌ ಹೇಗಿರಲಿದೆ ಎಂಬ ಕುತೂಹಲಕ್ಕೆ ಈ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ. ಸುಧೀರ್‌ ಕೆ. ಎಂ. ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಬ್ಯಾಡ್‌ ಮ್ಯಾನರ್’ ಸಿನಿಮಾದಲ್ಲಿ ನಟ ಅಭಿಷೇಕ್‌ ಅಂಬರೀಶ್‌ ಜೊತೆಗೆ ನಟಿ ರಚಿತಾ ರಾಮ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next