Advertisement

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

12:19 PM Dec 23, 2024 | Team Udayavani |

ದರ್ಶನ್‌ಗೆ ಬೇಲ್‌ ಸಿಕ್ಕಿ, ಸದ್ಯ ಮೈಸೂರಿನ ಫಾರ್ಮ್‌ ಹೌಸ್ ನಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಈ ನಡುವೆಯೇ ಅವರ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ “ಶೂಟಿಂಗ್‌ ಅಖಾಡಕ್ಕೆ ಯಾವಾಗ’ ಎಂದು. ಈಗ ಗಾಂಧಿನಗರದಿಂದ ಸುದ್ದಿಯೊಂದು ಕೇಳಿಬಂದಿದೆ. ಅದು “ಡೆವಿಲ್‌’ ಸಿನಿಮಾದ ಚಿತ್ರೀಕರಣ ಕುರಿತಾದ್ದು.

Advertisement

ಮೂಲಗಳ ಪ್ರಕಾರ, ಜನವರಿ 20ರ ನಂತರ “ಡೆವಿಲ್‌’ ಸಿನಿಮಾದ ಶೂಟಿಂಗ್‌ ಅಖಾಡಕ್ಕೆ ಇಳಿಯಲಿದೆ. ಹಾಗಂತ ಈ ಶೆಡ್ನೂಲ್‌ನಲ್ಲಿ ದರ್ಶನ್‌ ಇರಲ್ಲ ಎಂಬ ಮಾತೂ ಕೇಳಿಬರುತ್ತಿದೆ. ದರ್ಶನ್‌ ಇಲ್ಲದ ದೃಶ್ಯಗಳ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿದ್ದು, ಈಗಾಗಲೇ ಚಿತ್ರಕ್ಕೆ ಸಂಬಂಧ ಪಟ್ಟವರಿಗೆ ಈ ಕುರಿತು ಮಾಹಿತಿ ರವಾನಿಸಲಾಗಿದೆಯಂತೆ.

ಸದ್ಯ ದರ್ಶನ್‌ ಬೆನ್ನು ನೋವಿನಿಂದ ಬಳಲುತ್ತಿರುವ ಜೊತೆಗೆ ಸಾಕಷ್ಟು ತೂಕ ಕೂಡಾ ಕಳೆದುಕೊಂಡಿದ್ದಾರೆ. ಹಾಗಾಗಿ, ಅವರು ಚಿತ್ರೀಕರಣಕ್ಕೆ ಅಣಿಯಾಗಲು ಸ್ವಲ್ಪ ಸಮಯಬೇಕಾಗಿದ್ದು, ಅಷ್ಟರಲ್ಲಿ ಬೇರೆ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲು ತಂಡ ರೆಡಿಯಾಗಿದೆ. ಡೆವಿಲ್‌ ಚಿತ್ರದ ಫ‌ಸ್ಟ್‌ಲುಕ್‌, ಟೀಸರ್‌ ಕೂಡಾ ಹಿಟ್‌ ಆಗುವ ಮೂಲಕ ನಿರೀಕ್ಷೆ ಹೆಚ್ಚಿಸಿತ್ತು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಡಿಸೆಂ ಬರ್‌ನಲ್ಲಿ ತೆರೆಕಾಣಬೇಕಿತ್ತು. ಒಮ್ಮೆ ದರ್ಶನ್‌ “ಡೆವಿಲ್‌’ ತಂಡಕ್ಕೆ ಎಂಟ್ರಿಕೊಟ್ಟ ನಂತರ ಸತತವಾಗಿ ಚಿತ್ರೀಕರಣ ಮಾಡಲು ತಂಡ ಯೋಜನೆ ಹಾಕಿಕೊಂಡಿದೆಯಂತೆ. ಹೊಸ ವರ್ಷ ಅಕ್ಟೋಬರ್‌ ವೇಳೆಗೆ ಡೆವಿಲ್‌ನನ್ನು ತೆರೆಮೇಲೆ ತರುವ ಯೋಜನೆ ಚಿತ್ರತಂಡಕ್ಕಿದೆ ಎನ್ನುವುದು ಗಾಂಧಿನಗರದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next