Advertisement

ಡಾರ್ಕ್ ನೆಟ್ ರಹಸ್ಯ ಜಾಲ : ಮಾದಕ ವಸ್ತು ಖರೀದಿ ಭಯೋತ್ಪಾದನೆಗೆ ಪ್ರೇರಕ ತಂತು

02:13 PM Dec 07, 2020 | Suhan S |

ಅಂತರ್ಜಾಲದ ಮೂಲಕ ಬೆರಳ ತುದಿಯಲ್ಲಿ ಇಡೀ ಪ್ರಪಂಚದ ವಿದ್ಯಾಮಾನಗಳನ್ನುಅರಿತು ಕೊಳ್ಳು ವಷ್ಟು ಜಗತ್ತು ಬೆಳೆದಿದೆ.ಇದೇ ಮಾಧ್ಯಮದ ಮೂಲಕ ಡಾರ್ಕ್‌ನೆಟ್‌ ಎಂಬ ಅಂತರ್ಜಾಲ ಮಾದಕ ವಸ್ತುಗಳು ಮಾರಾಟ,ಅಕ್ರಮ ದಂಧೆಗೆ ವೇದಿಕೆ ಸೃಷ್ಟಿಸಿದೆ. ಒಬ್ಬರಿಗೊಬ್ಬರು ಪರಿಚಯವೇ ಇಲ್ಲದೇ ವ್ಯವಹಾರ ನಡೆಸಲು ಅನುವು ಮಾಡಿ ಕೊಡುವ ಈ ವೆಬ್‌ಸೈಟ್‌ ಯುವ ಸಮೂಹ ಹಾದಿ ತಪ್ಪುವಂತೆ ಮಾಡುತ್ತಿದೆ. ಡ್ರಗ್ಸ್‌ಖರೀದಿ,ಭಯೋತ್ಪಾದನೆ ಕೃತ್ಯಕ್ಕೆ ನೆರವಾಗುತ್ತಿರುವ ಡಾರ್ಕ್‌ನೆಟ್‌ ವೆಬ್‌ಸೈಟ್‌ ಹಿಂದಿನ ರಹಸ್ಯದ ವಿವರ ಈ ವಾರದ ಸುದ್ದಿ ಸುತ್ತಾಟದಲ್ಲಿ.

Advertisement

“ಡಾರ್ಕ್‌ನೆಟ್‌’ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಅಂತರ್ಜಾಲ ಮಾಧ್ಯಮ. ಹೊರಜಗತ್ತಿನಲ್ಲಿ ಸಿಗದವಸ್ತುಗಳು, ಮಾಹಿತಿಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ. ಬಹುತೇಕ ಕಾನೂನು ಬಾಹಿರವಾಗಿಯೇ ನಡೆಯುವ ವೆಬ್‌ಸೈಟ್‌ ಸೈಬರ್‌ಕ್ರೈಂನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ವೆಬ್‌ಸೈಟ್‌ ಮೂಲಕ ಮಾದಕ ವಸ್ತು ಮಾರಾಟದಂಧೆಯಲ್ಲಿ ತೊಡಗಿರುವುದು ತನಿಖೆಯಲ್ಲಿ ಗೊತ್ತಾಗಿದೆ.ಅಲ್ಲದೆ, ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಭಯೋತ್ಪಾದನೆ ಪ್ರಕರಣಗಳ ಪೈಕಿ ಕೆಲವರು ಡಾರ್ಕ್‌ನೆಟ್‌ಮೂಲಕವೇ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದು,  ಶಸ್ತ್ರಾಸ್ತ್ರಗಳ ಪೂರೈಕೆ ಮಾಡುತ್ತಿದ್ದಾರೆ ಎಂಬುದು ಬಯಲಾಗಿದೆ.

ಡಾರ್ಕ್‌ನೆಟ್‌ ವೆಬ್‌ಸೈಟ್‌ ರಹಸ್ಯ?: ಕಾನೂನು ಬಾಹಿರ ಕೃತ್ಯಗಳ ನಡೆಸಲು ಹೆಚ್ಚು ಸೂಕ್ತ ಎನ್ನಿಸುವ ಡಾರ್ಕ್‌ನೆಟ್‌ ವೆಬ್‌ಸೈಟ್‌ ಬಳ ಸಲು ಸಾಮಾನ್ಯ ವ್ಯಕ್ತಿಗಳಿಂದ ಸಾಧ್ಯವಿಲ್ಲ. ಅದಕ್ಕಾಗಿ ತಾಂತ್ರಿಕವಾಗಿ ನೈಪುಣ್ಯತೆ ಹೊಂದಿರಬೇಕು. ಪ್ರತ್ಯೇಕ ಉಪಕರಣ ಗಳನ್ನು ಬಳಸಿಕೊಂಡು ವೆಬ್‌ಸೈಟ್‌ ಪ್ರವೇಶಿಸಬೇಕು.ಅದರಲ್ಲಿ ಅಕ್ರಮ ಚಟುವಟಿಕೆಗಳು ನಡೆಸಿದರೆ ಮೂಲ ವ್ಯಕ್ತಿಯ ಹೆಸರಾಗಲಿ, ಗುರುತು ಪತ್ತೆಯಾಗುವುದಿಲ್ಲ. ಯಾಕೆಂದರೆ ಹಣಕಾಸು ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಪರಸ್ಪರಪರಿಚಯ ಇರುವುದಿಲ್ಲ. ಕೇವಲ ಕೊಡು- ಕೊಳ್ಳುವಿಕೆಯಷ್ಟೇ ನಡೆಯುತ್ತದೆ. ಹೀಗಾಗಿ ಈ ಮೂಲಕವೇ ಡ್ರಗ್ಸ್‌ ಖರೀದಿ, ಮಾರಾಟ, ಭಯೋತ್ಪಾದನೆಗೆ ಬೇಕಾದ ಶಸ್ತ್ರಾಸ್ತ್ರಗಳ ಪೂರೈಕೆ, ಮಾರಾಟ ಮಾಡಲಾಗುತ್ತದೆ. ‌

ಜತೆಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ವೆಬ್‌ಸೈಟ್‌ ಹ್ಯಾಕಿಂಗ್‌ ಮಾಡಲು ಬೇಕಾದ ಸಾಫ್ಟ್ವೇರ್‌ ಕೂಡ ಇಲ್ಲಿ ಸಿಗುತ್ತದೆ. ಅದರಲ್ಲಿ ತಾಂತ್ರಿಕ ತಜ್ಞರು ಬಾಡಿಗೆಗೆ ಸಿಗುವುದ ರಿಂದ ಅಕ್ರಮ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ. ಜತೆಗೆ ಡಿಜಿಟಲ್‌(ಬಿಟ್‌ಕಾಯಿನ್‌/ಕ್ಪಿಪ್ಟೋಕರೆನ್ಸಿ) ಮೂಲಕ ವ್ಯವಹಾರ ನಡೆಸಿ ಪೊಲೀಸರಿಂದ ತಪ್ಪಿಸಿಕೊಳ್ಳಬಹುದು. ಮುಖ್ಯವಾಗಿ ದುಷ್ಕರ್ಮಿಗಳಿಗೆ ಇಲ್ಲಿ ಭದ್ರತೆ ಇರುತ್ತದೆ. ಅವರ ಖಾಸಗಿ ವಿವರಗಳುಎಂದಿಗೂ ಬಯಲಾಗುವುದಿಲ್ಲ. ಒಂದು ವೇಳೆ ಪೊಲೀಸರಿಂದ ಬಂಧನಕ್ಕೊಳಗಾದರೂ ಆರೋಪಿ ತನ್ನ ಹೆಸರನ್ನು ಬದಲಾಯಿಸಿ ವ್ಯವಹಾರ ನಡೆಸಿರುತ್ತಾನೆ.ಆತನಿಗೂ ತನ್ನೊಂದಿಗೆ ಯಾರೆಲ್ಲ ವ್ಯವಹಾರ ನಡೆಸಿದ್ದರೂ ಎಂಬುದು ತಿಳಿರುವುದಿಲ್ಲ.ಹೀಗಾಗಿಯೇ ಇದೇ ವೆಬ್‌ಸೈಟ್‌ ಮೂಲಕವೇ ಅಕ್ರಮ ಚಟುವಟಿಕೆ ನಡೆಸುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ ಸೈಬರ್‌ ತಜ್ಞೆ ಶುಭಮಂಗಳ.

ಇದನ್ನೂ ಓದಿ :ಗುರು-ಶಿಷ್ಯರ ಭೇಟಿ: ಬಹಳ ದಿನಗಳ ನಂತರ ವಿಧಾನಸೌಧದಲ್ಲಿ ಸಿದ್ದರಾಮಯ್ಯ- ಮುನಿರತ್ನ ಪಟ್ಟಾಂಗ!

Advertisement

ಶೇ.95ರಷ್ಟು ಬಳಕೆ: ಕೆಲ ವರ್ಷಗಳಿಂದ ಸಿಸಿಬಿ ಸೇರಿ ನಗರ ಪೊಲೀಸರಿಂದ ಬಂಧನಕ್ಕೊಳಗಾಗಿರುವಶೇ.95 ಆರೋಪಿಗಳು ಡಾರ್ಕ್‌ನೆಟ್‌ ಮೂಲಕವೇ ಮಾದಕ ವಸ್ತುವನ್ನು ವಿದೇಶಗಳಿಂದ ತರಿಸುತ್ತಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಇಂತಹ ಪ್ರಕರಣಗಳಲ್ಲಿ ಎಂಜಿನಿಯರ್‌ ವಿದ್ಯಾರ್ಥಿಗಳು, ಟೆಕ್ಕಿಗಳೇ ಈ ದಂಧೆಯಲ್ಲಿ ತೊಡಗಿದ್ದಾರೆ.

ಇತ್ತೀಚೆಗೆ ಬಂಧನಕ್ಕೊಳಗಾದ ಅಂತಾರಾಷ್ಟ್ರೀಯ ಹ್ಯಾಕರ್ಸ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಕೂಡ ಡಾರ್ಕ್‌ನೆಟ್‌ ಮೂಲಕ ವ್ಯವಹಾರ ನಡೆಸುತ್ತಿದ್ದ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಫೇಸ್‌ಬುಕ್‌, ಆ್ಯಪ್‌ಗಳ ಮೂಲಕ ಭಯೋತ್ಪಾದನೆ ಚಟುವಟಿಕೆಗಳು ನಡೆಸುತ್ತಿದ್ದ ಉಗ್ರ ಸಂಘಟನೆಗಳ ಸದಸ್ಯರೂ ಡಾರ್ಕ್‌ನೆಟ್‌ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ.

ಖರೀದಿಸಿದವರ ಪತ್ತೆ ಬಹಳ ಕಷ್ಟ :

ಇತ್ತೀಚಿನ ದಿನಗಳಲ್ಲಿ ಬಹುತೇಕ ಡ್ರಗ್ಸ್‌ ಪೆಡ್ಲರ್‌ಗಳು ಡಾರ್ಕ್‌ನೆಟ್‌ ವೆಬ್‌ಸೈಟ್‌ ಮೂಲಕವೇ ಮಾದಕ ವಸ್ತುಖರೀದಿ ಮಾಡುತ್ತಿದ್ದಾರೆ. ಆರೋಪಿಗಳ ಮೂಲ ಹೆಸರು ಉಲ್ಲೇಖೀಸದೆ ದಂಧೆ ನಡೆಸುವುದರಿಂದ ಆರೋಪಿಗಳುಯಾರ ಸಂಪರ್ಕದಲ್ಲಿದ್ದರು ಎಂಬುದು ಪತ್ತೆ ಯಾಗುವುದಿಲ್ಲ. ವಸ್ತು ಮಾರಾಟ ಮಾಡುವಾಗಷ್ಟೇ ಆರೋಪಿಗಳು ಸಿಕ್ಕಿಬಿಳುತ್ತಿದ್ದು, ಅವರ ವಿಚಾರಣೆಯಲ್ಲಿ ಡಾರ್ಕ್‌ನೆಟ್‌ ವೆಬ್‌ಸೈಟ್‌ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಅದು ಹೊರತು ಪಡಿಸಿ ಪೊಲೀಸ್‌ ಇಲಾಖೆಯೇ ನೇರವಾಗಿ ಡಾರ್ಕ್‌ನೆಟ್‌ ವೆಬ್‌ಸೈಟ್‌ ಸರ್ಜ್‌ ಮಾಡಲು ಸಾಧ್ಯವಿಲ್ಲ.ಎಷ್ಟೇ ತಾಂತ್ರಿಕವಾಗಿ ಕೆಲಸಮಾಡಿದರೂ ಡಾರ್ಕ್‌ನೆಟ್‌ವೆಬ್‌ಸೈಟ್‌ನಲ್ಲಿ ಶೋಧ ನಡೆಸಲು ಸಾಧ್ಯವಿಲ್ಲ. ಹೀಗಾಗಿಇಂತಹ ಪ್ರಕರಣಗಳಪತ್ತೆಕಾರ್ಯಬಹಳ ಕಷ್ಟದಾಯಕವಾಗಿರುತ್ತದೆಎನ್ನುತ್ತಾರೆ ಪೊಲೀಸರು.

ಹ್ಯಾಕಿಂಗ್‌ ಸಾಫ್ಟ್ ವೇರ್‌ ಪಡೆದಭೂಪ : ಕೈಗೆ ಸಿಕ್ಕಿಬಿದ್ದ ಜಾರ್ಖಂಡ್‌ ಮೂಲದ ಗುಲಾಮ್‌ ಮುಸ್ತಫಾ ಕೂಡ ಡಾರ್ಕ್‌ನೆಟ್‌ ಮೂಲಕಲೇ ಹ್ಯಾಕಿಂಗ್‌ ಸಾಫ್ಟ್ವೇರ್‌ ಪಡೆದುಕೊಂಡಿದ್ದ ಎಂಬುದು ಗೊತ್ತಾಗಿದೆ. ಐದಾರು ತಿಂಗಳ ಹಿಂದೆ ನಗರದ ಪ್ರತಿಷ್ಠಿತ ಆಸ್ಪತ್ರೆ ವೈದ್ಯ ರೆಹಮಾನ್‌ಕೂಡ ಈ ವೆಬ್‌ಸೈಟ್‌ ಶೋಧಿಸಿದ್ದ ಎಂಬುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಪ್ರತ್ಯೇಕ ಸಚಿವಾಲಯದ ಅಗತ್ಯ : ದೇಶದಲ್ಲಿ ಬೇರೆ ಬೇರೆ ವಿಚಾರಗಳು, ವಿಷಯಗಳಿಗೆ ಸಚಿವಾಲಯಗಳಿವೆ. ಆದರೆ, ಇದುವರೆಗೂ ಸೈಬರ್‌ ನಿರ್ವಹಣೆಕುರಿತಯಾವೊಂದು ಸಚಿವಾಲಯ ಇಲ್ಲ. ಶೀಘ್ರದಲ್ಲೇ ಸೈಬರ್‌ ಸಚಿವಾಲಯ ಆಗಬೇಕಿದೆ. ಈ ಮೂಲಕ ನಿತ್ಯ ಬಳಸುವ ಇಂಟರ್‌ ನೆಟ್‌ ಜತೆಗೆ ದೇಶದ ಸೈಬರ್‌ಕ್ರೈಂ ನಿಯಂತ್ರಣ ಮಾಡಬಹುದು. ಅಮೆರಿಕಾದ ಸೇರಿ ಕೆಲವೇ ರಾಷ್ಟ್ರಗಳು ಮಾತ್ರ ಡಾರ್ಕ್‌ನೆಟ್‌ ನಿರ್ವಹಣೆ ಮಾಡುತ್ತಿವೆ. ಅದೇ ರೀತಿ ನಮ್ಮ ದೇಶದಲ್ಲೂ ನಿರ್ವಹಣೆ ಬೇಕೆದೆ ಎಂದು ಸೈಬರ್‌ ತಜ್ಞೆ ಶುಭಮಂಗಳ ಅಭಿಪ್ರಾಯ ಪಡುತ್ತಾರೆ.

ಎಲ್ಲವೂ ಮಾರಾಟ :

ಇಡೀ ದೇಶವೇ ಬಳಸುತ್ತಿರುವ ಇಂಟರ್‌ನೆಟ್‌ ಶೇ.1ರಷ್ಟು ಮಾತ್ರ.ಇನ್ನುಳಿದ ಶೇ.99ರಷ್ಟುಇಂಟರ್‌ನೆಟ್‌ ಡಾರ್ಕ್‌ ವೆಬ್‌ ಮತ್ತು ಡಿಪ್‌ವೆಬ್‌ನಲ್ಲಿ ಬಳಕೆಯಲ್ಲಿದೆ. ಸಾಮಾನ್ಯ ಇಂಟರ್‌ನೆಟ್‌ಹೊರತು ಪಡಿಸಿದರೆ,ಡಾರ್ಕ್‌ವೆಬ್‌ ಮೊದಲಹಂತವಾದರೆ, ಎರಡನೇ ಹಂತದಲ್ಲಿಡಿಪ್‌ ವೆಬ್‌ ಎಂದು ಗುರುತಿಸಬಹುದು. ಡಾರ್ಕ್‌ನೆಟ್‌ ವೆಬ್‌ ಸೈಟ್‌ನಲ್ಲಿ ಕೇವಲ ಡ್ರಗ್ಸ್‌, ಶಸ್ತ್ರಾಸ್ತ್ರಗಳು ಮಾತ್ರವಲ್ಲ. ನಿರ್ದಿಷ್ಟ ವ್ಯಕ್ತಿಯ ಬ್ಯಾಂಕ್‌ ವಿವರಗಳು, ಕ್ರಿಡಿಟ್‌,ಡೆಬಿಟ್‌ ಕಾರ್ಡ್‌ಗಳ ವಿವರಗಳು ಸಿಗುತ್ತವೆ. ಬ್ಯಾಂಕ್‌ ಗ್ರಾಹಕರ ವಿವರಗಳನ್ನುಕಳವು ಮಾಡುವ ಹ್ಯಾಕರ್ಸ್‌ಗಳು ಅವುಗಳನ್ನು ಲಕ್ಷಾಂತರ ರೂ.ಗೆಹರಾಜುಪ್ರಕ್ರಿಯೆಲ್ಲಿ ಮಾರಾಟಮಾಡುತ್ತಾರೆ. ಜತೆಗೆ ಅಶ್ಲೀಲ ವಿಡಿಯೋಗಳು, ಅಂಗಾಂಗಳ ಮಾರಾಟ, ಗೂಂಡಾಗಳ ಖರೀದಿ, ವೈದಕೀಯ ತಪಾಸಣೆಹೀಗೆ ಎಲ್ಲ ರೀತಿಯವ್ಯವಹಾರ ನಡೆಯುತ್ತದೆ. ಸಣ್ಣ ಗುಂಡುಪಿನ್‌ನಿಂದ ಹಿಡಿದು ಮಿಸೈಲ್‌ ವರೆಗೂ ಈ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಲ್ಲದೆ, ಗೂಗಲ್‌ ಸರ್ಜ್‌ ಎಂಜಿನ್‌ ಮೂಲಕ ಡಾರ್ಕ್‌ನೆಟ್‌ ಪ್ರವೇಶಿಸಲು ಸಾಧ್ಯವಿಲ್ಲ.ಇದೊಂದು ಸಂಗ್ರಹಾರ. ಪಾಯಿಂಟು ಪಾಯಿಂಟ್‌ ಸಂಪರ್ಕಇರುತ್ತದೆ ಎಂದು ಸೈಬರ್‌ ತಜ್ಞರು ಹೇಳುತ್ತಾರೆ.

ಡಾರ್ಕ್‌ನೆಟ್‌: ಮಾದಕ ವಸ್ತುಖರೀದಿ,ಬಂಧನ ಪ್ರಕರಣಗಳು :

 

  • ಎನ್‌ಸಿಬಿ ಅಧಿಕಾರಿಗಳಿಂದ ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್‌ಖರೀದಿಸಿ ಸ್ಯಾಂಡಲ್‌ವುಡ್‌ ನಟ, ನಟಿಯರಿಗೆ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಅನಿಕಾ, ಅನೂಪ್‌ ಸೇರಿ ಸೇರಿ ನಾಲ್ವರ ಬಂಧನ.
  • ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಕೆಲ ಆರೋಪಿ ಗಳು ಡಾರ್ಕ್‌ ನೆಟ್‌ ವೆಬ್‌ ಸೈಟ್‌ಮೂಲಕವೇ ಡ್ರಗ್ಸ್‌ ಅನ್ನುವಿದೇಶದಿಂತತರಿಸುತ್ತಿದ್ದರು.ಇದೇ ಪ್ರಕರಣದಲ್ಲಿ ನಟಿಸಂಜನಾ ಗಲ್ರಾನಿ, ರಾಗಿಣಿ, ಮಾಡೆಲ್‌ ನಿಯಾಜ್‌ ಮೊಹಮ್ಮದ್‌ ಸೇರಿ 15 ಮಂದಿ ಬಂಧಿಸಲಾಗಿದೆ.
  • ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ ಮತ್ತು ಇತರೆ 9 ಮಂದಿಯನ್ನು ಸಿಸಿಬಿ ಮತ್ತು ದಕ್ಷಿಣ ವಿಭಾಗ ಪೊಲೀಸರು ಬಂಧಿಸಿದ್ದರು.ಈ ಆರೋಪಿಗಳು ಡಾರ್ಕ್‌ ನೆಟ್‌ ವೆಬ್‌ಸೈಟ್‌ ಮೂಲಕವೇ ಡ್ರಗ್ಸ್ ಖರೀದಿಸುತ್ತಿದ್ದರು. ಈ ಪೈಕಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯೇ ಡಾರ್ಕ್‌ನೆಟ್‌ ವೆಬ್‌ ಸೈಟ್‌ ಮೂಲಕ ಇತರ ಆರೋಪಿಗಳಿಗೆ ಡ್ರಗ್ಸ್ ತರಿಸುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
  • ಪೂರ್ವವಿಭಾಗ ಪೊಲೀಸರ ಕಾರ್ಯಾಚರಣೆಯಲ್ಲಿ 11 ಮಂದಿ ಡ್ರಗ್ಸ್‌ ಪೆಡ್ಲರ್‌ಗಳ ಬಂಧಿಸಲಾಗಿತ್ತು. ಎಲ್ಲರೂ ಡಾರ್ಕ್‌ನೆಟ್‌ ವೆಬ್‌ಸೈಟ್‌ಮೂಲಕವೇ ಡ್ರಗ್ಸ್‌ಖರೀದಿಸುತ್ತಿದ್ದರು.
  • ಎನ್‌ಸಿಬಿ ಅಧಿಕಾರಿಗಳಿಂದ ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್‌ಖರೀದಿಸಿ ರಾಜ್ಯದ ಪ್ರತಿಷ್ಠಿತವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಮಹಿಳೆ ಸೇರಿ ನಾಲ್ವರ ಬಂಧನ.
  • ಸಿಸಿಬಿ ಪೊಲೀಸರಿಂದ ಡಾರ್ಕ್‌ನೆಟ್‌ ವೆಬ್‌ ಸೈಟ್‌ನಲ್ಲಿ ನೆದರ್‌ಲ್ಯಾಂಡ್‌ ನಿಂದ ಡ್ರಗ್ಸ್‌ ಖರೀದಿ- ಕೇರಳ ಮೂಲದ ರಾಬೀನ್‌ ಎಂಬಾತನ ಬಂಧನ
  • ಸಿಸಿಬಿಪೊಲೀಸರಿಂದ ಡಾರ್ಕ್‌ನೆಟ್‌ ವೆಬ್‌ ಸೈಟ್‌ನಲ್ಲಿ ಪೋಲ್ಯಾಂ ಡ್‌ನಿಂದ ಡ್ರಗ್ಸ್‌ ಖರೀದಿ- ರಾಹುಲ್‌ ಮತ್ತು ದರ್ಶನ್‌ ಎಂಬವರ ಬಂಧನ.
  • ಸಿಸಿಬಿ ಪೊಲೀಸರಿಂದ ವಿದೇಶದಿಂದ ಹೈಡ್ರೋ ಗಾಂಜಾ ಬೀಜ ತಂದು ಮನೆಯಲ್ಲಿ ಗಾಂಜಾ ಬೆಳೆಯುತ್ತಿದ್ದ ಮೂವರು ಆರೋಪಿಗಳ ಬಂಧನ

ಮಾದಕ ವಸ್ತು ಮಾರಾಟ ಜಾಲ ನಗರದಲ್ಲಿ ವಿಸ್ತರಿಸಿಕೊಂಡಿದ್ದು,ಈ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ ಪೊಲೀಸರು ಮಾತ್ರವಲ್ಲ. ಸ್ಥಳೀಯ ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಹುತೇಕ ಆರೋಪಿಗಳು ಡಾರ್ಕ್‌ನೆಟ್‌ ವೆಬ್‌ಸೈಟ್‌ ಮೂಲಕವೇ ಡ್ರಗ್ಸ್‌ಖರೀದಿ ಮಾಡುತ್ತಿರುವುದು ಬೆಳಕಿಗೆಬಂದಿದೆ. ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

 

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next