Advertisement

ದರ್ಶನ್ ಈಗ “ರಾಬರ್ಟ್’

03:43 PM Oct 17, 2018 | |

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಹೊಸ ಚಿತ್ರದ ಟೈಟಲ್ ಫಿಕ್ಸ್ ಆಗಿದ್ದು, ಅವರ ಅಭಿಮಾನಿಗಳಿಗೆ ದಸರಾ ಹಬ್ಬಕ್ಕೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ದರ್ಶನ್ ಈಗಾಗಲೇ “ಯಜಮಾನ’ ಸಿನಿಮಾದ ಚಿತ್ರೀಕರಣ ಮುಗಿಸಿ “ಒಡೆಯ’ ಶೂಟಿಂಗ್ ಮಾಡುತ್ತಿದ್ದ ಸಮಯದಲ್ಲೇ ಹೊಸ ಸಿನಿಮಾಗೆ ಚಾಲನೆ ಕೂಡ ಕೊಟ್ಟಿದ್ದರು. 

Advertisement

ಅಲ್ಲದೇ ಚಿತ್ರಕ್ಕೆ “ಚೌಕ’ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, “ಹೆಬ್ಬುಲಿ’ ನಿರ್ಮಾಪಕ ಉಮಾಪತಿ ಬಂಡವಾಳ ಹೂಡುವುದು ಫೈನಲ್ ಆಗಿತ್ತು. ಆದರೆ ಚಿತ್ರಕ್ಕೆ ಟೈಟಲ್ ಮಾತ್ರ ಫಿಕ್ಸ್ ಆಗಿರಲಿಲ್ಲ. ಇದೀಗ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್‍ನ ಹೊಸ ಚಿತ್ರಕ್ಕೆ “ರಾಬರ್ಟ್’ ಅಂತ ನಾಮಕರಣ ಮಾಡಲಾಗಿದೆ. “ಚೌಕ’ ಸಿನಿಮಾದಲ್ಲಿ ದರ್ಶನ್ ರಾಬರ್ಟ್ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಲ್ಲದೇ, ಕುತ್ತಿಗೆ ಮೇಲೆ ಶಿಲುಬೆಯ ಟ್ಯಾಟೂ ಹಾಕಿಸಿಕೊಂಡು ಮಾಸ್‍ಲುಕ್‍ನಲ್ಲಿ ಮಿಂಚಿದ್ದರು. 

ಮುಖ್ಯವಾಗಿ ಈ ಲುಕ್ ಚಿತ್ರದ ಹೈಲೈಟ್ಸ್ ಗಳಲ್ಲಿ ಕೂಡ ಒಂದಾಗಿತ್ತು. ಹಾಗಾಗಿ ಆ ಪಾತ್ರದ ಹೆಸರನ್ನೇ ಈಗ ಹೊಸ ಸಿನಿಮಾಗೆ ಟೈಟಲ್ ಮಾಡಲಾಗಿದೆ. ಇನ್ನು ಚಿತ್ರದ ಟೈಟಲ್‍ಗೆ ಸಂಬಂಧಪಟ್ಟಂತೆ ನಿರ್ದೇಶಕರ ಗಮನದಲ್ಲಿ ಬೇರೆ ಬೇರೆ ಆಯ್ಕೆಗಳಿದ್ದವು. ಎಲ್ಲಾ ಕೂತು ಮಾತು-ಕಥೆ ಮಾಡಿ ದರ್ಶನ್ ಸಿನಿಮಾಗೆ “ರಾಬರ್ಟ್’ ಟೈಟಲ್ ಸೂಕ್ತ ಅಂತ ನಿರ್ಣಯ ಮಾಡಲಾಗಿದ್ದು, ಸದ್ಯದಲ್ಲೇ ಚಿತ್ರತಂಡ “ರಾಬರ್ಟ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next