ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅರೇ ಇದೆನಪ್ಪಾ ಪ್ರಭಾಸ್ ಮದುವೆ ಏನಾದರೂ ಫಿಕ್ಸ್ ಆಯ್ತಾ ಅಂತಾ ಕೇಳಬೇಡಿ. ವಿಷಯ ಏನೆಂದರೆ ಪ್ರಭಾಸ್‌ರ 20ನೇ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಪೋಸ್ಟರ್ ಇದೇ ಜುಲೈ 10ರಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ.
ಹೌದು! ಈ ಬಗ್ಗೆ ನಟ ಪ್ರಭಾಸ್ ತಮ್ಮ ಇನ್‌ಸ್ಟಾಗಾಮ್ ಖಾತೆಯಲ್ಲಿ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಪೋಸ್ಟರ್ ಬಿಡುಗಡೆಯ ದಿನಾಂಕ ಹಾಗೂ ಸಮಯವನ್ನು ತಿಳಿಸಿದ್ದಾರೆ. ಅಲ್ಲದೇ ಈ ಪೋಸ್ಟ್‌ನಿಂದ ಪ್ರಭಾಸ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಪ್ರಭಾಸ್ 20ನೇ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿತ್ತಿದ್ದಾರೆ. ಅಲ್ಲದೇ ಚಿತ್ರವು ಈಗಾಗಲೇ ವಿದೇಶದಲ್ಲಿ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದು, ವರ್ಷದ ಅಂತ್ಯಕ್ಕೆ ಚಿತ್ರೀಕರಣವನ್ನು ಮುಗಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಇನ್ನು ಈ ಚಿತ್ರದ ಬಗ್ಗೆ 2 ಬಾರಿ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಅಂದಹಾಗೆ ಪ್ರಭಾಸ್ ಕೊನೆಯದಾಗಿ ಸುಜಿತ್ ರೆಡ್ಡಿ ನಿರ್ದೇಶನದ “ಸಾಹೋʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರಿಗೆ ನಾಯಕಿಯಾಗಿ ಬಾಲಿವುಡ್‌ನ ಶ್ರದ್ಧಾ ಕಪೂರ್ ನಟಿಸಿದ್ದು, ಈ ಚಿತ್ರವು ಪ್ರಭಾಸ್ ಅಭಿಮಾನಿಗಳ ನಿರೀಕ್ಷೆ ಮಟ್ಟದಲ್ಲಿರಲಿಲ್ಲ.