ಡಾರ್ಲಿಂಗ್ ಕೃಷ್ಣ ನಿರ್ದೇಶನ ಮತ್ತು ಅಭಿನಯದ ‘ಲವ್ ಮಾಕ್ಟೇಲ್ 2’ ಸಿನಿಮಾವು ಚಿತ್ರಮಂದಿರಗಳಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಕಂಡಿತ್ತು. ಫೆಬ್ರವರಿ 11ರಂದು ಥಿಯೇಟರ್ ಗೆ ಬಂದಿದ್ದ ‘ಲವ್ ಮಾಕ್ಟೇಲ್ 2’ ಚಿತ್ರವು ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಿದೆ.
ಅಮೇಜಾನ್ ಪ್ರೈಮ್ ವಿಡಿಯೋನಲ್ಲಿ ಮಾರ್ಚ್ 15ರಂದು ‘ಲವ್ ಮಾಕ್ಟೇಲ್ 2’ ಸಿನಿಮಾ ಬಿಡುಗಡೆಯಾಗಿದೆ. ಈ ಹಿಂದೆ ಲವ್ ಮಾಕ್ಟೇಲ್ ಚಿತ್ರ ಕೂಡಾ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.
ಇದನ್ನೂ ಓದಿ:ವಿಭಿನ್ನ ಪಾತ್ರಗಳ ಎರಡು ಚಿತ್ರಗಳು; ಐಶಾನಿ ಶೆಟ್ಟಿಯ ನ್ಯೂ ಎಂಟ್ರಿ
‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ರೇಚಲ್ ಡೇವಿಡ್, ಮಿಲನಾ ನಾಗರಾಜ್, ಖುಷಿ, ರಚನಾ ಇಂದರ್ ಮುಂತಾದವರು ನಟಿಸಿದ್ದಾರೆ. ಕೃಷ್ಣ ನಿರ್ದೇಶನವಿರುವ ಚಿತ್ರವನ್ನು ಮಿಲನಾ ನಾಗರಾಜ್ ನಿರ್ಮಿಸಿದ್ದಾರೆ.