Advertisement
ಇದೀಗ ಪ್ರಯಾಣಿಕರ ಅನುಕೂಲಕ್ಕೆಂದು ಧರ್ಮಸ್ಥಳ ಕೆಎಸ್‌ಟರ್‌ಟಿಸಿ ಘಟಕಕ್ಕೆ ಹೆಚ್ಚುವರಿ 6 ಸ್ಲೀಪರ್ ಕೋಚ್ ಬಸ್‌ಗಳು ಮಂಜೂರಾಗಿದ್ದು, ದಸರಾ ಸಂದರ್ಭ ಓಡಾಟ ನಡೆಸುವ ನಿರೀಕ್ಷೆಯಲ್ಲಿದೆ.
ಸದ್ಯ ಧರ್ಮಸ್ಥಳ ಹಾಸನ ಮಾರ್ಗವಾಗಿ ಪ್ರತಿನಿತ್ಯ ಪ್ರತಿ 15 ನಿಮಿಷಕ್ಕೊಂದರಂತೆ ಬೆಳಿಗ್ಗೆ 4.30ರಿಂದ ರಾತ್ರಿ 11ರವರೆಗೆ 72 ಬಸ್ ಓಡಾಟ ನಡೆಸುತ್ತಿದೆ. 4 ನಾನ್ ಎಸಿ ಸ್ಲೀಪರ್, 5 ರಾಜಹಂಸ, 1 ಐರಾವತ ಕ್ಲಬ್ ಕ್ಲಾಸ್ ಸೇರಿದಂತೆ 64 ಕರ್ನಾಟಕ ಸುವರ್ಣ ಸಾರಿಗೆ ಟ್ರಿಪ್‌ಗ್ಳು ದಿನನಿತ್ಯ ಪ್ರಯಾಣಿಕರ ಅನುಕೂಲಕ್ಕೆ ಲಭ್ಯವಿದೆ. ವಾರಾಂತ್ಯ ರಜಾ ದಿನ ಹಾಗೂ ಶಿವರಾತ್ರಿ, ಲಕ್ಷ ದೀಪೋತ್ಸವ ಸೇರಿದಂತೆ ವಿಶೇಷ ಹಬ್ಬಗಳಂದು ಹೆಚ್ಚುವರಿ ಬಸ್ ನಿಯೋಜಿಸಲಾಗುತ್ತಿದೆ. ಇದರ ಜತೆಗೆ ಹೆಚ್ಚುವರಿ 6 ಸ್ಲೀಪರ್ ಬಸ್ ಸೇವೆ ಲಭ್ಯವಾಗಿರುವುದರಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್ ಶಿವರಾಂ ನಾಯ್ಕ ತಿಳಿಸಿದ್ದಾರೆ.
Related Articles
ಧರ್ಮಸ್ಥಳ, ಮಂಗಳೂರು, ಕುಂದಾಪುರ ಡಿಪ್ಪೊಗಳು 1984, 85ರಲ್ಲಿ ನಿರ್ಮಿಸಿದ್ದರಿಂದ 35ವರ್ಷಕ್ಕೂ ಹಳೆಯದ್ದಾಗಿವೆ. ಧರ್ಮಸ್ಥಳ ಡಿಪ್ಪೊ ಕಾರ್ಯಕ್ಷಮತೆ ಅಧಿಕವಾಗಿರುವುದರಿಂದ ಮೊದಲ ಹಂತದಲ್ಲಿ 1.50 ಕೋ.ರೂ. ವೆಚ್ಚದಲ್ಲಿ ಡಿಪ್ಪೋ ನವೀಕರಣಕ್ಕೆ ಇ-ಟೆಂಡರ್ ಕರೆಯಲಾಗಿದೆ. ಈ ಮೂಲಕ ಪೆಟ್ರೋಲ್ ಬಂಕ್, ವಿದ್ಯುತ್ ಸಂಪರ್ಕ, ಬಸ್ ಗರಾಜ್ ಸ್ಥಳ ವಿಸ್ತರಣೆ ನಡೆಯಲಿದ್ದು, ಆಧುನಿಕ ಟಚ್ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.
Advertisement
1.39 ಕೋ.ರೂ.ವೆಚ್ಚದಲ್ಲಿ ನೌಕರರಿಗೆ ವಸತಿಗೃಹಧರ್ಮಸ್ಥಳ ಕರ್ನಾಟಕ ಸಾರಿಗೆ ನೌಕರರಿಗಾಗಿ 12 ಕೊಠಡಿ ಹೊಂದಿರುವ 1.35 ಕೋ.ರೂ.ನ ನೂತನ ವಸತಿ ಗೃಹ ಪ್ರಸಕ್ತ ಡಿಪ್ಪೋ ಮುಂಭಾಗ ನಿರ್ಮಾಣವಾಗುತ್ತಿದೆ. ಜನವರಿಯಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿ ನೌಕರರ ಬಳಕೆಗೆ ಲಭ್ಯವಾಗಲಿದೆ. ಸಮೀಪದಲ್ಲೆ ಇರುವ 32 ಕೊಠಡಿಯುಳ್ಳ ಹಳೇ ವಸತಿಗೃಹ ನವೀಕರಣಕ್ಕೂ 81 ಲಕ್ಷ ರೂ. ಮಂಜೂರಾಗಿದ್ದು, ನೀರಿನ ಸಂಪರ್ಕ, ರಸ್ತೆ, ಡ್ರೈನೇಜ್, ವಿದ್ಯುತ್ ಸಲಕರಣೆ ಜೋಡೆಣೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಿದೆ. ರಾಜ್ಯ ಹಾಗೂ ಹೊರರಾಜ್ಯದ ಯಾತ್ರಾರ್ಥಿಗಳು ಹಾಗೂ ಪ್ರಯಾಣಿಕರ ಬೇಡಿಕೆಗಣುಗುಣವಾಗಿ ಧರ್ಮಸ್ಥಳ ಘಟಕಕ್ಕೆ 6ಹೊಸ ಸ್ಲಿàಪರ್ ಕೋಚ್ ಬಸ್‌ಗಳು ಮಂಜೂರಾಗಿವೆ. ದಸರ ಮುನ್ನವೇ ಬಸ್ ಓಡಾಟ ನಡೆಸುವ ನಿರೀಕ್ಷೆಯಿದೆ.
ನಾಗೇಂದ್ರ, ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಧರ್ಮಸ್ಥಳ ಘಟಕದಿಂದ ಅತೀ ಹೆಚ್ಚು ಬಸ್ ಓಡಾಟ ನಡೆಸುತ್ತಿರುವುದರಿಂದ ಸುಧಾರಿತ ತಂತ್ರಜ್ಞಾನವುಳ್ಳ ಡಿಪ್ಪೊಗಳು ಅವಶ್ಯವಾಗಿವೆ. ನೂತನ ವಸತಿ ಗೃಹ ನಿರ್ಮಾಣ ಹಂತದಲ್ಲಿದ್ದು, ಡಿಪ್ಪೊ ಹಾಗೂ ಹಳೇ ವಸತಿಗೃಹ ನವೀಕರಣ ಟೆಂಡರ್ ಕರೆಯಲಾಗಿದ್ದು, ಒಪ್ಪಂದ ಪತ್ರ ಲಭಿಸಿದಲ್ಲಿ ಕಾಮಗಾರಿ ಆರಂಭಿಸಲಾಗುವುದು.
ಶರತ್ ಕುಮಾರ್ ಎನ್., ವಿಭಾಗ ಇಂಜಿನಿಯರ್ ಚೈತ್ರೇಶ್ ಇಳಂತಿಲ