Advertisement

ಲವ್‌ ಮಾಕ್ಟೇಲ್‌ ಜೋಡಿ ಮದುವೆಗೆ ಮಿಲ್ಕಿ ಬ್ಯೂಟಿ ತಮನ್ನಾ

03:11 PM Jan 17, 2021 | Team Udayavani |

“ಲವ್‌ ಮಾಕ್ಟೇಲ್‌’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಸದ್ಯ ತಮ್ಮ ವಿವಾಹ ಆಮಂತ್ರಣ ಕಾರ್ಯದಲ್ಲಿ ಬಿಝಿಯಾಗಿದ್ದಾರೆ. ಇತ್ತೀಚೆಗೆ “ಲವ್‌ ಮಾಕ್ಟೇಲ್‌’ ತೆಲುಗು ರೀಮೇಕ್‌ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಕೃಷ್ಣ-ಮಿಲನಾ ಜೋಡಿ ಖುದ್ದಾಗಿ ಭೇಟಿ ನೀಡಿದ್ದರು.

Advertisement

ಈ ವೇಳೆ ತೆಲುಗು “ಲವ್‌ ಮಾಕ್ಟೇಲ್‌’ನಲ್ಲಿ ಅಭಿನಯಿಸುತ್ತಿರುವ ಮಿಲ್ಕಿ ಬ್ಯೂಟಿ ಖ್ಯಾತಿಯ ನಟಿ ತಮನ್ನಾ ಭಾಟಿಯಾ ಮತ್ತು ನಟ ಸತ್ಯದೇವ್‌ ಅವರನ್ನು ಮದುವೆಗೆ ಆಹ್ವಾನಿಸಿದ್ದಾರೆ.

ಇದನ್ನೂ ಓದಿ:ಬರ್ತ್‌ಡೇ ಬದಲು ಪುಣ್ಯದ ಕೆಲಸದಲ್ಲಿ ಕೈ ಜೋಡಿಸಿ: ದುನಿಯಾ ವಿಜಯ್‌ ಮನವಿ

ಇನ್ನು ತೆಲುಗಿನಲ್ಲಿ “ಲವ್‌ ಮಾಕ್ಟೇಲ್‌’ ಚಿತ್ರಕ್ಕೆ ನಾಗಶೇಖರ್‌ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್‌ ಭರದಿಂದ ನಡೆಯುತ್ತಿದ್ದು, ಇದೇ ವರ್ಷದ ಮಧ್ಯ ಭಾಗದಲ್ಲಿ ತೆಲುಗು “ಲವ್‌ ಮಾಕ್ಟೇಲ್‌’ ತೆರೆ ಕಾಣುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next