Advertisement

“ದರ್ಶನ್’ಸೆರೆಹಿಡಿದ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ

11:02 AM Feb 20, 2019 | |

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ತಮ್ಮ 42ನೇ ಹುಟ್ಟುಹಬ್ಬವನ್ನು ಸರಳವಾಗಿ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. ಈ ನಡುವೆ ದರ್ಶನ್ ತೂಗುದೀಪ್ ಸೆರೆ ಹಿಡಿದಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಕೂಡ ಆಯೋಜನೆಯಾಗಿದೆ. ಹೌದು, ದರ್ಶನ್ ಅರಣ್ಯದಲ್ಲಿ ಸೆರೆ ಹಿಡಿದಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಮಾರ್ಚ್ 1 ರಿಂದ 3 ರವರೆಗೆ “ಲೈಫ್ ಆನ್ ದಿ ವೈಲ್ಡ್ ಸೈಡ್’ ಹೆಸರಿನಲ್ಲಿ ನಡೆಯಲಿದೆ.

Advertisement

ಅರಣ್ಯ ಇಲಾಖೆ ಸಹಯೋಗದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆಗೊಳ್ಳುತ್ತಿದ್ದು, ಈ ಪ್ರದರ್ಶನದಲ್ಲಿ ದರ್ಶನ್ ಸೆರೆ ಹಿಡಿದ ಛಾಯಾಚಿತ್ರಗಳ ಮಾರಾಟವಿದ್ದು, ಅದರಿಂದ ಬಂದ ಹಣವನ್ನು ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಕೆಯಾಗಲಿದೆ. ಅಲ್ಲದೇ ಒಂದು ಛಾಯಾಚಿತ್ರಕ್ಕೆ ಎರಡರಿಂದ ಎರಡೂವರೆ ಸಾವಿರ ನಿಗದಿ ಮಾಡಲಾಗಿದ್ದು, ಎರಡೂವರೆ ಸಾವಿರ ಕೊಟ್ಟರೆ ದರ್ಶನ್ ಆಟೋಗ್ರಾಫ್ ಇರುವ ಚಿತ್ರ ಸಹ ಲಭ್ಯವಾಗಲಿದೆ. 

ಮುಖ್ಯವಾಗಿ ವಿಶ್ವ ವನ್ಯಜೀವಿ ದಿನವಾದ ಮಾರ್ಚ್ 3ರಂದು ದರ್ಶನ್ ಸಹ ಭಾಗವಹಿಸುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ತಾವು ಸಫಾರಿಗೆ ತೆರಳಿದ್ದಾಗ, ಪ್ರಾಣಿಗಳ ಫೋಟೋ ಕ್ಲಿಕ್ಕಿಸುತ್ತಿರುವ ವಿಡಿಯೋವನ್ನು ಹಾಕುವುದರ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next