Advertisement

ನನಗೆ ಹಿಟ್‌ ಸಿಕ್ಕಿರೋದೇ ಮಿಲನಾ ಜೊತೆ!

02:50 PM Aug 02, 2023 | Team Udayavani |

ಕೌಸಲ್ಯ…’ದಲ್ಲಿ ಮತ್ತೂಮ್ಮೆ ಗಂಡ-ಹೆಂಡ್ತಿ ಕ್ಲಿಕ್‌ ಆಗಿದ್ದೀರಿ. ಹೇಗನಿಸ್ತಾ ಇದೆ?

Advertisement

– ಜನ ಒಳ್ಳೆಯ ಸಿನಿಮಾವನ್ನು ಸ್ವೀಕರಿಸುತ್ತಿರುವುದು ಮೊದಲ ಖುಷಿ. ಇಲ್ಲಿ ಮಿಲನಾ ಅವರನ್ನು ಆಯ್ಕೆ ಮಾಡಿದ್ದು ಕ್ಲಿಕ್‌ ಆಗುತ್ತೇವೆ ಅಥವಾ ಹಿಟ್‌ ಜೋಡಿ ಎಂದಲ್ಲ. ಆ ಪಾತ್ರದ ಇಂಟೆನ್ಸ್‌ ಹಾಗಿತ್ತು. ಅದಕ್ಕೆ ಮಿಲನಾ ನ್ಯಾಯ ಒದಗಿಸಿದ್ದಾರೆ.

ಜೊತೆ ಯಾಗಿ ನಟಿಸುವ ಅವಕಾಶ ಬಂದಾಗ ಮೊದಲು ಖುಷಿ ಆಗೋದು ನೀವಾ, ಮಿಲನಾ ಅವರಾ? 

– ನನಗೆ ಹಿಟ್‌ ಸಿಕ್ಕಿರೋದು ಅವಳ ಜೊತೆ ನಟಿಸಿದಾಗ, ಅವಳಿಗೂ ಅಷ್ಟೇ, ಹಿಟ್‌ ಸಿಕ್ಕಿರೋದು ನನ್ನ ಜೊತೆ ನಟಿಸಿದಾಗ… ಹಾಗಾಗಿ, ಇಬ್ಬರೂ ಖುಷಿಯಾಗುತ್ತೇವೆ. “ಕೌಸಲ್ಯ ಸುಪ್ರಜಾ ರಾಮ’ದಂತಹ ಒಳ್ಳೆಯ ಕಥೆ ಸಿಕ್ಕಾಗ ಆ ಖುಷಿಯೇ ಬೇರೆ…

ಶೂಟಿಂಗ್‌ ಮುಗಿಸಿ ಮನೆಗೆ ಬಂದಾಗ ಮತ್ತೆ ಸಿನ್ಮಾ ಚರ್ಚೆ ಮಾಡುತ್ತೀರಾ?

Advertisement

– ಖಂಡಿತಾ, ಅದು ಶೂಟಿಂಗ್‌ ಹೋಗುವಾಗ, ಬರುವಾಗ.. ಮನೆಗೆ ಬಂದ ನಂತರವೂ ಚರ್ಚೆ ಮಾಡುತ್ತಲೇ ಇರುತ್ತೇವೆ. ಇಬ್ಬರ ಆಸಕ್ತಿ ಒಂದೇ ಆಗಿರುವುದರಿಂದ ಬೋರ್‌ ಆಗುವುದಿಲ್ಲ

“ಲವ್‌ ಮಾಕ್ಟೇಲ್‌-3′ ಎಲ್ಲಿಗೆ ಬಂತು?

– ಒಂದು ಹಂತದ ಬರವಣಿಗೆ ಮುಗಿದಿದೆ. ಸದ್ಯ “ಕೌಸಲ್ಯ’ ಸಿನಿಮಾ ದಲ್ಲಿ ಬಿಝಿಯಾಗಿರುವುದರಿಂದ ಆ ಕಡೆ ಹೆಚ್ಚು ಗಮನ ಕೊಟ್ಟಿಲ್ಲ

ನಿಮ್ಮ ಸ್ಟ್ರೆಂಥ್‌ ಯಾವುದು- ಆ್ಯಕ್ಟರ್‌, ಡೈರೆಕ್ಟರ್‌?

– ಬರೀ ನಟನೆ ಅಂದಾಗ ಹೆಚ್ಚು ರಿಸ್ಕ್ ಇರೋದಿಲ್ಲ. ಆದರೆ, ನಿರ್ದೇಶನದ ಜೊತೆಗೆ ನಟನೆ ಎಂದಾಗ ತಲೆಗೂ ಕೆಲಸ ಕೊಡಬೇಕಾಗುತ್ತದೆ. ಹಾಗಾಗಿ, ಡೈರೆಕ್ಟರ್‌ ನನ್ನ ಸ್ಟ್ರೆಂಥ್‌ ಎನ್ನಬಹುದು.

Advertisement

Udayavani is now on Telegram. Click here to join our channel and stay updated with the latest news.

Next