Advertisement

ಡ್ಯಾರನ್‌ ಲೆಹ್ಮನ್‌ಗೆ ಎದೆನೋವು

01:28 AM Feb 06, 2020 | Team Udayavani |

ಬ್ರಿಸ್ಪೇನ್‌: ಆಸ್ಟ್ರೇಲಿಯದ ಮಾಜಿ ಆಟಗಾರ ಡ್ಯಾರನ್‌ ಲೆಹ್ಮನ್‌ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

Advertisement

ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಕ್ರಿಕೆಟ್‌ ಆಸ್ಟ್ರೇಲಿಯ ಎಲೆವೆನ್‌ ತಂಡದಲ್ಲಿ ತಮ್ಮ ಪುತ್ರ ಜಾಕ್‌ ಆಡುವುದನ್ನು ನೋಡಲು ಅವರು ಬ್ರಿಸ್ಪೇನ್‌ಗೆ ಬಂದಿದ್ದರು. ಗ್ಯಾಲರಿಯಲ್ಲಿ ಕುಳಿತಿದ್ದ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಬಿಗ್‌ ಬ್ಯಾಶ್‌ ಟೂರ್ನಿಯಲ್ಲಿ ಬ್ರಿಸ್ಪೇನ್‌ ಹೀಟ್‌ ತಂಡದ ಪ್ರಧಾನ ಕೋಚ್‌ ಆಗಿರುವ ಲೆಹ್ಮನ್‌ ತಮ್ಮ 50ನೇ ಜನ್ಮದಿನದಂದೇ ಆಸ್ಪತ್ರೆಗೆ ದಾಖಲಾಗುವಂತಾಗಿದ್ದು ವಿಪರ್ಯಾಸ. ಇನ್ನು ಮೂರು ದಿನಗಳಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next