ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ. ಮೂರು ವರ್ಷದ ಮಗು ಸಂಜನಾ ಅಚ್ಚರಿ ಎನ್ನುವಂತೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
Advertisement
ತಮಿಳುನಾಡು ಮೂಲದ ಶರವಣ (34), ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದ ಅವರ ಪತ್ನಿ ಅಶ್ವಿನಿ (27), ರವಿಚಂದ್ರನ್ (45), ಕಲಾವತಿ(68), ಮಾಲಾಶ್ರೀ(25), ಪ್ರಸಾದ್(18) ಪವನ್ ಕಲ್ಯಾಣ್(19) ಸಾವನ್ನಪ್ಪಿದವರು. ಶರವಣ ದಂಪತಿಯ ಪುತ್ರಿ ಸಂಜನಾ (3) ಸೇರಿದಂತೆ ಪ್ರಿಯಾ(12), ಜಾನಕಿ(31), ಚಿತ್ರ(42), ಅಶೋಕನ್ (5), ದಿಲೀಪ್(18), ಆಶಾ(21) ಗಾಯಗೊಂಡಿದ್ದು, ಸೇಂಟ್ μಲೋಮಿನಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಪೈಕಿ ಜಾನಕಿ ಮತ್ತು ಸಂಜನಾಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮೃತರ ಪೈಕಿ ಕೆಲವರು ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ನಾಗರಿಕ ರಕ್ಷಣಾ ಪಡೆ, ಹಾಗೂ ಇತರೆ ರಕ್ಷಣಾ ಪಡೆಗಳು ಸತತ 7 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿವೆ. ಈ ಮಧ್ಯೆ ಕಟ್ಟಡದ ಮಾಲೀಕ ಗುಣೇಶ್ ಅಲಿಯಾಸ್ ಸಂಪತ್ ಪಾರಾರಿಯಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ನೋಟಿಸ್ ನೀಡಿದ್ದರೂ ವಾಸಕ್ಕೆ ಬಾಡಿಗೆ ನೀಡಿದ್ದರು ಎನ್ನಲಾಗಿದೆ. ಗಾಬರಿ ಹುಟ್ಟಿಸಿದ ಘಟನೆ: ಈಜೀಪುರದ ಗುಂಡಪ್ಪ ಲೇಔಟ್‌ನ 7ನೇ ಕ್ರಾಸ್‌ನಲ್ಲಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ ಮುಂಜಾನೆ 6.45ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಗೋಡೆ ರಸ್ತೆ ಬದಿಯ ವಿದ್ಯುತ್ ಕಂಬದ ಮೇಲೂ ಬಿದ್ದಿದ್ದು, ಇದರಿಂದ ಶಾರ್ಟ್ ಸರ್ಕ್ನೂಟ್ ಉಂಟಾಗಿದೆ.
Related Articles
ದೇಹಗಳನ್ನು ಹೊರಗೆ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
7 ಗಂಟೆ ಕಾರ್ಯಾಚರಣೆ: ಸುಮಾರು 7.30ರ ಸುಮಾರಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ, ನಾಗರಿಕ ರಕ್ಷಣಾ ಪಡೆ, ಎನ್‌ಡಿಆರ್‌ಎಫ್, ಪೌರರಕ್ಷಣಾ ದಳಗಳ ಒಟ್ಟು 30ಕ್ಕೂ ಅಧಿಕ ಸಿಬ್ಬಂದಿ ಮಧ್ಯಾಹ್ನ 2.30ರವರೆಗೆ 7 ಗಂಟೆ ಕಾರ್ಯಾಚರಣೆ ನಡೆಸಿದರು. ಕಬ್ಬಿಣ ಸರಳುಗಳನ್ನು ಬಿಡಿಸಲು ಒಂದು ಜೆಸಿಬಿ, ಗ್ಯಾಸ್ ಕಟರ್‌ಗಳನ್ನು ಬಳಸಲಾಯಿತು. ಅವಶೇಷಗಳನ್ನು ಪುಡಿಮಾಡಿ ಸಾವನ್ನಪ್ಪಿದ ನಾಲ್ಕು ಮಂದಿ ಮೃತದೇಹ ಹೊರ ತೆಗೆದರು. ಇದೇ ವೇಳೆ ಕಟ್ಟಡದ ಅವಶೇಷಗಳಡಿ ಸಿಲುಕಿ ಸಾವು-ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಮೂರು ವರ್ಷದ ಸಂಜನಾಳನ್ನು ಸುರಕ್ಷಿತವಾಗಿ ಹೊರ ತೆಗೆಯಲಾಯಿತು ಎಂದು ಅಗ್ನಿ ಶಾಮಕ ದಳದ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದರು.
ಅವಶೇಷಗಳ ತೆರವು ಕಾರ್ಯಾಚಣೆ ವೇಳೆ ಹಳೆಯ ಡಬ್ಬಗಳು, ಗ್ಯಾಸ್ ಒಲೆ, ಪ್ಲಾಸ್ಟಿಕ್ ಕವರ್, ಪಟಾಕಿ, ಸ್ಪೀಕರ್ ಬಾಕ್ಸ್‌ಗಳು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ಪರಿಶೀಲಿಸಲಾಯಿತು. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ. ಎಲ್ಲಾ ಮೃತದೇಹಗಳು ಮತ್ತು ಗಾಯಗೊಂಡವರನ್ನು ಹೊರತೆಗೆದ ಬಳಿಕವೂ ಅವಶೇಷಗಳಡಿ ಇನ್ನಷ್ಟು ಮಂದಿ ಇರಬಹುದು ಎಂಬ ಅನುಮಾನದಿಂದ ರಕ್ಷಣಾ ಸಿಬ್ಬಂದಿ ಮತ್ತೂಮ್ಮೆ ಶ್ವಾನದಳದ ನೆರವಿನಿಂದ ತಪಾಸಣೆ ಮಾಡಿದರು.
ಘಟನಾ ಸ್ಥಳಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಸಂಪತ್‌ರಾಜ್, ಶಾಸಕ ಎನ್.ಎ.ಹ್ಯಾರಿಸ್, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತಾ ಸೇರಿದಂತೆ ಹಿರಿಯ ಅಧಿಕಾರಗಳು ಭೇಟಿ ನೀಡಿದ್ದರು.
5 ಲಕ್ಷ ರೂ. ಪರಿಹಾರಕಟ್ಟಡ ಕುಸಿದ ಸ್ಥಳಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ತಲಾ ಐದು ಲಕ್ಷ ರೂ.ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಗೊಂಡವರಿಗೆ 50 ಸಾವಿರ ಪರಿಹಾರ ನೀಡುವುದಾಗಿ ತಿಳಿಸಿದರು. ಘಟನೆಯಲ್ಲಿ ಬದುಕುಳಿದಿರುವ ಮೂರು ವರ್ಷದ ಬಾಲಕಿ ಸಂಜನಾಳ ವಿದ್ಯಾಭ್ಯಾಸ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು. ಘಟನೆ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿದರು.