Advertisement
ಹೀಗೆ ಮಾತಿಗೆ ಸಿಗುವ ಸಂದರ್ಭ ಬಂದರಂತೂ ದರ್ಶನ್, ತಮ್ಮ ಮನಸ್ಸಿನಲ್ಲಿರುವ ಒಂದಷ್ಟು ವಿಷಯಗಳನ್ನು ಅಭಿಮಾನಿಗಳ ಮುಂದೆ ನೇರವಾಗಿ ತೆರೆದಿಡುತ್ತಾರೆ. ಸದ್ಯ ತಮ್ಮ ಬಹುನಿರೀಕ್ಷಿತ “ರಾಬರ್ಟ್’ ಚಿತ್ರದ ಬಿಡುಗಡೆಗೂ ಮುನ್ನ, ಹುಬ್ಬಳ್ಳಿಯಲ್ಲಿ ನಡೆದ “ರಾಬರ್ಟ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ದರ್ಶನ್, ತಮ್ಮ ಸೆಲೆಬ್ರಿಟಿ (ಅಭಿಮಾನಿ)ಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
Related Articles
Advertisement
ಕಲಾವಿದರು ಯಾವ ಜಾತಿಗೋಸ್ಕರ ಹುಟ್ಟಿಲ್ಲ… :
“ಕಲಾವಿದರು, ಕಲಾವಿದರ ಕುಟುಂಬ ಒಂದೆ. ನಮಗೆ ಜಾತಿ ಇಲ್ಲ, ಮತ ಇಲ್ಲ ಇನ್ನೊಂದು ಇಲ್ಲ. ನಾವು ಯಾರೂ ಯಾವ ಜಾತಿಗೋಸ್ಕರ ಹುಟ್ಟಿಲ್ಲ. ಇಲ್ಲಿ ಲಿಂಗಾಯತರು, ಗೌಡ್ರು, ಕುರುಬರು, ಮುಸ್ಲಿಮ್ ಬಾಂಧವರು ಎಲ್ಲರೂ ಇದ್ದಾರೆ. ಇಷ್ಟು ಜನ ಹಾಕಿದ ಕೂಳಿದಿಂದ ಈ ದೇಹ ಇರೋದು. ನಾವು ಯಾರೋ ಒಬ್ಬರ ಸ್ವತ್ತು ಅಲ್ಲ. ಯಾವ ಜಾತಿಗೂ ನಾವು ಸೀಮಿತ ಇಲ್ಲ. ಮನುಷ್ಯ ಸತ್ತಾಗ ಅವರ ಮನೆಯಲ್ಲಿ ಹೀಗೆ ಅಂತ್ಯಕ್ರಿಯೆ ಮಾಡಬೇಕು ಎನ್ನುವುದು ಇದೆ. ಆದರೆ, ನಮಗಿಲ್ಲ. ಅಭಿಮಾನಿಗಳೇ ನಮಗೆಲ್ಲ, ನಮ್ಮ ಸೆಲೆಬ್ರಿಟಿಗಳೇ ನಮಗೆ ಇಷ್ಟೆ ನಮ್ಮ ಜಾತಿ’
ಚಪ್ಪಲಿ ಬಿಟ್ಟು ಮಾತನಾಡಿದ್ರೆ ನಮಗೂ ಸ್ವಲ್ಪ ಮರ್ಯಾದೆ ಇರುತ್ತೆ :
ಯಾವ ಕಾರ್ಯಕ್ರಮದಲ್ಲೂ ಚಪ್ಪಲಿ ಬಿಟ್ಟು ಮಾತಾನಾಡಲ್ಲ ಆದರೆ ಕರ್ನಾಟಕಕ್ಕೆ ಬಂದು ಚಪ್ಪಲಿ ಬಿಟ್ಟು ಮಾತನಾಡಿದ್ರೆ ನಮಗೂ ಸ್ವಲ್ಪ ಮರ್ಯಾದೆ ಇರುತ್ತೆ. ನಾವು “ಸಂಗೊಳ್ಳಿ ರಾಯಣ್ಣ’ ಸಿನಿಮಾ ಸಮಯದಲ್ಲಿ ವಿಜಯ ಯಾತ್ರೆ ಮಾಡಿದ್ವಿ. ಎಲ್ಲಾ ಕಡೆ ಬೆಂಬಲ ಕೊಟ್ರಾ, ಸಿನಿಮಾನ ಒಂದು ವರ್ಷ ಓಡಿಸಿದ್ರು. ವಿಜಯ ಯಾತ್ರೆ ಹೋದಾಗ ಪ್ರತಿ ಹಳ್ಳಿಗೂ ಹೋಗಬೇಕಾದ್ರೆ ಪ್ರತಿ
ಹೆಣ್ಣುಮಕ್ಕಳು, ತಲೆ ಮೇಲೆ ಸೆರಗು, ಹಾಕಿ ಚಪ್ಪಲಿ ಬಿಟ್ಟು ಕೈಮುಗಿಯುತ್ತಿದ್ದರು. ನಾವು ಚಪ್ಪಲಿ ಬಿಟ್ಟು ನಿಮಗೆ ಚಪ್ಪಲಿ ಹಾಕಬೇಕು ಅವತ್ತು ಅಂದುಕೊಂಡೆ, ಇದಕ್ಕೆ ನಾವು ಲಾಯಕ್ ಇದಿವಾ ಅಂತ. ನಿಜವಾಗಲೂ ಲಾಯಕ್ ಇಲ್ಲ ಸ್ವಾಮಿ. ಇವತ್ತು ನಾವು ಚಪ್ಪಲಿ ಬಿಟ್ಟು ನಿಮ್ಮ ಪಾದಗಳಿಗೆ ನಾವು ಚಪ್ಪಲಿ ಹಾಕಬೇಕು ಅಷ್ಟೆ. ಉತ್ತರ ಕರ್ನಾಟಕ ಜನ ನಮಗೆ ಕೊಡುವ ಗೌರವ, ಕಲಾವಿದರಿಗೆ ತೋರಿಸುವ ಪ್ರೀತಿ ಅಷ್ಟಿದೆ.
ಮೈಸೂರಿನ ಮನೆ ಕಟ್ಟಿಸಿದ್ದು ಉತ್ತರ ಕರ್ನಾಟಕ ಜನರ ದುಡ್ಡಿಂದ :
“ನಮ್ಮ ಅಪ್ಪನಿಗೆ ಒಂದು ವರ್ಷ ಕೆಲಸ ಇರಲಿಲ್ಲ. ಆಗ ಏನು ಮಾಡಬೇಕು ಅಂತ ಯೋಚಿಸಿದ್ರು ಸಹ ಏನು ಆಗಿಲ್ಲ. ದಿವ್ಯ ದರ್ಶನ್ ಕಲಾವೃಂದಎನ್ನುವ ನಾಟಕ ಕಂಪನಿ ಇತ್ತು. ಸಿನಿಮಾದವರು ಅಂತೂ ಕರಿತಿಲ್ಲ, ಹಾಗಾಗಿ ನಾಟಕಮಾಡೋಣ ಎಂದು ಉತ್ತರ ಕರ್ನಾಟಕ ಕಡೆ ಹೊರಟರು. ನಾಟಕ ಮಾಡುವಾಗ ಉತ್ತರ ಕರ್ನಾಟಕ ಜನರು 5, 2.50, 10 ರೂ. ನೀಡಿದ್ದಾರೆ. ಸುಮಾರು 6 ತಿಂಗಳು ದುಡಿದ್ದಾರೆ. 6 ತಿಂಗಳು ದುಡಿದ ದುಡ್ಡಿಲ್ಲಿಮೈಸೂರು ಮನೆ ಕಟ್ಟಿದ್ದೇವೆ. ಮೈಸೂರು ಮನೆ ಉತ್ತರ ಕರ್ನಾಟಕ ಜನ ಕೊಟ್ಟ ಮನೆ.ಆದ್ದರಿಂದ ಇಡೀ ಉತ್ತರ ಕರ್ನಾಟಕಕ್ಕೆ ಧನ್ಯವಾದ ಹೇಳುತ್ತೇನೆ. ನಿಮ್ಮ ಋಣ ನಮ್ಮ ಮೇಲಿದೆ, ನಮ್ಮ ಕುಟುಂಬದ ಮೇಲಿದೆ’.